ಕೊರೋನಾ ವೈರಸ್: ಲಾಕ್ ಡೌನ್ ತಂದ ಆಪತ್ತು, 25 ಮಿಲಿಯನ್ ಏವಿಯೇಷನ್ ಉದ್ಯೋಗಿಗಳ ಕೆಲಸಕ್ಕೆ ಕುತ್ತು!

ವಿಶ್ವಾದ್ಯಂತ ಮರಣ ಮೃದಂಗ ಭಾರಿಸುತ್ತಿರುವ ಕೊರೋನಾ ವೈರಸ್ ನಿಂದಾಗಿ ವಿಮಾನಯಾನ ಕ್ಷೇತ್ರಕ್ಕೆ ಭಾರಿ ಹೊಡೆತ ಬಿದ್ದಿದ್ದು, ವಿಮಾನಯಾನ ಸೇವೆ ಸ್ಥಗಿತಗೊಂಡ ಕಾರಣ ವಿಶ್ವಾದ್ಯಂತ ಸುಮಾರು 25 ಮಿಲಿಯನ್ ಏವಿಯೇಷನ್ ಉದ್ಯೋಗಿಗಳು ಕೆಲಸ  ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ವಿಶ್ವಾದ್ಯಂತ ಮರಣ ಮೃದಂಗ ಭಾರಿಸುತ್ತಿರುವ ಕೊರೋನಾ ವೈರಸ್ ನಿಂದಾಗಿ ವಿಮಾನಯಾನ ಕ್ಷೇತ್ರಕ್ಕೆ ಭಾರಿ ಹೊಡೆತ ಬಿದ್ದಿದ್ದು, ವಿಮಾನಯಾನ ಸೇವೆ ಸ್ಥಗಿತಗೊಂಡ ಕಾರಣ ವಿಶ್ವಾದ್ಯಂತ ಸುಮಾರು 25 ಮಿಲಿಯನ್ ಏವಿಯೇಷನ್ ಉದ್ಯೋಗಿಗಳು ಕೆಲಸ  ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ.

ಈ ಬಗ್ಗೆ ಅಂತಾರಾಷ್ಟ್ರೀಯ ಏರ್ ಟ್ರಾನ್ಸ್ ಪೋರ್ಟ್ ಅಸೋಸಿಯೇಷನ್ (IATA) ವರದಿ ನೀಡಿದ್ದು, ಕೊರೋನಾ ವೈರಸ್ ಹಾವಳಿಯಿಂದಾಗಿ ವಿಶ್ವಾದ್ಯಂತ ವಿಮಾನಯಾನ ಸೇವೆಗಳು ಬಹುತೇಕ ಸ್ಥಗಿತಗೊಂಡಿವೆ. ಪರಿಣಾಮ ವಿಮಾನಯಾನ ಸಂಸ್ಥೆಗಳಿಗೆ ಭಾರಿ ನಷ್ಟ ಎದುರಾಗಿದ್ದು.  ಅಲ್ಲದೆ ವಿಶ್ವಾದ್ಯಂತ ಸುಮಾರು 25 ಮಿಲಿಯನ್ ಏವಿಯೇಷನ್ ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಿದೆ. ಈ ಪೈಕಿ ಏಷ್ಯಾ-ಪೆಸಿಫಿಕ್ ನಲ್ಲೇ ಬರೊಬ್ಬರಿ 11.2 ಮಿಲಿಯನ್ ಉದ್ಯೋಗಗಳಿಗೆ ಕುತ್ತು ಎದುರಾಗಿದೆ ಎಂದು ಹೇಳಿದೆ.

