ಮುಂಗಾರಿನಲ್ಲಿ ಕೋವಿಡ್-19 ಆರ್ಭಟ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ: ವಿಜ್ಞಾನಿಗಳು!

ಲಾಕ್ ಡೌನ್ ಮುಗಿದ ನಂತರ ಕೆಲ ವಾರಗಳವರೆಗೂ ಕೋವಿಡ್-19 ಸೋಂಕಿನ ಪ್ರಕರಣ ಸ್ವಲ್ಪ ಕಡಿಮೆಯಾದರೂ ಜುಲೈ ಕೊನೆಯ ವಾರ ಅಥವಾ ಆಗಸ್ಟ್ ತಿಂಗಳಲ್ಲಿ ಕೋವಿಡ್-19 ಎರಡನೇ ಹಂತದ ಬಿರುಗಾಳಿ ಬೀಸಲಿದ್ದು, ಮುಂಗಾರು ಅವಧಿಯಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಏರಿಕೆಯಾಗಲಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಲಾಕ್ ಡೌನ್ ಮುಗಿದ ನಂತರ ಕೆಲ ವಾರಗಳವರೆಗೂ ಕೋವಿಡ್-19 ಸೋಂಕಿನ ಪ್ರಕರಣ ಸ್ವಲ್ಪ ಕಡಿಮೆಯಾದರೂ ಜುಲೈ ಕೊನೆಯ ವಾರ ಅಥವಾ ಆಗಸ್ಟ್ ತಿಂಗಳಲ್ಲಿ ಕೋವಿಡ್-19 ಎರಡನೇ ಹಂತದ ಬಿರುಗಾಳಿ ಬೀಸಲಿದ್ದು, ಮುಂಗಾರು ಅವಧಿಯಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಏರಿಕೆಯಾಗಲಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಈ ಅವಧಿಯಲ್ಲಿ ದೇಶದಲ್ಲಿ ಸೋಂಕಿನ ಏರಿಕೆ ಗತಿ ಸಾಮಾಜಿಕ ಅಂತರ ನಿಯಂತ್ರಣ ಹಾಗೂ ನಿರ್ಬಂಧ ಸಡಿಲಿಕೆ ನಂತರ ಸೋಂಕಿನ ಹರಡುವಿಕೆಯ ಮಟ್ಟವನ್ನು ಅವಲಂಬಿಸಿರುತ್ತದೆ ಎಂದು ಅವರು ತಿಳಿಸಿದ್ದಾರೆ.

ಮುಂಗಾರು ಅವಧಿಯಲ್ಲಿ ಕೊರೋನಾವೈರಸ್ ಹೊಸ ಸೋಂಕಿನ ಪ್ರಕರಣಗಳು ಹೆಚ್ಚಾಗಲಿದ್ದು, ಇದನ್ನು ಎರಡನೇ ಬಿರುಗಾಳಿ ಎಂದು ಪರಿಗಣಿಸಲಾಗುತ್ತದೆ ಎಂದು  ಶಿವ್ ನಾಡರ್ ವಿಶ್ವವಿದ್ಯಾನಿಯದ ಸಹಾಯಕ ಪ್ರೊಫೆಸರ್ ಸಮಿತ್ ಭಟ್ಟಾಚಾರ್ಯ  ತಿಳಿಸಿದ್ದಾರೆ.

ಜುಲೈ ಕೊನೆಯ ವಾರ ಅಥವಾ ಆಗಸ್ಟ್  ತಿಂಗಳಲ್ಲಿ ಎರಡನೇ ಹಂತದಲ್ಲಿ ಕೋವಿಡ್ ಅಬ್ಬರ ಹೆಚ್ಚಾಗಬಹುದು ಆದಾಗ್ಯೂ, ಈ ಅವಧಿಯಲ್ಲಿ ನಾವು ಹೇಗೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುತ್ತೇವೆ ಎಂಬುದನ್ನು ಅದು ಅವಲಂಬಿಸಿದೆ ಎಂದು ಅವರು ತಿಳಿಸಿದ್ದಾರೆ.

ಬೆಂಗಳೂರಿನ ವಿಜ್ಞಾನ ಸಂಸ್ಥೆಯ ಪ್ರೊಫೆಸರ್ ರಾಜೇಶ್ ಸುಂದರೇಶ್ ಕೂಡಾ ಈ ಅಭಿಪ್ರಾಯವನ್ನು ಒಪ್ಪಿಕೊಂಡಿದ್ದಾರೆ. ಸಹಜ ಸ್ಥಿತಿಗೆ ಒಂದು ಬಾರಿ ಮರಳಿದ ನಂತರ ಸೋಂಕಿನ  ಪ್ರಕರಣಗಳು ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಚೀನಾದಲ್ಲಿ ಪ್ರವಾಸದ ನಿರ್ಬಂಧವನ್ನು ಸ್ಪಲ್ಪ ಸಡಿಲಿಸಿದ ನಂತರ  ಆದ್ದಂತಹ ಬೆಳವಣಿಗೆಗಳನ್ನು ನಾವು ನೋಡಿದ್ದೇವೆ ಎಂಬುದಾಗಿ ರಾಜೇಶ್ ಸುಂದರೇಶ್ ಹೇಳಿದ್ದಾರೆ.

