ಭಾರತದಲ್ಲಿ ಕೊರೋನಾ ಹರಡುವಿಕೆಯ ಪ್ರಮಾಣ ಅತಿ ಕಡಿಮೆ: ಸಂಕಷ್ಟದ ನಡುವೆ ಸಮಾಧಾನ ತಂದ ಅಧ್ಯಯನ ವರದಿ

ಭಾರತವು ಈಗ 15,000 ಕೋವಿಡ್ 19 ಪ್ರಕರಣಗಳನ್ನು ಕಾಣುತ್ತಿದೆ. ಆದರೆ ಇತರೆ ದೇಶಗಳಿಗೆ ಹೋಲಿಕೆ ಮಾಡಿದರೆ ಪ್ರತಿ ಸೋಂಕಿತ ವ್ಯಕ್ತಿಯು ರೋಗವನ್ನು ಇತರರಿಗೆ ಹರಡುವ ಪ್ರಮಾಣವು ಬಹಳ ಕಡಿಮೆಯಾಗಿದೆ ಎಂದು ಇನ್ಸ್ಟಿಟ್ಯೂಟ್ ಆಫ್ ಮ್ಯಾಥಮೆಟಿಕಲ್ ಸೈನ್ಸ್ ಸಂಸ್ಥೆ ಅಧ್ಯಯನ ಹೇಳಿದೆ.
ಭಾರತದಲ್ಲಿ ಕೊರೋನಾ ಹರಡುವಿಕೆ ಪ್ರಮಾಣ ಅತಿ ಕನಿಷ್ಟವಾಗಿದೆ: ಸಂಕಟದ ನಡುವೆ ಸಮಾಧಾನ ತಂದ ಅಧ್ಯಯನ ವರದಿ
ಭಾರತದಲ್ಲಿ ಕೊರೋನಾ ಹರಡುವಿಕೆ ಪ್ರಮಾಣ ಅತಿ ಕನಿಷ್ಟವಾಗಿದೆ: ಸಂಕಟದ ನಡುವೆ ಸಮಾಧಾನ ತಂದ ಅಧ್ಯಯನ ವರದಿ
Updated on

ನವದೆಹಲಿ: ಭಾರತವು ಈಗ 15,000 ಕೋವಿಡ್ 19 ಪ್ರಕರಣಗಳನ್ನು ಕಾಣುತ್ತಿದೆ. ಆದರೆ ಇತರೆ ದೇಶಗಳಿಗೆ ಹೋಲಿಕೆ ಮಾಡಿದರೆ ಪ್ರತಿ ಸೋಂಕಿತ ವ್ಯಕ್ತಿಯು ರೋಗವನ್ನು ಇತರರಿಗೆ ಹರಡುವ ಪ್ರಮಾಣವು ಬಹಳ ಕಡಿಮೆಯಾಗಿದೆ ಎಂದು ಇನ್ಸ್ಟಿಟ್ಯೂಟ್ ಆಫ್ ಮ್ಯಾಥಮೆಟಿಕಲ್ ಸೈನ್ಸ್ ಸಂಸ್ಥೆ ಅಧ್ಯಯನ ಹೇಳಿದೆ.

ದೇಶಾದ್ಯಂತ ಜಾರಿಯಲ್ಲಿದ್ದ ವ್ಯಾಪಕವಾದ ಲಾಕ್ ಡೌನ್ ಕ್ರಮಗಳು ಮಹಾರಾಷ್ಟ್ರದಲ್ಲಿ ಸೋಂಕನ್ನು ತಡೆಗಟ್ಟುವಲ್ಲಿ ಪರಿಣಾಮಕಾರಿಯಾಗಿರದೆ ಇರಬಹುದು ಆದರೆ ತಮಿಳುನಾಡು ಮತ್ತು ಕರ್ನಾಟಕದಂತಹ ಕೆಲವು ರಾಜ್ಯಗಳಲ್ಲಿ ಸಹಕಾರಿಯಾಗಿದೆ ಎಂದು ಅಧ್ಯಯನ ಹೇಳಿದೆ.

