ದುಬಾರಿ ಬೆಲೆಗೆ ಚೀನಾ ಕೋವಿಡ್-19 ಟೆಸ್ಟ್ ಕಿಟ್ ಗಳನ್ನು ಖರೀದಿಸಿದ ಭಾರತ: ನ್ಯಾಯಾಂಗ ಹೋರಾಟದಲ್ಲಿ ಬಹಿರಂಗ

ಮಹಾಮಾರಿ ಕೊರೋನಾವೈರಸ್ ನಿಯಂತ್ರಣಕ್ಕಾಗಿ ಭಾರತ ದುಬಾರಿ ಬೆಲೆ ನೀಡಿ ಚೀನಾದ ಕ್ಷಿಪ್ರ ಅಂಟಿಬಾಡಿ ಟೆಸ್ಟ್ ಕಿಟ್ ಗಳನ್ನು ಖರೀದಿಸಿರುವುದು ತಿಳಿದುಬಂದಿದೆ. ಆದರೆ, ದೋಷಪೂರಿತ ಫಲಿತಾಂಶದಿಂದಾಗಿ ಅನೇಕ ರಾಜ್ಯಗಳಲ್ಲಿ ಅವುಗಳನ್ನು  ಬಳಸದೆ ಹಾಗೆಯೇ ಇಡಲಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಮಹಾಮಾರಿ ಕೊರೋನಾವೈರಸ್ ನಿಯಂತ್ರಣಕ್ಕಾಗಿ ಭಾರತ ದುಬಾರಿ ಬೆಲೆ ನೀಡಿ ಚೀನಾದ ಕ್ಷಿಪ್ರ ಅಂಟಿಬಾಡಿ ಟೆಸ್ಟ್ ಕಿಟ್ ಗಳನ್ನು ಖರೀದಿಸಿರುವುದು ತಿಳಿದುಬಂದಿದೆ.ಆದರೆ,ದೋಷಪೂರಿತ ಫಲಿತಾಂಶದಿಂದಾಗಿ ಅನೇಕ ರಾಜ್ಯಗಳಲ್ಲಿ ಅವುಗಳನ್ನು  ಬಳಸದೆ ಹಾಗೆಯೇ ಇಡಲಾಗಿದೆ.

ಭಾರತೀಯ ವಿತರಕ ಸಂಸ್ಥೆ ರಿಯಲ್ ಮೆಟಬಾಲಿಕ್ಸ್  ಮೂಲಕ ದುಬಾರಿ ಬೆಲೆಗೆ ಚೀನಾದ ಪರೀಕ್ಷಾ ಕಿಟ್ ಗಳನ್ನು ಭಾರತ ಸರ್ಕಾರಕ್ಕೆ ಮಾರಾಟ ಮಾಡಿದೆ.ದೆಹಲಿ ಹೈಕೋರ್ಟ್ ಮೆಟ್ಟಿಲೇರಿರುವ ಆಮದುದಾರರು ಮತ್ತು ವಿತರಕರ ನಡುವಿನ ಕಾನೂನು ವಿವಾದದಿಂದ ಇದು ತಿಳಿದುಬಂದಿದೆ. 

ಚೀನಾದ ವೊಡ್ಫೊ ಸಂಸ್ಥೆಯಿಂದ  ಐದು ಲಕ್ಷ ಕ್ಷಿಪ್ರ ಅಂಟಿಬಾಡಿ ಟೆಸ್ಟ್ ಕಿಟ್ ಗಳನ್ನು ಖರೀದಿಸಲು ಭಾರತ ಮಾರ್ಚ್ 27 ರಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ ಮೂಲಕ ಆರ್ಡರ್ ಮಾಡಿತ್ತು. ಐಸಿಎಂಆರ್ ಮತ್ತು ಅರ್ಕ್ ಫಾರ್ಮಸ್ಪೂಟಿಕಲ್ಸ್ , ನಡುವೆ ಸಹಿ ಒಪ್ಪಂದ ನಡೆದಿತ್ತು.