ಮಾರ್ಚ್ 25 ರಂದು ದೇಶಾವ್ಯಾಪ್ತಿ ಲಾಕ್ ಡೌನ್ ಘೋಷಣೆಯಾದಾಗ ಕೋವಿಡ್ -19 ಸೋಂಕಿನಿಂದ 13 ಜನರು ಮೃತಪಟ್ಟು, 618 ಜನರಲ್ಲಿ ಸೋಂಕು ಕಾಣಿಸಿಕೊಂಡಿತ್ತು.ಇಂದಿನ ಮಾಹಿತಿ ಪ್ರಕಾರ ಮೃತರ ಸಂಖ್ಯೆ 718ಕ್ಕೆ ಏರಿಕೆಯಾಗಿದ್ದು, ಒಟ್ಟಾರೇ 23 ಸಾವಿರದ 77 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಕಳೆದ 10 ದಿನಗಳ ಅವಧಿಯಲ್ಲಿ ದುಪ್ಪಟ್ಟು ಸಂಖ್ಯೆಯಲ್ಲಿ ಗುಣಮುಖರಾದವರು ಇದ್ದಾರೆ. 

ಕಳೆದ ಕೆಲವು ದಿನಗಳಲ್ಲಿ ಸೋಂಕಿನ ಪ್ರಮಾಣ ಕಡಿಮೆಯಾಗುತ್ತಿದೆ. ಆದರೆ, ಚೀನಾ ಮತ್ತು ಯುರೋಪಿನಲ್ಲಿ ಇತ್ತೀಚಿಗೆ ನಡೆಸಲಾದ ಅಧ್ಯಯನಗಳ ಪ್ರಕಾರ, ಹಿಂದಿನ ಹಂತದಲ್ಲಿ ಗುಣಮುಖರಾದವರಲ್ಲಿಯೂ ಸೋಂಕು ಕಂಡುಬಂದಿದೆ. ಆದ್ದರಿಂದ ಒಂದು ಬಾರಿ ಕಾಣಿಸಿಕೊಂಡ ನಂತರ ಮತ್ತೆ ಬರುವುದಿಲ್ಲ ಎಂದು ಅಂದುಕೊಳ್ಳಲಾಗದು, ಆದ್ದರಿಂದ ಸಾಕಷ್ಟು ಮುಂಜಾಗ್ರತೆ ವಹಿಸುವಂತೆ ಅವರು ಜನರಲ್ಲಿ ಮನವಿ ಮಾಡಿದ್ದಾರೆ. 

ಕೋವಿಡ್-19 ಸೋಂಕು ಹರಡದಂತೆ ಕೈಗೊಳ್ಳಲಾಗಿರುವ  ಐಸೋಲೇಷನ್, ಹೋಮ್ ಕ್ವಾರಂಟೈನ್, ಸಾಮಾಜಿಕ ಅಂತರ, ಮತ್ತಿತರ ನಿರ್ಬಂಧಗಳನ್ನು ಭಾರತೀಯ ವಿಜ್ಞಾನ ಸಂಸ್ಥೆ ಮತ್ತು ಟಿಐಎಫ್ ಆರ್ ಸಂಶೋಧಕರು ವಿಶ್ಲೇಷಿಸಿದ್ದು, ಕೆಲ ದಿನಗಳವರೆಗೂ ಇವುಗಳನ್ನು ಮುಂದುವರೆಸಬೇಕೆಂದು ಸಲಹೆ ನೀಡಿದ್ದಾರೆ. 

ಎರಡನೇ ಹಂತದಲ್ಲಿ ಸಾರ್ವಜನಿಕ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಸೋಂಕು ಗುರುತಿಸುವಿಕೆ, ಪ್ರತ್ಯೇಕಿಸುವಿಕೆ. ಹೊಸ ಸೋಂಕು ತಡಗೆಟ್ಟದಿದ್ದರೆ ತೀವ್ರ ರೀತಿಯ ಪರಿಣಾಮ ಬೀರುವ ಸಾಧ್ಯತೆ ಇರುವುದಾಗಿ ಬೆಂಗಳೂರು ಮತ್ತು ಮುಂಬೈ ಮೂಲದ ವಿಜ್ಞಾನಿಗಳು ನಡೆಸಿದ ಅಧ್ಯಯನದಲ್ಲಿ ಸಲಹೆ ನೀಡಲಾಗಿದೆ. 

ಲಾಕ್ ಡೌನ್ ನಿಯಮ ಸಡಿಲಿಕೆಗೊಂಡಾಗ ನಗರಗಳಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಅದಕ್ಕೆ ತಕ್ಕ ಹಾಗೆ ಕೋವಿಡ್-19 ಪರೀಕ್ಷೆ, ಗುರುತಿಸುವಿಕೆ, ಕ್ವಾರೆಂಟೈನ್, ಐಸೋಲೇಷನ್, ಲಸಿಕೆ ಮತ್ತಿತರ ಅಗತ್ಯ ಸೌಕರ್ಯಗಳನ್ನು ಕಲ್ಪಿಸಬೇಕಾಗುತ್ತದೆ. ಸಾರ್ವಜನಿಕ ಆರೋಗ್ಯದ ಮೇಲೆ ಯಾವುದೇ ರೀತಿಯ ಪರಿಣಾಮ ಬೀರದ ರೀತಿಯಲ್ಲಿ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ನಮ್ಮ ತಂಡ ಗಮನ ಹರಿಸಿದೆ ಎಂದು ಸುಂದರೇಶ್ ತಿಳಿಸಿದ್ದಾರೆ.

ಕೋವಿಡ್-19 ಸೋಂಕು ಹರಡದಂತೆ ಹಾಗೂ ಜೀವಕ್ಕೆ ಅಪಾಯ ಎದುರಾಗದಂತೆ ಇರುವ ಏಕೈಕ ಪರ್ಯಾಯ ಮಾರ್ಗ ಯಾವುದೆಂದರೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದಾಗಿದೆ ಎಂದು ಹಾರ್ವಡ್ ಚಾನ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ಇತ್ತೀಚಿಗೆ ವಿಶ್ಲೇಷಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com