ಲಾಕ್ ಡೌನ್ ಮಧ್ಯೆ ಭೋಪಾಲ್ ನಲ್ಲಿ ಅಪಾರ್ಟ್ ಮೆಂಟ್ ಒಳಗೆ ನುಗ್ಗಿ ದೃಷ್ಟಿ ವಿಶೇಷ ಚೇತನ ಮಹಿಳೆ ಮೇಲೆ ಅತ್ಯಾಚಾರ

ರಾಷ್ಟ್ರಾದ್ಯಂತ ಕೊರೋನಾ ವೈರಸ್ ಲಾಕ್ ಡೌನ್ ಮಧ್ಯೆ, ಬ್ಯಾಂಕಿನಲ್ಲಿ ವ್ಯವಸ್ಥಾಪಕಿಯಾಗಿರುವ ದೃಷ್ಟಿ ವಿಶೇಷಚೇತನ ಮಹಿಳೆ ಮೇಲೆ ಅತ್ಯಾಚಾರವೆಸಗಿರುವ ಪ್ರಕರಣ ಮಧ್ಯ ಪ್ರದೇಶದ ಭೋಪಾಲ್ ನ ಶಹಪುರ ಎಂಬಲ್ಲಿ ನಡೆದಿದೆ.
ಲಾಕ್ ಡೌನ್ ಮಧ್ಯೆ ಭೋಪಾಲ್ ನಲ್ಲಿ ಅಪಾರ್ಟ್ ಮೆಂಟ್ ಒಳಗೆ ನುಗ್ಗಿ ದೃಷ್ಟಿ ವಿಶೇಷ ಚೇತನ ಮಹಿಳೆ ಮೇಲೆ ಅತ್ಯಾಚಾರ
Updated on: 

ಭೋಪಾಲ್: ರಾಷ್ಟ್ರಾದ್ಯಂತ ಕೊರೋನಾ ವೈರಸ್ ಲಾಕ್ ಡೌನ್ ಮಧ್ಯೆ, ಬ್ಯಾಂಕಿನಲ್ಲಿ ವ್ಯವಸ್ಥಾಪಕಿಯಾಗಿರುವ ದೃಷ್ಟಿ ವಿಶೇಷಚೇತನ ಮಹಿಳೆ ಮೇಲೆ ಅತ್ಯಾಚಾರವೆಸಗಿರುವ ಪ್ರಕರಣ ಮಧ್ಯ ಪ್ರದೇಶದ ಭೋಪಾಲ್ ನ ಶಹಪುರ ಎಂಬಲ್ಲಿ ನಡೆದಿದೆ.

ನಿನ್ನೆ ನಸುಕಿನ ಜಾವ ಅಪರಿಚಿತ ದುಷ್ಕರ್ಮಿ ಬ್ಯಾಂಕ್ ವ್ಯವಸ್ಥಾಪಕಿ ವಾಸಿಸುತ್ತಿರುವ ಅಪಾರ್ಟ್ ಮೆಂಟ್ ಒಳಗೆ ನುಗ್ಗಿ ಅತ್ಯಾಚಾರವೆಸಗಿದ್ದಾನೆ.

ಮೂರು ಮಹಡಿಯನ್ನು ಹೊಂದಿರುವ ಅಪಾರ್ಟ್ ಮೆಂಟ್ ನ ಎರಡನೇ ಮಹಡಿಯಲ್ಲಿ ಮಹಿಳೆ ಕಳೆದ ಕೆಲ ದಿನಗಳಿಂದ ಒಬ್ಬರೇ ವಾಸಿಸುತ್ತಿದ್ದರು. ಅವರ ಪತಿ ರಾಜಸ್ತಾನದ ತಮ್ಮ ಊರಿಗೆ ಹೋಗಿದ್ದವರು ಲಾಕ್ ಡೌನ್ ನಿಂದಾಗಿ ಭೋಪಾಲ್ ಗೆ ಬರಲಾಗದೆ ಸಿಕ್ಕಿಹಾಕಿಕೊಂಡಿದ್ದರು.

ನಿನ್ನೆ ನಸುಕಿನ ಜಾವ 3.30ರ ಸುಮಾರಿಗೆ ಮಹಿಳೆ ತುಂಬ ಸೆಕೆಯಾಗುತ್ತಿದೆ ಎಂದು ಬಾಲ್ಕನಿಯ ಬಾಗಿಲುಗಳನ್ನು ತೆರೆದಿಟ್ಟು ಮಲಗಿದರು. ಈ ಹೊತ್ತಿನಲ್ಲಿ ಒಳನುಗ್ಗಿದ ಅಪರಿಚಿತ ವ್ಯಕ್ತಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಆರೋಪಿ ಫ್ಲ್ಯಾಟ್ ನ ಮುಖ್ಯ ಬಾಗಿಲನ್ನು ಹೊರಗಿನಿಂದ ಬಂದ್ ಮಾಡಿ ಆಕೆಯ ಮೊಬೈಲ್ ನ್ನು ಕಸಿದುಕೊಂಡಿದ್ದ.  

ಮಹಿಳೆ ಬೊಬ್ಬಿಡುತ್ತಿರುವುದನ್ನು ಕೇಳಿ ಪಕ್ಕದ ಮನೆಯವರಿಗೆ ಎಚ್ಚರವಾಗಿ ಪೊಲೀಸರಿಗೆ ದೂರು ನೀಡಿದ ಮೇಲಷ್ಟೇ ಆರೋಪಿ ಅಲ್ಲಿಂದ ಪರಾರಿಯಾದನು. ಆರೋಪಿ ಮೆಟ್ಟಿಲುಗಳ ಮೂಲಕ ಎರಡನೇ ಮಹಡಿ ಹತ್ತಿ ನಂತರ ಮಹಿಳೆಯಿದ್ದ ಫ್ಲ್ಯಾಟ್ ಗೆ ಬಾಲ್ಕನಿ ಬಾಗಿಲು ತೆರೆದಿದ್ದರಿಂದ ಪ್ರವೇಶಿಸಿ ಕುಕೃತ್ಯ ನಡೆಸಿದ್ದಾನೆ ಎಂದು ಎಎಸ್ ಪಿ ಸಂಜಯ್ ಸಾಹು ಪ್ರಾಥಮಿಕ ತನಿಖೆಯಿಂದ ತಿಳಿಸಿದ್ದಾರೆ.

ಬ್ಯಾಂಕ್ ಉದ್ಯೋಗಿ ಮಹಿಳೆ ತೀವ್ರ ಖಿನ್ನತೆಗೆ ಹೋಗಿರುವುದರಿಂದ ಪ್ರಕರಣ ಬಗ್ಗೆ ಸೂಕ್ಷ್ಮವಾಗಿ ತನಿಖೆ ಮಾಡಲಾಗುತ್ತಿದ್ದು ಈ ಸಂಬಂಧ ಕೇಸು ದಾಖಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com