ಕ್ಷಿಪ್ರ ಅಂಟಿಬಾಡಿ ಟೆಸ್ಟ್ ಗಳನ್ನೊಳಗೊಂಡಂತೆ 650, 000 ಕಿಟ್ ಗಳನ್ನು ಭಾರತಕ್ಕೆ ಪೂರೈಸಲಾಗುತ್ತಿದೆ ಎಂದು ಏಪ್ರಿಲ್ 16 ರಂದು ಚೀನಾದ ಭಾರತೀಯ ರಾಯಭಾರಿ ವಿಕ್ರಮ್ ಮಿಶ್ರಿ ಟ್ವೀಟ್ ಮಾಡಿದ್ದರು. 

ಆಮದುದಾರ ಸಂಸ್ಥೆ ಮ್ಯಾಟ್ರಿಕ್ಸ್ ಚೀನಾದಿಂದ ತಲಾ 245 ರೂ.ನಂತೆ ಕಿಟ್ ಗಳನ್ನು ಖರೀದಿಸಿದೆ. ವಿತರಕರಾದ ರಿಯಲ್ ಮೆಟಾಬಾಲಿಕ್ಸ್ ಮತ್ತು ಅರ್ಕ್ ಫಾರ್ಮಸ್ಪೂಟಿಕಲ್ಸ್  ಇದೇ ಕಿಟ್ ಗಳನ್ನು ತಲಾ 600 ರೂ.ನಂತೆ ಸರ್ಕಾರಕ್ಕೆ ಮಾರಾಟ ಮಾಡಿವೆ. ಅಂದರೆ ಶೇ. 60 ರಷ್ಟು ಬೆಲೆಯಲ್ಲಿ ವ್ಯತ್ಯಾಸ ಕಂಡುಬಂದಿದೆ. 

ತಮಿಳುನಾಡು ಸರ್ಕಾರ ಕೂಡಾ ಆಮದುದಾರ ಮ್ಯಾಟ್ರಿಕ್ಸ್ ಮೂಲಕ ಮತ್ತೊಂದು ವಿತರಕ ಸಂಸ್ಥೆ ಶಾನ್ ಬಯೋಟೆಕ್ ನಿಂದ  ಸಂಸ್ಥೆಯಿಂದ  ಇದೇ ಕಿಟ್ ಗಳನ್ನು ತಲಾ 600 ರೂ.ನಂತೆ  ಖರೀದಿಸಿದಾಗ ಸಮಸ್ಯೆ ಆರಂಭವಾಗಿದೆ. ತಮಿಳುನಾಡು ಮತ್ತು ಶಾನ್ ಬಯೋಟೆಕ್ ನಡುವಿನ ಖರೀದಿ ಒಪ್ಪಂದದ ದಾಖಲೆಗಳು ಕೂಡಾ ಲಭ್ಯವಾಗಿವೆ.

ಮ್ಯಾಟ್ರಿಕ್ಸ್ ಸಂಸ್ಥೆ ಮತ್ತೊಂದು ವಿತರಕ ಸಂಸ್ಥೆ ಶಾನ್ ಬಯೋಟೆಕ್ ನೊಂದಿಗೆ ತೊಡಗಿಸಿಕೊಂಡಿದ್ದು, ತಮಿಳುನಾಡು ಜೊತೆಗೆ ಒಪ್ಪಂದ ಮಾಡಿಕೊಳ್ಳುವ ಮೂಲಕ ನಿಯಮ ಉಲ್ಲಂಘಿಸಿದೆ ಎಂದು ಮೆಟಾಬಾಲಿಕ್ಸ್ ಸಂಸ್ಥೆ ಹೈಕೋರ್ಟ್ ನಲ್ಲಿ ಹೇಳಿದೆ 

ದುಬಾರಿ ಬೆಲೆಗೆ  ಭಾರತ ಚೀನಾದ ಕಿಟ್ ಗಳನ್ನು ಖರೀದಿಸಿರುವುದು ವಿಚಾರಣೆ ವೇಳೆ ತಿಳಿದುಬಂದಿದ್ದು, ಪ್ರತಿ ಕಿಟ್ ಗಳ ಬೆಲೆಯನ್ನು 400 ರೂ. ಗೆ ಇಳಿಸಬೇಕೆಂದು ನ್ಯಾಯಾಲಯ ನಿರ್ದೇಶನ ನೀಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com