ಸಿಎಎ ಪ್ರತಿಭಟನೆ ಕೇಂದ್ರವಾಗಿದ್ದ ಶಾಹೀನ್ ಬಾಗ್ ಇದೀಗ ಕೊರೋನಾ ವೈರಸ್ ಹಾಟ್ ಸ್ಪಾಟ್!

ಪೌರತ್ವ ತಿದ್ದುಪಡಿ ವಿರೋಧಿ ಪ್ರತಿಭಟನೆಯ ಕೇಂದ್ರವಾಗಿದ್ದ ದೆಹಲಿಯ ಶಾಹೀನ್ ಬಾಗ್ ಇದೀಗ ಮಾರಕ ಕೊರೋನಾ ವೈರಸ್ ಪ್ರಸರಣಕ್ಕೂ ಹಾಟ್ ಸ್ಪಾಟ್ ಆಗಿದ್ದು, ದೆಹಲಿಯಲ್ಲಿ ಒಟ್ಟಾರೆ ಹಾಟ್ ಸ್ಪಾಟ್ ಗಳ ಸಂಖ್ಯೆ ಇದೀಗ 60ಕ್ಕೆ ಏರಿಕೆಯಾಗಿದೆ.
ಶಾಹೀನ್ ಬಾಗ್ ಸೀಲ್ ಡೌನ್
ಶಾಹೀನ್ ಬಾಗ್ ಸೀಲ್ ಡೌನ್

ನವದೆಹಲಿ: ಪೌರತ್ವ ತಿದ್ದುಪಡಿ ವಿರೋಧಿ ಪ್ರತಿಭಟನೆಯ ಕೇಂದ್ರವಾಗಿದ್ದ ದೆಹಲಿಯ ಶಾಹೀನ್ ಬಾಗ್ ಇದೀಗ ಮಾರಕ ಕೊರೋನಾ ವೈರಸ್ ಪ್ರಸರಣಕ್ಕೂ ಹಾಟ್ ಸ್ಪಾಟ್ ಆಗಿದ್ದು, ದೆಹಲಿಯಲ್ಲಿ ಒಟ್ಟಾರೆ ಹಾಟ್ ಸ್ಪಾಟ್ ಗಳ ಸಂಖ್ಯೆ ಇದೀಗ 60ಕ್ಕೆ ಏರಿಕೆಯಾಗಿದೆ.

ಈ ಹಿಂದೆ ಡಿಸೆಂಬರ್ ನಿಂದ ಮಾರ್ಚ್ ವರಗೆ ಸತತ 100 ದಿನಗಳ ಸಿಎಎ ವಿರೋಧಿ ಪ್ರತಿಭಟನೆಗೆ ಕಾರಣವಾಗಿದ್ದ ಶಾಹೀನ್ ಭಾಗ್ ಪ್ರದೇಶವನ್ನು ಕೊರೋನಾ ವೈರಸ್ ಹಾಟ್ ಸ್ಪಾಟ್ ಪ್ರದೇಶಗಳ ಪಟ್ಟಿಗೆ ಸೇರಿಸಲಾಗಿದೆ. ಅಲ್ಲದೆ ಇಡೀ ಪ್ರದೇಶವನ್ನು ಸೀಲ್ ಡೌನ್ ಮಾಡಲಾಗಿದ್ದು,  ಇದಲ್ಲದೆ ಶಾಹೀನ್ ಭಾಗ್ ಸುತ್ತಮುತ್ತಲ ಪ್ರದೇಶಗಳಾದ ಅಬುಲ್ ಫೈಜಲ್ ಎನ್ ಕ್ಲೇವ್, ಶಾಹ್ದರಾ ದ ಈಸ್ಟ್ ರಾಮನಗರ ಪ್ರದೇಶವನ್ನು ಕೂಡ ಕಂಟೈನ್ ಮೆಂಟ್ ಜೋನ್ ಎಂದು ಘೋಷಣೆ ಮಾಡಿ ಸೀಲ್ ಡೌನ್ ಮಾಡಲಾಗಿದೆ.

ಪ್ರಸ್ತುತ ದೆಹಲಿಯಲ್ಲಿ ಒಟ್ಟಾರೆ ಹಾಟ್ ಸ್ಪಾಟ್ ಗಳ ಸಂಖ್ಯೆ 60ಕ್ಕೆ ಏರಿಕೆಯಾಗಿದ್ದು, ಎಲ್ಲ ಜೋನ್ ಗಳನ್ನು ಸೀಲ್ ಡೌನ್ ಮಾಡಿ ಎಲ್ಲ ರೀತಿಯ ಸಾರ್ವಜನಿಕ ಸಂಚಾರವನ್ನು ನಿರ್ಬಂಧಿಸಲಾಗಿದೆ. ಇಡೀ ಪ್ರದೇಶದಲ್ಲಿ ಅಧಿಕಾರಿಗಳು ಸ್ಯಾನಿಟೇಜಷನ್ ಮಾಡುತ್ತಿದ್ದು, ಪ್ರತೀಯೊಂದು ಮನೆ  ಹಾಗೂ ಪ್ರತಿಯೊಬ್ಬರನ್ನೂ ಸ್ಕ್ರೀನಿಂಗ್ ಗೆ ಒಳಪಡಿಸಲಾಗುತ್ತಿದೆ.

ಇನ್ನು ದೆಹಲಿಯಲ್ಲಿ ಈವರೆಗೂ ಮಾರಕ ಕೊರೋನಾ ವೈರಸ್ ಗೆ 38 ಮಂದಿ ಬಲಿಯಾಗಿದ್ದು, 1,640ಮಂದಿಗೆ ಸೋಂಕು ತಗುಲಿದೆ. ಒಟ್ಟಾರೆ ಭಾರತದಲ್ಲಿ 437 ಮಂದಿ ಸೋಂಕಿತರು ಸಾವನ್ನಪ್ಪಿದ್ದು, ಸೋಂಕಿತರ ಸಂಖ್ಯೆ 11, 201ಕ್ಕೆ ಏರಿಕೆಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com