ಹೊಸ ಮಾರ್ಗಸೂಚಿ: ನಗರಸಭೆ- ಪುರಸಭೆ ವ್ಯಾಪ್ತಿಯಲ್ಲಿ ಅಂಗಡಿ ತೆರೆಯಲು ಕೇಂದ್ರದ ಆದೇಶ

ಕೊರೋನಾ ವೈರಸ್ ತಡೆಗೆ ಲಾಕ್ ಡೌನ್ ಮಾಡಿ ಒಂದು ತಿಂಗಳ ಬಳಿಕ ಸಾರ್ವಜನಿಕರಿಗೆ ಸಹಾಯವಾಗುವ ನಿರ್ಧಾರ ಕೈಗೊಂಡಿರುವ ಕೇಂದ್ರ ಸರ್ಕಾರ ವಸತಿ ಸಮುಚ್ಚಯಗಳ ಅಕ್ಕಪಕ್ಕ ಇರುವ ಅಂಗಡಿಗಳನ್ನು, ಸ್ಥಳೀಯ ಅಂಗಡಿಗಳನ್ನು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ತೆರೆಯಲು ಅವಕಾಶ ನೀಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ನವದೆಹಲಿ: ಕೊರೋನ ನಿಯಂತ್ರಣಕ್ಕೆ ಬಂದಿರುವ ನಗರಸಭೆ ಹಾಗೂ ಪುರಸಭೆ ವ್ಯಾಪ್ತಿಗಳ ವಸತಿ ಪ್ರದೇಶಗಳಲ್ಲಿ ಬರುವ ಅಂಗಡಿಗಳನ್ನು ತೆರೆಯಲು ಹೊಸ ಮಾರ್ಗಸೂಚಿ ಪ್ರಕಾರ ಅವಕಾಶ ನೀಡಿ, ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.

ಆದರೆ ಸೋಂಕು ಹರಡದಂತೆ ನೀಡಿರುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆಯೂ ಎಚ್ಚರಿಕೆ ನೀಡಿದೆ. ವಸತಿ ಪ್ರದೇಶಗಳಲ್ಲಿನ ಅಂಗಡಿಗಳನ್ನು ತೆರೆಯಲು ಅವಕಾಶವಿದ್ದರೂ ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಕಡ್ಡಾಯ. ಮೇಲಾಗಿ ಶೇಕಡ 50ಕ್ಕಿಂತ ಕಡಿಮೆ ಸಿಬ್ಬಂದಿ ಇರಬೇಕು ಎಂಬ ನಿಯಮ ಪಾಲನೆ ಮಾಡಬೇಕು ಎಂದೂ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ. ಆದರೆ ಮಾರುಕಟ್ಟೆ ಸ್ಥಳಗಳು, ಮಲ್ಟಿ ಬ್ರಾಂಡ್ ಮಾಲ್ ಗಳು ಕಾರ್ಯನಿರ್ವಹಣೆ ಮಾಡಲು ಅವಕಾಶವಿಲ್ಲ.

ಆದರೆ ಜನನಿಬಿಡ ನಗರ ಪ್ರದೇಶಗಳ ಮಾರುಕಟ್ಟೆ ಪ್ರದೇಶಗಳಲ್ಲಿರುವ ಅಂಗಡಿಗಳು,ನಗರ ಪಾಲಿಕೆ ಪ್ರದೇಶಗಳಲ್ಲಿರುವ ಮಲ್ಟಿ ಬ್ರಾಂಡ್ ಮತ್ತು ಸಿಂಗಲ್ ಬ್ರಾಂಡ್ ಮಳಿಗೆಗಳಿಗೆ ಮೇ 3ರವರೆಗೆ ತೆರೆಯಲು ಅವಕಾಶವಿರುವುದಿಲ್ಲ.

ಈ ಕುರಿತ ಆದೇಶವನ್ನು ಕೇಂದ್ರ ಗೃಹ ಇಲಾಖೆ ಕಾರ್ಯದರ್ಶಿ ಅಜಯ್ ಬಲ್ಲಾ ನಿನ್ನೆ ರಾತ್ರಿ ಹೊರಡಿಸಿದ್ದಾರೆ.
 

 

ಷರತ್ತು ಬದ್ಧವಾಗಿ ಅಂಗಡಿ ತೆರೆಯಲು ಅವಕಾಶ: ಲಾಕ್ ಡೌನ್ ಸಮಯದಲ್ಲಿ ವಸತಿ ಸಮುಚ್ಚಯಗಳು, ಜನವಿರಳ ಪ್ರದೇಶಗಳು, ಗ್ರಾಮಾಂತರ ಭಾಗಗಳ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಿರುವ ಸರ್ಕಾರ ಕೆಲವು ಷರತ್ತುಗಳನ್ನು ಹಾಕಿದೆ. ಅಂಗಡಿಗಳಲ್ಲಿ ಶೇಕಡಾ 50ರಷ್ಟು ಮಾತ್ರ ಕೆಲಸಗಾರರಿರಬೇಕಾಗಿದ್ದು ಮಾಸ್ಕ್ ಮತ್ತು ಸಾಮಾಜಿಕ ಅಂತರ ಕಾಯ್ದುಕೊಂಡು ಕೆಲಸ ಮಾಡಬೇಕಾಗುತ್ತದೆ.

ಈ ವಿನಾಯ್ತಿ ಕೊರೋನಾ ವೈರಸ್ ಹಾಟ್ ಸ್ಪಾಟ್ ಮತ್ತು ಕಂಟೈನ್ ಮೆಂಟ್ ಪ್ರದೇಶಗಳಿಗೆ ಅನ್ವಯವಾಗುವುದಿಲ್ಲ.ಅಲ್ಲಿ ಯಥಾಪ್ರಕಾರ ಲಾಕ್ ಡೌನ್ ನಿಯಮ ಮುಂದುವರಿಯುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com