ಕೊರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ಭಾರತಕ್ಕೆ ಆತ್ಪದ್ಬಾಂಧವನಾದ ದಕ್ಷಿಣ ಕೊರಿಯಾ! 

ಕೊರೋನಾ ವೈರಸ್ ಪ್ರಮಾಣ ತಗ್ಗಿಸಲು ಹೈಡ್ರಾಕ್ಸಿಕ್ಲೊರೊಕ್ವಿನ್ ಔಷಧ ಕಳಿಸಿ ಭಾರತ ಅನೇಕ ರಾಷ್ಟ್ರಗಳಿಗೆ ನೆರವಾಗಿದೆ. ಈಗ ಭಾರತದ ನೆರವಿಗೆ ದಕ್ಷಿಣ ಕೊರಿಯಾ ಧಾವಿಸಿದೆ. 
ಕೋವಿಡ್-19 ಪರೀಕ್ಷಾ ಕಿಟ್ ಗಳನ್ನು ಭಾರತಕ್ಕೆ ರಫ್ತು ಮಾಡಲಿರುವ ದಕ್ಷಿಣ ಕೊರಿಯಾ (ಸಂಗ್ರಹ ಚಿತ್ರ)
ಕೋವಿಡ್-19 ಪರೀಕ್ಷಾ ಕಿಟ್ ಗಳನ್ನು ಭಾರತಕ್ಕೆ ರಫ್ತು ಮಾಡಲಿರುವ ದಕ್ಷಿಣ ಕೊರಿಯಾ (ಸಂಗ್ರಹ ಚಿತ್ರ)

ನವದೆಹಲಿ: ಕೊರೋನಾ ವೈರಸ್ ಪ್ರಮಾಣ ತಗ್ಗಿಸಲು ಹೈಡ್ರಾಕ್ಸಿಕ್ಲೊರೊಕ್ವಿನ್ ಔಷಧ ಕಳಿಸಿ ಭಾರತ ಅನೇಕ ರಾಷ್ಟ್ರಗಳಿಗೆ ನೆರವಾಗಿದೆ. ಈಗ ಭಾರತದ ನೆರವಿಗೆ ದಕ್ಷಿಣ ಕೊರಿಯಾ ಧಾವಿಸಿದೆ. 

ಇತ್ತೀಚಿನವರೆಗೂ ದಕ್ಷಿಣ ಕೊರಿಯಾ ಸಹ ಕೊರೋನಾ ವೈರಸ್ ನ ಕೇಂದ್ರವಾಗಿತ್ತು. ಆದರೆ ಈಗ ಸುಧಾರಣೆ ಕಂಡಿದೆ. ಇದರ ಹಿಂದಿರುವುದು ಅತಿ ಹೆಚ್ಚು ಪ್ರಮಾಣದಲ್ಲಿ ವೈರಸ್ ಸೋಂಕಿತರನ್ನು ಪರೀಕ್ಷೆಗೊಳಪಡಿಸಬಹುದಾದ ಪರೀಕ್ಷಾ ಕಿಟ್ ಗಳು. 

ಏಕ ಕಾಲಕ್ಕೆ ಅತಿ ಹೆಚ್ಚಿನ ಪ್ರಮಾಣದಲ್ಲಿ ಸೋಂಕಿತರನ್ನು ಪರೀಕ್ಷೆಗೊಳಪಡಿಸುವುದು ಸಾಧ್ಯವಾಗಿರುವುದರಿಂದ ಕೊರೋನಾ ವೈರಸ್ ನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ದಕ್ಷಿಣ ಕೊರಿಯಾಗೆ ಸಾಧ್ಯವಾಗಿದೆ. ಈಗ ಇಂತಹದ್ದೇ ಸೌಲಭ್ಯವನ್ನು ಭಾರತಕ್ಕೆ ಒದಗಿಸಲು ದಕ್ಷಿಣ ಕೊರಿಯಾ ಮುಂದಾಗಿದ್ದು, ಭಾರತ ಸೇರಿದಂತೆ  ಹಲವು ರಾಷ್ಟ್ರಗಳಿಗೆ ಕೋವಿಡ್-19 ಕಿಟ್ ಗಳನ್ನು ರಫ್ತು ಮಾಡಲು ಸಿದ್ಧವಾಗಿದೆ. 

