ಸಾವಿನ ಬಗ್ಗೆ ಸುಳ್ಳು ಸುದ್ದಿ ಹರಡಿದ ಆರೋಪ: ಬಂಗಾಳ ಬಿಜೆಪಿ ಸಂಸದನ ವಿರುದ್ಧ ದೂರು

ಇಬ್ಬರ ಸಾವಿನ ಬಗ್ಗೆ ಶಂಕೆ ವ್ಯಕ್ತಪಡಿಸಿ ಅಂತ್ಯಸಂಸ್ಕಾರದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಅಕ್ಷೇಪಾರ್ಹ ಹೇಳಿಕೆ ಪ್ರಕಟಿಸಿದ್ದ ಬಂಕುರಾ ಕ್ಷೇತ್ರದ ಬಿಜೆಪಿ ಸಂಸದನ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ಸುಭಾಷ್ ಸರ್ಕಾರ್
ಸುಭಾಷ್ ಸರ್ಕಾರ್
Updated on

ಕೊಲ್ಕೋತಾ: ಇಬ್ಬರ ಸಾವಿನ ಬಗ್ಗೆ ಶಂಕೆ ವ್ಯಕ್ತಪಡಿಸಿ ಅಂತ್ಯಸಂಸ್ಕಾರದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಅಕ್ಷೇಪಾರ್ಹ ಹೇಳಿಕೆ ಪ್ರಕಟಿಸಿದ್ದ ಬಂಕುರಾ ಕ್ಷೇತ್ರದ ಬಿಜೆಪಿ ಸಂಸದ ಸುಭಾಷ್ ಸರ್ಕಾರ್ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ತೃಣಮೂಲ ಕಾಂಗ್ರೆಸ್ ನಾಯಕ ಚಟ್ಟೋಪಾಧ್ಯಾಯ ಈ ಸಂಬಂಧ ಬಂಕುರ ಸದರ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

'ಕೊರೊನಾ ವೈರಸ್‌ನಿಂದ ಮೃತಪಟ್ಟಿದ್ದಾರೆ ಎನ್ನಲಾದವರ ಅಂತ್ಯಸಂಸ್ಕಾರವನ್ನು ಅಧಿಕಾರಿಗಳು ತರಾತುರಿಯಲ್ಲಿ ಮುಗಿಸಿದ್ದಾರೆ' ಎಂದು ಬಿಜೆಪಿ ಸಂಸದ ಸಾಮಾಜಿಕ ಮಾಧ್ಯಮದಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದರು. 'ಸ್ವತಃ ವೈದ್ಯರೂ ಆಗಿರುವ ಸಂಸದರು ಯಾವುದೇ ವರದಿಯನ್ನು ಪರಿಶೀಲಿಸದೆ ಹೀಗೆ ಹೇಳಿರುವುದು ತಪ್ಪು. ಕೋವಿಡ್-19 ಪಿಡುಗಿನಿಂದ ಜನರಲ್ಲಿ ಆತಂಕ ಮೂಡಿರುವ ಸಂದರ್ಭದಲ್ಲಿ ಅವರು ಸಾಮಾಜಿಕ ಮಾಧ್ಯಮದಲ್ಲಿ ಸುಳ್ಳು ಸುದ್ದಿ ಹರಡಲು ಯತ್ನಿಸಿದ್ದಾರೆ ಎಂದು ಜೇದೀಪ್ ಹೇಳಿದ್ದಾರೆ.

'ವರದಿ ಬರುವ ಮೊದಲೇ ಅಧಿಕಾರಿಗಳು ಹೇಗೆ ಅಂತ್ಯಸಂಸ್ಕಾರ ನೆರವೇರಿಸಿದರು' ಎಂದು ಬಿಜೆಪಿ ಸಂಸದ ಮರು ಪ್ರಶ್ನೆ 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com