ಲಾಕ್ ಡೌನ್ ಕರ್ತವ್ಯ ಪಾಲನೆ ವೇಳೆ ಕೈ ಕಳೆದುಕೊಂಡಿದ್ದ ಪಂಜಾಬ್ ಪೊಲೀಸ್ ಅಧಿಕಾರಿಗೆ ಭವ್ಯ ಸ್ವಾಗತ!

ಲಾಕ್ ಡೌನ್ ಕರ್ತವ್ಯ ಪಾಲನೆ ವೇಳೆ ದುಷ್ಕರ್ಮಿಗಳ ಅಟ್ಟಹಾಸಕ್ಕೆ ಕೈ ಕಳೆದುಕೊಂಡಿದ್ದ ಪಂಜಾಬ್ ಪೊಲೀಸ್ ಅಧಿಕಾರಿ ಹರ್ಜೀತ್ ಸಿಂಗ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಸ್ಥಳೀಯರು ಅಧಿಕಾರಿಗೆ ಭವ್ಯ ಸ್ವಾಗತ ಕೋರಿದ್ದಾರೆ.
ಹರ್ಜೀತ್ ಸಿಂಗ್ ಸ್ವಾಗತ
ಹರ್ಜೀತ್ ಸಿಂಗ್ ಸ್ವಾಗತ

ಚಂಡೀಘಡ: ಲಾಕ್ ಡೌನ್ ಕರ್ತವ್ಯ ಪಾಲನೆ ವೇಳೆ ದುಷ್ಕರ್ಮಿಗಳ ಅಟ್ಟಹಾಸಕ್ಕೆ ಕೈ ಕಳೆದುಕೊಂಡಿದ್ದ ಪಂಜಾಬ್ ಪೊಲೀಸ್ ಅಧಿಕಾರಿ ಹರ್ಜೀತ್ ಸಿಂಗ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಸ್ಥಳೀಯರು ಅಧಿಕಾರಿಗೆ ಭವ್ಯ ಸ್ವಾಗತ ಕೋರಿದ್ದಾರೆ.

ಆಸ್ಪತ್ರೆಯಿಂದ ಹರ್ಜೀತ್ ಸಿಂಗ್ ಅವರನ್ನು ಪೊಲೀಸ್ ಅಧಿಕಾರಿಗಳ ಭದ್ರತೆಯಲ್ಲಿ ಅವರ ಮನೆಗೆ ಕರೆದುಕೊಂಡು ಬರಲಾಯಿತು. ಪಾಟಿಯಾಲ ನಿವಾಸಕ್ಕೆ ಹರ್ಜೀತ್ ಸಿಂಗ್ ಅವರನ್ನು ಕರೆದುಕೊಂಡು ಬರುತ್ತಿದ್ದಂತೆಯೇ ಅವರಿಗೆ ಸ್ಥಳೀಯರು ತಮ್ಮ ತಮ್ಮ ಮನೆಗಳ ಮೇಲೆ ನಿಂತು  ಹೂಮಳೆ ಸುರಿಸಿದರು. ಅಲ್ಲದೆ ಮನೆಯ ಬಳಿ ಕೆಂಪು ಹಾಸು ಹಾಕಿ ಹರ್ಜೀತ್ ಸಿಂಗ್ ಕಾರಿನಿಂದ ಕೆಳಗೆ ಇಳಿಯುತ್ತಿದ್ದಂತೆಯೇ ಅವರ ಮೇಲೆ ಹೂ ಹಾಕಿದರು. ಅಲ್ಲದೆ ಭಾರತ್ ಮಾತಾಕಿ ಜೈ ಎನ್ನುತ್ತಾ ಹರ್ಜೀತ್ ಸಿಂಗ್ ಪರ ಘೋಷಣೆ ಕೂಗಿದರು. ಈ ವೇಳೆ ಹರ್ಜೀತ್ ಸಿಂಗ್ ಅವರ  ಕುಟುಂಬಸ್ಥರು ಆರತಿ ಮಾಡಿ ಹರ್ಜೀತ್ ಸಿಂಗ್ ರನ್ನು ಮನೆಯೊಳಗೆ ಬರ ಮಾಡಿಕೊಂಡರು.

ಬಳಿಕ ತಮ್ಮೊಂದಿಗೆ ಬಂದಿದ್ದ ಪೊಲೀಸ್ ಅಧಿಕಾರಿಗಳಿಗೆ ಹರ್ಜೀತ್ ಸಿಂಗ್ ಧನ್ಯವಾದ ಹೇಳಿ ಬೀಳ್ಕೊಟ್ಟರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com