ಇಡೀ ವಿಶ್ವವೇ ಕೊರೋನಾ ವೈರಸ್ ಪರೀಕ್ಷೆ ಕಿಟ್ ಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಎದುರುನೋಡುತ್ತಿರಬೇಕಾದರೆ, ದಕ್ಷಿಣ ಕೊರಿಯಾ ಈ ಕಿಟ್ ಗಳನ್ನು ರಫ್ತು ಮಾಡುತ್ತಿರುವುದು ತಕ್ಷಣದ ಆರ್ಥಿಕ ಲಾಭಕ್ಕೂ ಕಾರಣವಾಗುತ್ತಿದೆಯಷ್ಟೇ ಅಲ್ಲದೇ ದೀರ್ಘಾವಧಿಯಲ್ಲೂ ಆರ್ಥಿಕ ಭದ್ರತೆ ದೊರೆಯಲಿದೆ. 

ಏ.09 ರವರೆಗೂ ದಕ್ಷಿಣ ಕೊರಿಯಾ ಬರೊಬ್ಬರಿ 500,000 ಜನರನ್ನು ಕೋವಿಡ್-19 ಪರೀಕ್ಷೆಗೊಳಪಡಿಸಿದೆ. ಫೆಬ್ರವರಿ  ಮಾರ್ಚ್ ತಿಂಗಳಲ್ಲಿ ಅತಿ ಹೆಚ್ಚು ಕೊರೋನಾ ಪೀಡಿತರಿದ್ದಾರೆ, ದಕ್ಷಿಣ ಕೊರಿಯಾಗೆ ದಿನವೊಂದಕ್ಕೆ 20,000 ಪರೀಕ್ಷೆ ಮಾಡುತ್ತಿತ್ತು. ಈಗ ಈ ಸಂಖ್ಯೆ 10,000 ಕ್ಕೆ ಇಳಿಕೆಯಾಗಿದ್ದು ಕೊರೋನಾ ತಡೆಗೆ ಪರ್ಯಾಯ ಮಾರ್ಗ ಫಲಿತಾಂಶ ನೀಡುತ್ತಿದೆ. ಆದಾಗ್ಯೂ ದಕ್ಷಿಣ ಕೊರಿಯಾದ ಸಂಸ್ಥೆಗಳು ದಿನವೊಂದಕ್ಕೆ 135,000 ಜನರನ್ನು ಪರೀಕ್ಷೆಗೊಳಪಡಿಸುತ್ತಿದೆ. ಪರಿಣಾಮವಾಗಿ ದಕ್ಷಿಣ ಕೊರಿಯಾದಲ್ಲಿ ಪರಿಸ್ಥಿತಿ ಸ್ಥಿರವಾಗಿದ್ದು, ಹೆಚ್ಚಿನ ಪ್ರಮಾಣದ ಕಿಟ್ ಗಳನ್ನು ರಫ್ತು ಮಾಡಲು ಮುಂದಾಗಿವೆ.

ಕಳೆದ ತಿಂಗಳು ದಕ್ಷಿಣ ಕೊರಿಯಾದ 27 ಕೊರಿಯಾ ಕಂಪನಿಗಳು ತುರ್ತು ಬಳಕೆಯ ಟೆಸ್ಟಿಂಗ್ ಕಿಟ್ ಗಳನ್ನು ರಫ್ತು ಮಾಡಿದ್ದು, ಒಟ್ಟಾರೆ 48.6 ಡಾಲರ್ ಮಿಲಿಯನ್ ಮೌಲ್ಯದ ಟೆಸ್ಟಿಂಗ್ ಕಿಟ್ ಗಳನ್ನು ರಫ್ತು ಮಾಡಿವೆ. ಏಪ್ರಿಲ್ ನಲ್ಲಿ ಈ ಸಂಖ್ಯೆ ಇನ್ನೂ ಹೆಚ್ಚಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಟೆಸ್ಟಿಂಗ್ ಕಿಟ್ ಗಳಿಗಾಗಿ 120 ರಾಷ್ಟ್ರ‍ಗಳು ದಕ್ಷಿಣ ಕೊರಿಯಾಗೆ ರಫ್ತು ಮಾಡುವಂತೆ ಅಥವಾ ಮಾನವಿಯ ನೆಲೆಯಲ್ಲಿ ಕಳಿಸಿಕೊಡುವಂತೆ ಮನವಿ ಮಾಡಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com