ಕೊರೋನಾ ಸೋಂಕಿತ ಪ್ರಕರಣಗಳ ಕೇಂದ್ರಬಿಂದು ಮುಂಬೈ; ಮಹಾರಾಷ್ಟ್ರದಲ್ಲಿ 748 ಮಂದಿ ಕೊರೋನಾ ಪೀಡಿತರು

ಮಹಾರಾಷ್ಟ್ರ ರಾಜ್ಯದಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಿರುವಂತೆ ತುರ್ತು ಸಮಯ ಎದುರಿಸಲು ಬೃಹನ್ ಮುಂಬೈ ಮಹಾನಗರ ಪಾಲಿಕೆ ಮುಂಬೈಯಾದ್ಯಂತ ಅನೇಕ ಆಸ್ಪತ್ರೆಗಳು, ಹೊಟೇಲ್ ಗಳು, ಕಟ್ಟಡಗಳು, ಸಭಾಂಗಣಗಳಲ್ಲಿ ಕೊರೋನಾ ಶಂಕಿತರು ಮತ್ತು ಕೊರೋನಾ ಪೀಡಿತ ರೋಗಿಗಳಿಗೆ ಚಿಕಿತ್ಸೆಗಾಗಿ ಸುಮಾರು 5 ಸಾವಿರ ಬೆಡ್ ಗಳನ್ನು ಮೀಸಲಿರಿಸಿದೆ.
ಲಾಕ್ ಡೌನ್ ಮಧ್ಯೆ ಮನೆಯ ಕಿಟಕಿ ಮೂಲಕ ಹೊರಗೆ ವೀಕ್ಷಿಸುತ್ತಿರುವ ಮುಂಬೈ ಕೊಳಗೇರಿಯ ಮನೆಯೊಂದರ ವ್ಯಕ್ತಿ
ಲಾಕ್ ಡೌನ್ ಮಧ್ಯೆ ಮನೆಯ ಕಿಟಕಿ ಮೂಲಕ ಹೊರಗೆ ವೀಕ್ಷಿಸುತ್ತಿರುವ ಮುಂಬೈ ಕೊಳಗೇರಿಯ ಮನೆಯೊಂದರ ವ್ಯಕ್ತಿ

ಮುಂಬೈ: ಮಹಾರಾಷ್ಟ್ರ ರಾಜ್ಯದಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಿರುವಂತೆ ತುರ್ತು ಸಮಯ ಎದುರಿಸಲು ಬೃಹನ್ ಮುಂಬೈ ಮಹಾನಗರ ಪಾಲಿಕೆ ಮುಂಬೈಯಾದ್ಯಂತ ಅನೇಕ ಆಸ್ಪತ್ರೆಗಳು, ಹೊಟೇಲ್ ಗಳು, ಕಟ್ಟಡಗಳು, ಸಭಾಂಗಣಗಳಲ್ಲಿ ಕೊರೋನಾ ಶಂಕಿತರು ಮತ್ತು ಕೊರೋನಾ ಪೀಡಿತ ರೋಗಿಗಳಿಗೆ ಚಿಕಿತ್ಸೆಗಾಗಿ ಸುಮಾರು 5 ಸಾವಿರ ಬೆಡ್ ಗಳನ್ನು ಮೀಸಲಿರಿಸಿದೆ.

ಮಹಾರಾಷ್ಟ್ರ ರಾಜ್ಯದಲ್ಲಿ ಕೊರೋನಾ ಪೀಡಿತರ ಸಂಖ್ಯೆ 748ಕ್ಕೇರಿದೆ. ಅವರಲ್ಲಿ ಮುಂಬೈಯಲ್ಲಿ ಅತಿ ಹೆಚ್ಚು ಮಂದಿ ಇದ್ದು ಇಲ್ಲಿ ಈ ಸಂಖ್ಯೆ 433 ಆಗಿದೆ. ಇದುವರೆಗೆ 30 ಮಂದಿ ರಾಜ್ಯದಲ್ಲಿ ಮೃತಪಟ್ಟಿದ್ದಾರೆ.

ಮುಂಬೈ ಕೊರೋನಾ ಪೀಡಿತ ಪ್ರದೇಶವಾಗಿ ಮಾರ್ಪಟ್ಟಿದೆ. ಮುಂಬೈ ಮಹಾನಗರ ಪಾಲಿಕೆ ಅಂಕಿಅಂಶ ಪ್ರಕಾರ, ಮಲಬಾರ್ ಹಿಲ್ಸ್, ಪೆಡ್ಡರ್ ರಸ್ತೆ, ವೊರ್ಲಿ, ದಾದಾರ್ ಗಳಲ್ಲಿ ಹೆಚ್ಚು ಕೊರೋನಾ ಸೋಂಕಿತರು ವರದಿಯಾಗಿದ್ದಾರೆ. ಮುಂಬೈ ಕೊಳಗೇರಿ ಪ್ರದೇಶಗಳಾದ ಧಾರಾವಿ, ಕುರ್ಲಾ, ಬೈಕುಲ್ಲಾ, ಅಂಧೇರಿ, ಮಾಲಾಡ್, ಮಾಲ್ವಾನಿ, ಮುಲುಂದ್, ಘಟ್ಕೋಪಾರ್ ಪ್ರದೇಶಗಳಲ್ಲಿ ಕೂಡ ಕೊರೋನಾ ಸೋಂಕಿತರ ಸಂಖ್ಯೆ ಜಾಸ್ತಿಯಾಗುತ್ತಿದೆ.

ಮುಂಬೈಯಲ್ಲಿ 211 ಕೊರೋನಾ ಸೋಂಕಿತ ಪ್ರದೇಶಗಳಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com