ಉತ್ತರ ಪ್ರದೇಶ: ಕ್ವಾರಂಟೈನ್ ಅವಧಿ ಮುಗಿಸಿದ 17 ತಬ್ಲಿಘಿಗಳು ಜೈಲಿಗೆ

ಉತ್ತರ ಪ್ರದೇಶದಲ್ಲಿ ಕ್ವಾರಂಟೈನ್ ಅವಧಿ ಮುಗಿಸಿದ 17 ತಬ್ಲಿಘಿಗಳನ್ನು ಜೈಲಿಗೆ ಕಳಿಸಲಾಗಿದೆ. 
ಉತ್ತರ ಪ್ರದೇಶ: ಕ್ವಾರಂಟೈನ್ ಅವಧಿ ಮುಗಿಸಿದ 17 ತಬ್ಲಿಘಿಗಳನ್ನು ಜೈಲಿಗೆ
ಉತ್ತರ ಪ್ರದೇಶ: ಕ್ವಾರಂಟೈನ್ ಅವಧಿ ಮುಗಿಸಿದ 17 ತಬ್ಲಿಘಿಗಳನ್ನು ಜೈಲಿಗೆ

ಬಹ್ರೇಚ್: ಉತ್ತರ ಪ್ರದೇಶದಲ್ಲಿ ಕ್ವಾರಂಟೈನ್ ಅವಧಿ ಮುಗಿಸಿದ 17 ತಬ್ಲಿಘಿಗಳನ್ನು ಜೈಲಿಗೆ ಕಳಿಸಲಾಗಿದೆ. 

ಏ.12 ರಂದು ಕ್ವಾರಂಟೈನ್ ಅವಧಿ ಮುಕ್ತಾಯಗೊಂಡಿದ್ದು, ಮ್ಯಾಜಿಸ್ಟ್ರೇಟ್ ಎದುರು ಹಾಜರುಪಡಿಸಿ ನಂತರ 17 ಜನರನ್ನು ಜೈಲಿಗೆ ಕಳಿಸಲಾಗಿದೆ. ಜೈಲಿಗೆ ಕಳಿಸಲಾಗಿರುವ 17 ಮಂದಿಯೂ ವಿದೇಶಿಗರಾಗಿದ್ದು, ಇಂಡೋನೇಷ್ಯಾ ಹಾಗೂ ಥಾಯ್ ಲ್ಯಾಂಡ್ ನಿಂದ ಭಾರತಕ್ಕೆ ಬಂದು ನವದೆಹಲಿಯಲ್ಲಿ ನಡೆದ ತಬ್ಲಿಘಿ ಜಮಾತ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ವೀಸಾ ಹಾಗೂ ಪಾಸ್ಪೋರ್ಟ್ ನಿಯಮಗಳನ್ನು ಉಲ್ಲಂಘನೆ ಮಾಡಿದ್ದಕ್ಕಾಗಿ ಅವರನ್ನು ಜೈಲಿಗೆ ಕಳಿಸಲಾಗಿದೆ.

ತಬ್ಲಿಘಿ ಜಮಾತ್ ನಲ್ಲಿ ಭಾಗವಹಿಸಿದ್ದ 21 ಮಂದಿಯನ್ನು ತಾಜ್ ಹಾಗೂ ಕುರೈಶ್ ಮಸೀದಿಯಲ್ಲಿ ಪೊಲೀಸರು ಬಂಧಿಸಿದ್ದರು. ಈ ಪೈಕಿ 17 ತಬ್ಲಿಘಿಗಳು ವಿದೇಶಿಗರಾಗಿದ್ದಾರೆ. ಬಂಧನಕ್ಕೊಳಪಡಿಸಲಾಗಿದ್ದ ಅಷ್ಟೂ ಜನರನ್ನು ಮಾ.31 ರಂದು ಕ್ವಾರಂಟೈನ್ ಗೆ ಕಳಿಸಲಾಗಿತ್ತು. ಬಂಧಿತರ ವೈದ್ಯಕೀಯ ಪರೀಕ್ಷೆಯಲ್ಲಿ ನೆಗೆಟೀವ್ ಬಂದಿತ್ತು. 

ಎಪಿಡೆಮಿಕ್ ಡಿಸೀಸಸ್ ಕಾಯ್ದೆ (1897) ೦3, ಪಾಸ್ಪೋರ್ಟ್ ಕಾಯ್ದೆ (1967) ಸೆಕ್ಷನ್ 12(3) ಐಪಿಸಿ ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com