ಮುಂಬೈ ನಲ್ಲಿ ಕೊರೋನಾಗೆ ಕಡಿವಾಣ ಹಾಕಲು ಧಾರವಿಯ 15 ಲಕ್ಷ ಜನರಿಗೆ ಕೊವೀಡ್-19 ಸೋಂಕು ಪರೀಕ್ಷೆ 

ಮುಂಬೈ ನಲ್ಲಿ ಕೊರೋನಾ ಹರಡುವಿಕೆಗೆ ಕಡಿವಾಣ ಹಾಕಲು ಬಿಎಂಸಿ ಏಷ್ಯಾದ ಅತಿ ದೊಡ್ಡ ಸ್ಲಂ ಧಾರವಿಯಲ್ಲಿ ಬರೊಬ್ಬರಿ 15 ಲಕ್ಷ ಜನರಿಗೆ ಕೋವಿಡ್-19 ಸೋಂಕು ಪರೀಕ್ಷೆ ನಡೆಸಲು ತೀರ್ಮಾನಿಸಿದೆ. 
ಮುಂಬೈ ನಲ್ಲಿ ಕೊರೋನಾಗೆ ಕಡಿವಾಣ ಹಾಕಲು ಧಾರವಿಯ 15 ಲಕ್ಷ ಜನರಿಗೆ ಕೊವೀಡ್-19 ಸೋಂಕು ಪರೀಕ್ಷೆ
ಮುಂಬೈ ನಲ್ಲಿ ಕೊರೋನಾಗೆ ಕಡಿವಾಣ ಹಾಕಲು ಧಾರವಿಯ 15 ಲಕ್ಷ ಜನರಿಗೆ ಕೊವೀಡ್-19 ಸೋಂಕು ಪರೀಕ್ಷೆ

ಮುಂಬೈ: ಮುಂಬೈ ನಲ್ಲಿ ಕೊರೋನಾ ಹರಡುವಿಕೆಗೆ ಕಡಿವಾಣ ಹಾಕಲು ಬಿಎಂಸಿ ಏಷ್ಯಾದ ಅತಿ ದೊಡ್ಡ ಸ್ಲಂ ಧಾರವಿಯಲ್ಲಿ ಬರೊಬ್ಬರಿ 15 ಲಕ್ಷ ಜನರಿಗೆ ಕೋವಿಡ್-19 ಸೋಂಕು ಪರೀಕ್ಷೆ ನಡೆಸಲು ತೀರ್ಮಾನಿಸಿದೆ. 

ಶಿವಸೇನೆಯ ಸಂಸದ ರಾಹುಲ್ ಶಿವಾಲೆ ಈ ಬಗ್ಗೆ ಬಿಎಂಸಿ ಅಧಿಕಾರಿಗಳೊಂದಿಗೆ ಮಾತನಾಡಿದ್ದು, ಅಧಿಕಾರಿಗಳು ಧಾರವಿಯಲ್ಲಿ ಮನೆಮನೆಗೂ ತೆರಳಿ ಪರೀಕ್ಷೆಗಳನ್ನು ನಡೆಸುವುದಾಗಿ ಹೇಳಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. 

ಖಾಸಗಿ ಹಾಗೂ ಬಿಎಂಸಿಯ ವೈದ್ಯರಿಗೆ ಈ ಜವಾಬ್ದಾರಿ ನೀಡಲಾಗುತ್ತದೆ. ಇನ್ನು ಕೆಲವು ಪ್ರದೇಶಗಳಲ್ಲಿ ಕ್ಲಿನಿಕ್ ಗಳನ್ನು ತೆರೆದು ಕೊರೋನಾ ವೈರಸ್ ಗೆ ಪ್ರಾಥಮಿಕ ಪರೀಕ್ಷೆಗಳನ್ನು ನಡೆಸಲಾಗುತ್ತದೆ, ಮುಂದಿನ 10-12 ದಿನಗಳಲ್ಲಿ ಧಾರವಿಯಲ್ಲಿ ಸ್ಕ್ರೀನಿಂಗ್ ಹಾಗೂ ಪರೀಕ್ಷೆಗಳನ್ನು ನಡೆಸಲಾಗುತ್ತದೆ ಎಂದು ಸಂಸದರು ಮಾಹಿತಿ ನೀದಿದ್ದಾರೆ. 

ಧಾರವಿಯಲ್ಲಿ 15 ಲಕ್ಷಕ್ಕೂ ಹೆಚ್ಚು ಜನ ವಾಸಿಸುತ್ತಿದ್ದು, ಇಲ್ಲಿನ 15 ಕ್ಕೂ ಹೆಚ್ಚು ಜನರಿಗೆ ಕೊರೋನಾ ಸೋಂಕು ತಗುಲಿ 3 ಜನರು ಸಾವನ್ನಪ್ಪಿದ್ದಾರೆ. ಮುಂಬೈ ನ ಕೇಂದ್ರದಲ್ಲಿ ಈ ಸ್ಲಮ್ ಇದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com