"ಕೋವಿಡ್ 19 ಸಂಬಂಧ ಜಾಗತಿಕ ಪುನರುತ್ಪತ್ತಿ ಪ್ರಮಾಣವನ್ನು ಜಾಗತಿಕ ಮಟ್ಟದಲ್ಲಿ ಅಂದಾಜಿಸಲಾಗಿದ್ದು ಭಾರತದಲ್ಲಿ, ಇದು ಈಗ 1.83 ರಷ್ಟಿದೆ, ಅದೇ ಜಗತ್ತಿನಲ್ಲಿ 1.5-4 ರ ನಡುವೆ  ಇದೆ ಎಂದು ಅಂದಾಜಿಸಿದೆ.  ಹಾಗಾಗಿ ಭಾರತ ಅತ್ಯಂತ ಕಡೊಮೆ ಅಪಾಯದ ಮಟ್ಟದಲ್ಲಿದೆ" ಎಂದು  'ಎಪಿಡೆಮಿಯೋಲಾಜಿಕಲ್ ಡೈನಾಮಿಕ್ಸ್ ಆಫ್ ಕೋವಿಡ್ 19 ಇನ್ ಇಂಡಿಯಾ -ಆನ್ ಇಂಟೀರಿಯನ್ ಅಸೆಸ್ ಮೆಂಟ್(‘Epidemiological dynamics of the COVID19 pandemic in India: An interim assessment’) ಪ್ರಮುಖ ಸಂಶೋಧಕ ಸೀತಭ್ರ ಸೈನ್ಹಾ ಹೇಳಿದ್ದಾರೆ.

ಏಪ್ರಿಲ್ 6 ಮತ್ತು ಏಪ್ರಿಲ್ 15 ರ ನಡುವೆ ಸಾಂಕ್ರಾಮಿಕ ರೋಗದ ಪ್ರಮಾಣ 1.53 ಎಂದು ಅಂದಾಜಿಸಲಾಗಿದ್ದು, ಇದು ಸರಾಸರಿ 1.83 ಆಗಿದೆ ಏಪ್ರಿಲ್ 24 ರಿಂದ ಭಾರತದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ತಗ್ಗಲಿದೆ ಎಂದು ಸಂಶೋಧಕರು ಗ್ರಹಿಸಿದ್ದಾರೆ, ಮಾರ್ಚ್ 24 ರಂದು ರಾಷ್ಟ್ರವ್ಯಾಪಿ ಲಾಕ್‌ಡೌನ್ ಪ್ರಾರಂಭವಾದ ಸುಮಾರು ಎರಡು ವಾರಗಳ ನಂತರರ ಇಂದಿನ ಸ್ಥಿತಿಯನ್ನು ಪರಿಗಣಿಸಿ ಈ ಗ್ರಹಿಕೆ ಮಾಡಲಾಗಿದೆ.

"ಲಾಕ್‌ಡೌನ್ ಪ್ರಾರಂಭವಾದ ಎರಡು ವಾರಗಳವರೆಗೆ, ಸಕ್ರಿಯ ಪ್ರಕರಣಗಳ ಸಂಖ್ಯೆಯು ಮುಖ್ಯವಾಗಿ ಲಾಕ್‌ಡೌನ್‌ಗೆ ಮುಂಚಿತವಾಗಿ  ಹರಡಿರುವ ಸೋಂಕಿನಿಂದ ಉಂಟಾಗಲೊದೆ. "ಸಂಶೋಧಕರು ಹೇಳಿದ್ದಾರೆ.ಮಾರ್ಚ್ ಕೊನೆಯ ವಾರದಲ್ಲಿ ವಿಧಿಸಲಾದ ವ್ಯಾಪಕ ಲಾಕ್‌ಡೌನ್ ಹಿನ್ನೆಲೆಯಲ್ಲಿ ಭಾರತದಲ್ಲಿ ಒಟ್ಟು ಸಕ್ರಿಯ ಕೋವಿಡ್ -19 ಪ್ರಕರಣಗಳು ಏಪ್ರಿಲ್ 20 ರ ವೇಳೆಗೆ 35,000-50,000 ವ್ಯಾಪ್ತಿಯಲ್ಲಿರಬಹುದು ಎಂದು ಅಧ್ಯಯನವು ಅಂದಾಜಿಸಿದೆ. ಅದಾಗ್ಯೂ ದೇಶದಲ್ಲಿ  ಪುನರುತ್ಪತ್ತಿ  ಮೌಲ್ಯವು 1 ಕ್ಕಿಂತ ಹೆಚ್ಚಿರುವುದರಿಂದ, ಇತರ ನಿಯಂತ್ರಣ ಕ್ರಮಗಳ ಅನುಪಸ್ಥಿತಿಯಲ್ಲಿ, ನಿರ್ಬಂಧಗಳನ್ನು ತೆಗೆದುಹಾಕಿದ ನಂತರ ಸಾಂಕ್ರಾಮಿಕ ರೋಗವು ಬೆಳೆಯದಂತೆ ತಡೆಯಲು ಕೇವಲ ಲಾಕ್‌ಡೌನ್  ಸಾಕಾಗಲಿಕ್ಕಿಲ್ಲಎಂದು ಇದು ಸೂಚಿಸುತ್ತದೆ.

