ತಬ್ಲೀಘಿ ಜಮಾತ್ ಕೊರೋನಾ ವೈರಸ್ ಹರಡುತ್ತಿದೆಯೆಂದು ಆರೋಪಿಸಿದ್ದ ಯುವಕನಿಗೆ ಗುಂಡಿಟ್ಟು ಹತ್ಯೆ!

ಉತ್ತರಪ್ರದೇಶದಲ್ಲಿ ತಬ್ಲೀಘಿ ಜಮಾತ್ ನಲ್ಲಿ ಭಾಗವಹಿಸಿದ್ದವರನ್ನು ಪತ್ತೆ ಹಚ್ಚಲು ಯೋಗಿ ಆದಿತ್ಯನಾಥ್ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದ್ದರೂ ತಬ್ಲೀಘಿ ಜಮಾತ್ ಕೊರೋನಾ ವೈರಸ್ ಅನ್ನು ಹರಡುತ್ತಿದೆ ಎಂದು ಆರೋಪಿಸಿದ್ದ ಯುವಕನನ್ನು ಆಗಂತುಕರು ಗುಂಡಿಟ್ಟು ಹತ್ಯೆ ಮಾಡಿದ್ದಾರೆ.
ತಬ್ಲೀಘಿ ಜಮಾತ್
ತಬ್ಲೀಘಿ ಜಮಾತ್
Updated on: 

ಲಖನೌ: ಉತ್ತರಪ್ರದೇಶದಲ್ಲಿ ತಬ್ಲೀಘಿ ಜಮಾತ್ ನಲ್ಲಿ ಭಾಗವಹಿಸಿದ್ದವರನ್ನು ಪತ್ತೆ ಹಚ್ಚಲು ಯೋಗಿ ಆದಿತ್ಯನಾಥ್ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದ್ದರೂ ತಬ್ಲೀಘಿ ಜಮಾತ್ ಕೊರೋನಾ ವೈರಸ್ ಅನ್ನು ಹರಡುತ್ತಿದೆ ಎಂದು ಆರೋಪಿಸಿದ್ದ ಯುವಕನನ್ನು ಆಗಂತುಕರು ಗುಂಡಿಟ್ಟು ಹತ್ಯೆ ಮಾಡಿದ್ದಾರೆ. 

ಪ್ರಯಾಗರಾಜ್ ನಲ್ಲಿ 29 ವರ್ಷದ ಯುವಕನನ್ನು ಆತನ ಮನೆ ಮುಂದೆಯೆ ಗುಂಡಿಟ್ಟು ಹತ್ಯೆ ಮಾಡಿ ಪರಾರಿಯಾಗಿದ್ದಾರೆ. ಈ ಸಂಬಂಧ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. 

ಈ ಘಟನೆ ಬಗ್ಗೆ ಆತಂಕ ವ್ಯಕ್ತಪಡಿಸಿದ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ರಾಷ್ಟ್ರೀಯ ಭದ್ರತೆ ಕಾಯ್ದೆಯಡಿ ಪ್ರಕರಣ ದಾಖಲಿಸುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ. ಜೊತೆಗೆ ಮೃತನ ಕುಟಂಬಕ್ಕೆ 5 ಲಕ್ಷ ರುಪಾಯಿ ಪರಿಹಾರ ಘೋಷಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com