ಇದೇ ಸಂಸ್ಥೆ ಕಳೆದವಾರವೂ ಕೂಡ ಒಂದು ವರದಿ ನೀಡಿತ್ತು. ಅದರಂತೆ ಕೊರೋನಾ ವೈರಸ್ ಹಾವಳಿಯಿಂದಾಗಿ ವಿಮಾನ ಸಂಸ್ಥೆಗಳಿಗೆ ಸುಮಾರು 8.838 ಮಿಲಿಯನ್ ಡಾಲರ್ ನಷ್ಟ ಉಂಟಾಗಿತ್ತು. ಈ ನಷ್ಟದ ಪರಿಣಾಮ 2.2 ಮಿಲಿಯನ್ ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದರು.  ವಿಶ್ವದಾದ್ಯಂತ ಸುಮಾರು 65.5 ಮಿಲಿಯನ್ ಜನರು ತಮ್ಮ ನಿತ್ಯ ಜೀವನ ಬಳಕೆಯ ವಸ್ತುಗಳಿಗಾಗಿ ವಿಮಾನಯಾನವನ್ನೇ ಅವಲಂಬಿಸಿದ್ದಾರೆ. ಟ್ರಾವೆಲ್, ಟೂರಿಸಂ ನಂತಹ ಹಲವು ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳ ಕೆಲಸಕ್ಕೆ ಕುತ್ತು ಬಂದಿದೆ. ಪ್ರಮುಖವಾಗಿ  ವಿಮಾನಯಾನ ಕ್ಷೇತ್ರದಲ್ಲಿರುವ ಸುಮಾರು 2.7 ಮಿಲಿಯನ್ ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.

ಏರ್ ಲೈನ್ ಗಳನ್ನೇ ಆಧಾರವಾಗಿಟ್ಟುಕೊಂಡು ಕೆಲಸ ಮಾಡುತ್ತಿರುವ ವಿಶ್ವಾದ್ಯಂತ ಸುಮಾರು 25 ಮಿಲಿಯನ್ ಉದ್ಯೋಗಿಗ ಕೆಲಸಕ್ಕೆ ಮಾರಕ ಕೊರೋನಾ ವೈರಸ್ ಸೋಂಕು ಕುತ್ತು ತಂದಿದೆ. ವಿಮಾನಯಾನ ಸಂಸ್ಥೆಗಳು ಮತ್ತೆ ತಮ್ಮ ಸೇವೆಗಳನ್ನು ಪುನಾರಂಭಿಸಿದ ಹೊರತು ಇದು  ಸುಧಾರಣೆಯಾಗುವುದಿಲ್ಲ. ನಿಜಕ್ಕೂ ಈಗ ವಿಮಾನಯಾನ ಸಂಸ್ಥೆಗಳ ಪರಿಸ್ಥಿತಿ ಚಿಂತಾಜನಕವಾಗಿದ್ದು, ಈ ಬಗ್ಗೆ ತುರ್ತು ಸುಧಾರಣಾ ಕ್ರಮಗಳನ್ನುಕೈಗೊಳ್ಳಬೇಕು ಎಂದು IATA ನಿರ್ದೇಶಕ ಅಲೆಕ್ಸಾಂಡರ್ ಡಿ ಜುನಾಯಿಕ್ ಹೇಳಿದ್ದಾರೆ. 

ಇನ್ನು ಇದೇ ವಿಚಾರವಾಗಿ ಮಾತನಾಡಿರುವ ವಾಯುಯಾನ ಸಲಹಾ ಸಂಸ್ಥೆ ಸಿಎಪಿಎ, ಸರ್ಕಾರಗಳು ಈಗಲೇ ಲಾಕ್ ಡೌನ್ ತೆರೆದು ವಿಮಾನಯಾನ ಸೇವೆಗಳು ಆರಂಭಗೊಂಡರೂ ವಿಮಾನಯಾನ ಕ್ಷೇತ್ರ ಸುಧಾರಿಸಿಕೊಳ್ಳಲು ಕನಿಷ್ಠ 12 ತಿಂಗಳಾದರೂ ಬೇಕು ಎಂದು ಹೇಳಿದೆ. ಇನ್ನು  ದೇಶೀಯ ವಿಮಾನಯಾನಗಳ ವಿಭಾಗದಲ್ಲಿ 2020 ವಿತ್ತೀಯ ವರ್ಷದಲ್ಲಿ 140 ಮಿಲಿಯನ್ ಏರ್ ಟ್ರಾಫಿಕ್ ನಿರೀಕ್ಷೆ ಇತ್ತು. ಆದರೆ 2021ರ ವೇಳೆಗೆ ಇದು 80-90 ಮಿಲಿಯನ್ ಗೆ ಕುಸಿಯುವ ಭೀತಿ ಇದೆ. ಅಂತೆಯೇ ಅಂತಾರಾಷ್ಟ್ರೀಯ ಏರ್ ಟ್ರಾಫಿಕ್ 2020ರಲ್ಲಿ 70 ಮಿಲಿಯನ್ ಇತ್ತು, ಇದು  2021ರ ವೇಳೆಗೆ 35-40 ಮಿಲಿಯನ್ ಗೆ ಕುಸಿಯುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com