ಸೋಂಕಿನಿಂದ ಮೃತಪಟ್ಟ ವ್ಯಕ್ತಿಯನ್ನು ಅಂತ್ಯಸಂಸ್ಕಾರಕ್ಕೆ ತೆಗೆದುಕೊಂಡು ಹೋಗುತ್ತಿರುವ ಚಿತ್ರ
ಸೋಂಕಿನಿಂದ ಮೃತಪಟ್ಟ ವ್ಯಕ್ತಿಯನ್ನು ಅಂತ್ಯಸಂಸ್ಕಾರಕ್ಕೆ ತೆಗೆದುಕೊಂಡು ಹೋಗುತ್ತಿರುವ ಚಿತ್ರ

ಕೋವಿಡ್-19: ಮೇ ಮಧ್ಯಭಾಗದಲ್ಲಿ 38 ಸಾವಿರ ಜನರ ಸಾವು, 5.35 ಲಕ್ಷ ಮಂದಿಗೆ ಸೋಂಕು- ಅಂದಾಜು

ಪ್ರಸ್ತುತ ದೇಶದಲ್ಲಿ ಕೋವಿಡ್-19 ಸೋಂಕು ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವಂತೆ ಆಘಾತಕಾರಿ ಸಂಗತಿಯೊಂದು ಹೊರಬಿದ್ದಿದೆ.
Published on

ನವದೆಹಲಿ: ಪ್ರಸ್ತುತ ದೇಶದಲ್ಲಿ ಕೋವಿಡ್-19 ಸೋಂಕು ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವಂತೆ ಆಘಾತಕಾರಿ ಸಂಗತಿಯೊಂದು ಹೊರಬಿದ್ದಿದೆ.

ಈವರೆಗೂ ಕೋವಿಡ್- 19 ಸೋಂಕಿನಿಂದ 652 ಮಂದಿ ಮೃತಪಟ್ಟಿದ್ದು, ಮೇ ಮಧ್ಯಭಾಗಕ್ಕೆ ಇದರ ಸಂಖ್ಯೆ 38 ಸಾವಿರದ 220ಕ್ಕೆ ಏರಿಕೆಯಾಗಲಿದೆ. ಪಾಸಿಟಿವ್ ಪ್ರಕರಣಗಳ ಸಂಖ್ಯೆ ಸುಮಾರು 5. 35 ಲಕ್ಷ ತಲುಪಲಿದ್ದು, ಆಸ್ಪತ್ರೆಗಳಲ್ಲಿ 76 ಸಾವಿರ ಐಸಿಯು ಬೆಡ್ ಗಳ ಅವಶ್ಯಕತ ಬೇಕಾಗಲಿದೆ ಎಂದು ಊಹಿಸಲಾಗಿದೆ. 

ಜವಾಹರ್ ಲಾಲ್ ನೆಹರು ಅಡ್ವಾಸ್ಡ್ ಸೈಂಟಿಪಿಕ್ ರಿಸರ್ಚ್ ಸೆಂಟರ್ (ಜೆಎನ್ ಸಿಎಸ್ ಆರ್ ) ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ , ಬಾಂಬೆ ಐಐಟಿ ಮತ್ತು ಪುಣೆಯ ಸಶಸ್ತ್ರ ಪಡೆಗಳ ವೈದ್ಯಕೀಯ ಕಾಲೇಜುಗಳ 'ಕೋವಿಡ್-19 ಮೆಡ್ ಇನ್ವೆಂಟರಿ- ಶೈಕ್ಷಣಿಕ ಉಪಕ್ರಮದ ಸಂಖ್ಯಾಶಾಸ್ತ್ರೀಯ ಮಾದರಿ ಆಧಾರದಲ್ಲಿ ಹೀಗೆ ಅಂದಾಜಿಸಲಾಗಿದೆ.ಇದನ್ನು ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರ (ಪಿಎಸ್‌ಎ) ಕೆ ವಿಜಯರಾಘವನ್  ಒಪ್ಪಿಕೊಂಡಿದ್ದಾರೆ 

ಇಟಲಿ ಮತ್ತು ನ್ಯೂಯಾರ್ಕ್ ರಾಜ್ಯಗಳಲ್ಲಿನ ಕೋವಿಡ್- 19 ಸೋಂಕಿನ ಪ್ರಕರಣ ಹಾಗೂ ಸಾವಿನ ಸಂಖ್ಯೆಯೂ ಇದೇ ಮಾದರಿಯನ್ನು ಆಧಾರಿಸಿದೆ. ನಿಜವಾದ ಫಲಿತಾಂಶಗಳೊಂದಿಗೆ ನಿಕಟವಾಗಿ ಹೊಂದಾಣಿಕೆಯಾಗಲಿದೆ ಎಂದು ಸಂಶೋಧಕರು ಹೇಳಿದ್ದಾರೆ. 

