ಭಾರತವು Hydroxychloroquine ನಿಮಗೆ ಮಾರಲು ನಿರ್ಧರಿಸಿದಾಗಷ್ಟೇ ಅದು ನಿಮ್ಮದಾಗುತ್ತದೆ: ಟ್ರಂಪ್ ವಿರುದ್ಧ ಶಶಿ ತರೂರ್ ವಾಗ್ದಾಳಿ

ಭಾರತ ಸರ್ಕಾರ ಅಮೆರಿಕಕ್ಕೆ Hydroxychloroquine ಔಷಧಿ ರಫ್ತು ಮಾಡದೆ ಹೋದಲ್ಲಿ ಅಮೆರಿಕ ಇದಕ್ಕೆ ತಕ್ಕ ಉತ್ತರ ನೀಡಲಿದೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಎಚ್ಚರಿಕೆಗೆ ಕಾಂಗ್ರೆಸ್ ನಾಯಕ, ತಿರುವನಂತಪುರಂ ಸಂಸದರಾದ ಶಶಿ ತರೂರ್ ತಿರುಗೇಟು ಕೊಟ್ಟಿದ್ದಾರೆ.
ಶಶಿ ತರೂರ್
ಶಶಿ ತರೂರ್
Updated on

ತಿರುವನಂತಪುರಂ: ಭಾರತ ಸರ್ಕಾರ ಅಮೆರಿಕಕ್ಕೆ Hydroxychloroquine ಔಷಧಿ ರಫ್ತು ಮಾಡದೆ ಹೋದಲ್ಲಿ ಅಮೆರಿಕ ಇದಕ್ಕೆ ತಕ್ಕ ಉತ್ತರ ನೀಡಲಿದೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಎಚ್ಚರಿಕೆಗೆ ಕಾಂಗ್ರೆಸ್ ನಾಯಕ, ತಿರುವನಂತಪುರಂ ಸಂಸದರಾದ ಶಶಿ ತರೂರ್ ತಿರುಗೇಟು ಕೊಟ್ಟಿದ್ದಾರೆ.

"ಜಾಗತಿಕ ವ್ಯವಹಾರಗಳ ಕ್ಷೇತ್ರದ ನನ್ನ ಹಲವು ದಶಕಗಳ ಅನುಭವದಲ್ಲಿ ಒಂದು ರಾಷ್ಟ್ರದ ಮುಖ್ಯಸ್ಥ ಅಥವಾ ಸರ್ಕಾರ ಈ ರೀತಿಯ ಇನ್ನೊಬ್ಬರಿಗೆ ಬಹಿರಂಗವಾಗಿ ಬೆದರಿಕೆ ಹಾಕಿದ್ದನ್ನು ಕೇಳಿಲ್ಲ. ಭಾರತದ Hydroxychloroquine "ನಮಗೆ ಪೂರೈಸಿ" ಎಂದರೆ ಏನರ್ಥ?. ಭಾರತವು ಅದನ್ನು ನಿಮಗೆ ಮಾರಾಟ ಮಾಡಲು ನಿರ್ಧರಿಸಿದಾಗ ಮಾತ್ರವೇ ಅದು ನಿಮ್ಮದಾಗಲಿದೆ" ತರೂರ್ ಹೇಳಿದ್ದಾರೆ.

