ಕೋವಿಡ್-19 ನಿಂದ ಮೃತನ ಅಂತ್ಯಕ್ರಿಯೆ ನಡೆಸಲು ಮಗನ ನಕಾರ; ತಹಶೀಲ್ದಾರ್ ನೆರವೇರಿಸಿದರು ಅಂತ್ಯಸಂಸ್ಕಾರ!  

ಕೋವಿಡ್-19 ರಿಂದ ಮೃತಪಟ್ಟ ವ್ಯಕ್ತಿಯ ಅಂತ್ಯಕ್ರಿಯೆ ನಡೆಸಲು ಮಗ ನಿರಾಕರಿಸಿದಾಗ ತಹಶೀಲ್ದಾರ್ ಒಬ್ಬರು ಪಾರ್ಥಿವ ಶರೀರದ ಚಿತೆಗೆ ಅಗ್ನಿಸ್ಪರ್ಶ ಮಾಡಿ, ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.
ಕೋವಿಡ್-19 ನಿಂದ ಮೃತನ ಅಂತ್ಯಕ್ರಿಯೆ ನಡೆಸಲು ಮಗನ ನಕಾರ; ತಹಶೀಲ್ದಾರ್ ನೆರವೇರಿಸಿದರು ಅಂತ್ಯಸಂಸ್ಕಾರ!
ಕೋವಿಡ್-19 ನಿಂದ ಮೃತನ ಅಂತ್ಯಕ್ರಿಯೆ ನಡೆಸಲು ಮಗನ ನಕಾರ; ತಹಶೀಲ್ದಾರ್ ನೆರವೇರಿಸಿದರು ಅಂತ್ಯಸಂಸ್ಕಾರ!
Updated on: 

ಭೋಪಾಲ್: ಕೋವಿಡ್-19 ರಿಂದ ಮೃತಪಟ್ಟ ವ್ಯಕ್ತಿಯ ಅಂತ್ಯಕ್ರಿಯೆ ನಡೆಸಲು ಮಗ ನಿರಾಕರಿಸಿದಾಗ ತಹಶೀಲ್ದಾರ್ ಒಬ್ಬರು ಪಾರ್ಥಿವ ಶರೀರದ ಚಿತೆಗೆ ಅಗ್ನಿಸ್ಪರ್ಶ ಮಾಡಿ, ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.

ಭೋಪಾಲ್ ನಲ್ಲಿ ಈ ಘಟನೆ ನಡೆದಿದ್ದು, ಪ್ರೇಮ್ ಸಿಂಗ್ ಎಂಬ ವ್ಯಕ್ತಿ ಏ.20 ರಂದು ಕೋವಿಡ್-19 ಸೋಂಕಿನಿಂದಾಗಿ ಮೃತಪಟ್ಟಿದ್ದರು. ಪತ್ನಿ, ಪುತ್ರ, ಪುತ್ರಿ, ಅಳಿಯ ಮರು ದಿನ ಅಂತ್ಯ ಸಂಸ್ಕಾರ ಮಾಡುವುದಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದ್ದರು. ಆದರೆ ಮರುದಿನ ಅಂತ್ಯಕ್ರಿಯೆ ನಡೆಸಲು ಹಿಂದೇಟು ಹಾಕಿದರು. ಆದರೆ ತಹಶೀಲ್ದಾರ್ ಗುಲಾಬ್ ಸಿಂಗ್ ಅಂತ್ಯಕ್ರಿಯೆ ನಡೆಸಿದ್ದಾರೆ.  

ಎಎನ್ಐ ಜೊತೆ ಈ ಬಗ್ಗೆ ಮಾತನಾಡಿರುವ ಗುಲಾಬ್ ಸಿಂಗ್ ಪಿಪಿಇ ಧರಿಸಿ ಅಂತ್ಯಕ್ರಿಯೆ ನಡೆಸುವಂತೆ ಮನವೊಲಿಸಲು ಯತ್ನಿಸಿದ್ದೆ. ಆದರೆ ಸೋಂಕು ತಗುಲುವ ಭಯದಲ್ಲಿ ಆತ ತಂದೆಯ ಅಂತ್ಯಕ್ರಿಯೆ ನಡೆಸಲು ನಿರಾಕರಿಸಿದ ಆತನ ತಾಯಿಯೂ ಮಗನ ನಿರ್ಧಾರಕ್ಕೆ ಬೆಂಬಲ ಸೂಚಿಸಿದ್ದರು. ಆದ್ದರಿಂದ ನಾನು, ಇನ್ನಿತರ ಕೆಲವರು ಸೇರಿ ಅಂತ್ಯಕ್ರಿಯೆ ನಡೆಸಿದೆವು, ಅಂತ್ಯಕ್ರಿಯೆ ವೇಳೆ ಕುಟುಂಬ ಸದಸ್ಯರು ಭಾಗಿಯಾಗಿದ್ದರು. ಆದರೆ ಅಂತರ ಕಾಯ್ದುಕೊಂಡಿದ್ದರು ಎಂದು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com