ಪ್ರಸ್ತುತದ ಮಾಹಿತಿ ಆಧಾರದಂತೆ ಮೇ 19ರೊಳಗೆ ಸುಮಾರು 38 ಸಾವಿರ ಜನರು ಸಾವನ್ನಪ್ಪುವ ಸಾಧ್ಯತೆ ಇರುವುದಾಗಿ ಅಂದಾಜಿಸಲಾಗಿದೆ.ಇದರಲ್ಲಿ ಬದಲಾವಣೆಯಾಗಬಹುದು, ಐಸಿಯು ಮತ್ತಿತರ ಆರೋಗ್ಯ ಸಂಬಂಧಿತ ಮೂಲಸೌಕರ್ಯಗಳನ್ನು ಹೆಚ್ಚಿಸಬೇಕಾದ ಅಗತ್ಯವಿದೆ ಎಂದು ಜೆಎನ್ ಸಿಎಎಸ್ ಆರ್ ಸಹಾಯಕ ಪ್ರೊಫೆಸರ್ ಸಂತೋಷ್ ಅನ್ಸುಮಾಲಿ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ. 

ನಾಲ್ಕು ವಾರಗಳೊಳಗೆ ಸಂಭವಿಸಲಿರುವ ಸಾವಿನ ಸಂಖ್ಯೆಯನ್ನು ಈ ರೀತಿಯಲ್ಲಿ ಊಹಿಸಲಾಗಿದೆ. ಏಪ್ರಿಲ್ 28ರೊಳಗೆ ಸಾವಿನ ಸಂಖ್ಯೆ 1, 012ಕ್ಕೆ ತಲುಪಲಿದೆ. ಮೇ 5 ರೊಳಗೆ 3258, ಮೇ 12ರೊಳಗೆ 10, 924, ಮೇ 19ರೊಳಗೆ 38,220 ಜನರಿಗೆ ತಲುಪಲಿದೆ ಎಂದು ಅಂದಾಜಿಸಲಾಗಿದೆ. 

ಮೇ 3ಕ್ಕೆ ಮುಕ್ತಾಯವಾಗಲಿರುವ ಲಾಕ್ ಡೌನ್ ನ್ನು ಈ ಮಾದರಿ ಪರಿಗಣಿಸಿದೆ. ಲಾಕ್ ಡೌನ್ ಮುಗಿದ ನಂತರ ಆಗಬಹುದಾದ ಸಾವಿನ ಮೇಲೆ ಇದು ಪರಿಣಾಮ ಬೀರಲಿದೆ. ಲಾಕ್ ಡೌನ್ ವಿಸ್ತರಣೆಯಾದರೆ ಸಾವಿನ ಸಂಖ್ಯೆಯ ಕಡಿಮೆಯಾಗಬಹುದು ಎಂದು ಊಹಿಸಲಾಗಿದೆ ಎಂದು ಅನ್ಸುಮಾಲಿ ಹೇಳಿದ್ದಾರೆ. 

ಸೋಂಕಿನ ಸಂಖ್ಯೆ ಹೆಚ್ಚಾಗುವುದರಿಂದ ಜಿಲ್ಲಾ ಮಟ್ಟದಲ್ಲಿ ವೈದ್ಯರು, ವೈದ್ಯಕೀಯ ಸಿಬ್ಬಂದಿ, ಪಿಪಿಇ, ವೆಂಟಿಲೇಟರ್, ಅಕ್ಸಿಜನ್, ಮಾಸ್ಕ್ ಮತ್ತಿತರ  ಮೂಲ ಸೌಕರ್ಯ , ಸಲಕರಣೆಗಳ ಖರೀದಿ ಮತ್ತು ಮಾನವ ಸಂಪನ್ಮೂಲಗಳನ್ನು ಹೊಂದಿಸಿಕೊಳ್ಳಲು ಈ ಮಾದರಿ ನೆರವಾಗಲಿದೆ ತಜ್ಞರ ತಂಡ ತಿಳಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com