ಕೊರೋನಾವೈರಸ್ ರೋಗಿಗಳ ಚಿಕಿತ್ಸೆಯಲ್ಲಿ ಬಳಸಲಾಗುವ ಮಲೇರಿಯಾ ವಿರೋಧಿ ಔಷದವಾದ Hydroxychloroquine ಅನ್ನು ತಮಗೆರಫ್ತು ಮಾಡದಿದ್ದಲ್ಲಿ ತಕ್ಕ ಪರಿಣಾಮ ಎದುರಿಸಬೇಕಾಗುವುದು ಎಂಬ ಅಮೆರಿಕ ಅಧ್ಯಕ್ಷ ಎಚ್ಚರಿಕೆ ನೀಡಿದ್ದಾರೆ.ಕೊರೋನಾವೈರಸ್  ಟಾಸ್ಕ್ ಫೋರ್ಸ್ ಬ್ರೀಫಿಂಗ್ ಸಮಯದಲ್ಲಿ ಶ್ವೇತಭವನದಿಂದ ಟ್ರಂಪ್ ಮಾತನಾಡುತ್ತಾ ಭಾರತ ಅಮೆರಿಕದೊಡನೆ ಉತ್ತಮ ಬಾಂಧವ್ಯ ಹೊಂದಿದೆ ಆದರೆ ಔಷದಗಳ ಬಗೆಗಿನ ನಮ್ಮ ಆದೇಶವನ್ನು ಭಾರತವೇಕೆ ಸಮ್ಮತಿಸುತ್ತಿಲ್ಲ ಎಂದು ಕೇಳಿದ್ದಾರೆ.

"ಅದು ಅವರ (ನರೇಂದ್ರ ಮೋದಿ)ನಿರ್ಧಾರ ಎಂದು ನಾನು ತಿಳಿದಿಲ್ಲ. . ನಾನು ನಿನ್ನೆ ಅವರೊಂದಿಗೆ ಮಾತನಾಡಿದ್ದು ಇತರ ದೇಶಗಳಿಗೆ ಆ ಪುಷಧದ ರಫ್ತನ್ನು ಭಾರತ ನಿಲ್ಲಿಸಿದೆ ಎನ್ನುವುದು ನನಗೆ ಗೊತ್ತಿದೆ. ಅದು ಬಹಳ ಒಳ್ಳೆಯ ನಿರ್ಧಾರ ಆದರೆ ಅದು ಎಷ್ಟರ ಮಟ್ಟಿಗೆ ಉಳಿಯಲಿದೆ ಎನ್ನುವುದನ್ನು ನಾವು ನೋಡುತ್ತೇವೆ."  ಟ್ರಂಪ್ ಅವರು ಇತ್ತೀಚೆಗೆ ಮೋದಿಯವರೊಂದಿಗಿನ ದೂರವಾಣಿ ಕರೆಯ ಸಮಯದಲ್ಲಿ, ಯುಎಸ್ ಗಾಗಿ ಮಲೇರಿಯಾ ವಿರೋಧಿ ಔಷಧಿ ಪೂರೈಕೆ ಆದೇಶವನ್ನು ಪರಾಮರ್ಶಿಸಲು ವಿನಂತಿಸಿದ್ದರು.]]

ಕೊರೋನಾ ವೈರಸ್ ನಿಯಂತ್ರಣದಲ್ಲಿ ಮಲೇರಿಯಾ ನಿರೋಧಕ ಔಷಧ Hydroxychloroquine ಪರಿಣಾಮಕಾರಿ ಎಂದು ತಜ್ಞರು ಅಭಿಪ್ರಾಪಟ್ಟಿದ್ದು, ಇದೇ ಕಾರಣಕ್ಕೆ ಮುಂಜಾಗ್ರತಾ ಕ್ರಮವಾಗಿ ಭಾರತ ಸರ್ಕಾರ ಈ ಔಷಧಿಯ ರಫ್ತು ಮಾಡುವುದನ್ನು ನಿಷೇಧಿಸಿತ್ತು. ಮಲೇರಿಯಾ  ಮತ್ತು ಲುಪಸ್ ಸೋಂಕಿಗೆ ನೀಡಲಾಗುವ ಔಷಧಿಯು ರೋಗ ನಿರೋಧಕವಾಗಿ ಕಾರ್ಯ ನಿರ್ವಹಿಸಲಿದ್ದು, ಇದೇ ಕಾರಣಕ್ಕೆ ಇದು ಕೊರೋನಾ ಸೋಂಕು ನಿಯಂತ್ರಣದಲ್ಲಿ ಪರಿಣಾಮಕಾರಿಯಾಗಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com