ಸಾಂಕ್ರಾಮಿಕ ರೋಗವು ಹೆಚ್ಚಿನ ಸಂಖ್ಯೆಯ ಸೋಂಕುಗಳಿಗೆ ಕಾರಣವಾಗಿದೆ ಮತ್ತು ವಿವಿಧ ರಾಜ್ಯಗಳಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆಯ ಬೆಳವಣಿಗೆಯ ಸ್ವರೂಪದಲ್ಲಿ ದೊಡ್ಡ ವ್ಯತ್ಯಾಸಗಳನ್ನು ಕಂಡುಬಂದಿದ್ದು ಆ ರಾಜ್ಯಗಳಿಂದ ಸಕ್ರಿಯ ಪ್ರಕರಣಗಳ ಸಂಖ್ಯೆಯನ್ನು ಸಹ ಅಧ್ಯಯನ ಒಳಗೊಂಡಿದೆ. ಹೆಚ್ಚಿನ ಸಂಖ್ಯೆಯ ಸಕ್ರಿಯ ಪ್ರಕರಣಗಳನ್ನು ಹೊಂದಿರುವ ಮಹಾರಾಷ್ಟ್ರವು ಒಟ್ಟಾರೆಯಾಗಿ ದೇಶಕ್ಕೆ ಹೋಲಿಕೆಯಾಗುವ ಬೆಳವಣಿಗೆಯ ರೇಖೆಯನ್ನು ತೋರಿಸಿದರೆ, ಏಪ್ರಿಲ್ 4-15ರ ಅವಧಿಯಲ್ಲಿ ಅಂದಾಜು ಮಾಡಲಾದ ಪರಿಣಾಮಕಾರಿ ಪುನರುತ್ಪತ್ತಿ ದರ 1.7 ಮೌಲ್ಯಕ್ಕಿಂತ ಕಡಿಮೆಯಾಗಿದೆ.ಆದರೆ ಭಾರತಕ್ಕೆ ಹೋಲಿಸಿದಾಗ  ಗಮನಾರ್ಹವಾಗಿ ಹೆಚ್ಚಾಗಿದೆ.

"ರಾಷ್ಟ್ರಮಟ್ಟದ ದತ್ತಾಂಶಗಳಲ್ಲಿ ಕಂಡುಬರುವಂತಲ್ಲದೆ, ರಾಜ್ಯದ ದತ್ತಾಂಶದಲ್ಲಿನಲಾಕ್‌ಡೌನ್‌ನ ಯಾವುದೇ ಸ್ಪಷ್ಟ ಪರಿಣಾಮವಿಲ್ಲ" ಎಂದು ಸಂಶೋಧಕರು ಹೇಳಿದ್ದಾರೆ.

"ತಮಿಳುನಾಡು ಮತ್ತು ಕರ್ನಾಟಕದಂತಹ ರಾಜ್ಯಗಳು ಪ್ರಕರಣಗಳ ಬೆಳವಣಿಗೆಗೆ ರೇಖೀಯ ಪ್ರವೃತ್ತಿಯನ್ನು ತೋರಿಸುತ್ತವೆ ಈ ರಾಜ್ಯಗಳಲ್ಲಿ ಸಾಂಕ್ರಾಮಿಕ ರೋಗ ನಿಧಾನಗತಿಯಲ್ಲಿರಬಹುದು ಎಂದು ಇದು ಸೂಚಿಸಿದೆ."

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com