ಭಾರತೀಯ ಸೈನಿಕರ ಮೇಲೆ ನಿಗಾ ಇಡಲು ಪಾಕ್ ನಿಂದ ಆರೋಗ್ಯಸೇತು ಆ್ಯಪ್ ದುರ್ಬಳಕೆ: ಸೇನೆ ಎಚ್ಚರಿಕೆ

ಭಾರತೀಯ ಸೈನಿಕರ ಮೇಲೆ ನಿಗಾ ಇಡಲು ಪಾಕಿಸ್ತಾನದ ಗುಪ್ತಚರ ಸಂಸ್ಥೆಗಳು ಆರೋಗ್ಯ ಸೇತು ಆ್ಯಪ್ ಅನ್ನು ದುರ್ಬಳಕೆ ಮಾಡಿಕೊಳ್ಳುತ್ತಿವೆ ಎಂದು ಸೇನೆ ಎಚ್ಚರಿಕೆ ನೀಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಭಾರತೀಯ ಸೈನಿಕರ ಮೇಲೆ ನಿಗಾ ಇಡಲು ಪಾಕಿಸ್ತಾನದ ಗುಪ್ತಚರ ಸಂಸ್ಥೆಗಳು ಆರೋಗ್ಯ ಸೇತು ಆ್ಯಪ್ ಅನ್ನು ದುರ್ಬಳಕೆ ಮಾಡಿಕೊಳ್ಳುತ್ತಿವೆ ಎಂದು ಸೇನೆ ಎಚ್ಚರಿಕೆ ನೀಡಿದೆ.

ಆರೋಗ್ಯ ಸೇತು ಆ್ಯಪ್ ನಂತಹುದ್ದೇ ಮತ್ತೊಂದು ಆ್ಯಪ್ ಅನ್ನು ಸಿದ್ಧಪಡಿಸಿ ಆ ಮೂಲಕ ಭಾರತೀಯ ಸೈನಿಕರ ಮೇಲೆ ನಿಗಾ ಇಡುತ್ತಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದೆ. ನಕಲಿ ಆರೋಗ್ಯಸೇತು ಆ್ಯಪ್ ಮೂಲಕ ಭಾರತೀಯ ಮಿಲಿಟರ್  ಪಡೆಯ ಫೋನ್ ಗಳನ್ನು ಹ್ಯಾಕ್ ಮಾಡಿ ಆ ಮೂಲಕ ಸೈನಿಕರ ಚಲನವಲನಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಇದಕ್ಕಾಗಿ ಆರೋಗ್ಯಸೇತು.ಎಪಿಕೆ. (Aarogya Setu.apk.) ನಂತಹ ನಕಲಿ ಆ್ಯಪ್ ಸಷ್ಟಿ ಮಾಡಿದೆ. ಪಾಕಿಸ್ತಾನ ಮೂಲದ ಆಪರೇಟರ್ ಗಳು ಇದನ್ನು ವಾಟ್ಸಪ್  ಮೂಲಕ ಭಾರತದ ಸೇನಾಧಿಕಾರಿಗಳ ಮೊಬೈಲ್ ಗೆ ರವಾನಿಸುತ್ತಿದ್ದಾರೆ ಎಂದು ಹೇಳಿದೆ.

ಒಮ್ಮೆ ಅಧಿಕಾರಿಗಳು ಈ ಆ್ಯಪ್ ಅನ್ನು ಇನ್ ಸ್ಟಾಲ್ ಮಾಡಿಕೊಂಡಕೆ ಇದರಲ್ಲಿರುವ ಮಾಲ್ ವೇರ್ ಗಳು ಮೊಬೈಲ್ ಸೇರಿಕೊಂಡು ಮೊಬೈಲ್ ನಲ್ಲಿ ಅಮೂಲ್ಯ ದತ್ತಾಂಶಗಳನ್ನು ರಹಸ್ಯವಾಗಿ ರವಾನೆ ಮಾಡುವ ಸಾಧ್ಯತೆ ಇದೆ. ಈ ಹಿಂದೆ ಇದೇ ಪಾಕಿಸ್ತಾನ ಅನೋಷ್ಕಾ ಚೋಪ್ರಾ  (Anoshka Chopra) ಖಾತೆಯಿಂದ ಭಾರತೀಯ ಅಧಿಕಾರಿಗಳಿಗೆ ಆ್ಯಪ್ ರವಾನೆ ಮಾಡುತ್ತಿತ್ತು. ಹೀಗಾಗಿ ಸೇನೆ ಭಾರತೀಯ ಸರ್ಕಾರದ ಅಧಿಕೃತ ವೆಬ್ ಸೈಟ್ mygov.in ಅಥವಾ Android Play Store or IOS Apple Play Store ನಿಂದ ಮಾತ್ರ ಆರೋಗ್ಯ ಸೇತು  ಆ್ಯಪ್ ಡೌನ್ಲೋಡ್ ಮಾಡುವಂತೆ ಸೈನಿಕರಿಗೆ ಸೂಚಿಸಿದೆ. 

ಈ ಬಗ್ಗೆ ಮಾತನಾಡಿರುವ ಸೇನಾ ಮುಖ್ಯಸ್ಥ ಜನರಲ್ ಎಂಎಂ ನರವಾನೆ ಅವರು ಭಾರತ ಕೊರೋನಾ ಸಾಂಕ್ರಾಮಿಕವನ್ನು ತಡೆಯುವುದರಲ್ಲಿ ನಿರತವಾಗಿದ್ದರೆ, ಅತ್ತ ಪಾಕಿಸ್ತಾನ ಮಾತ್ರ ಭಯೋತ್ಪಾದನೆಯನ್ನು ಪ್ರಸರಿಸುವ ಕಾರ್ಯದಲ್ಲಿ ನಿರತವಾಗಿದೆ ಎಂದು ಕಿಡಿಕಾರಿದ್ದಾರೆ.

ಇತ್ತೀಚೆಗಷ್ಟೇ ಭಾರತದ ಎಲ್ಲ ಸೈನಿಕರೂ ಆ್ಯಪ್ ಡೌನ್ಲೋಡ್ ಮಾಡಿ ಬಳಸುವಂತೆ ಕೇಂದ್ರ ಸರ್ಕಾರ ನಿರ್ದೇಶನ ನೀಡಿತ್ತು. ಇದರಿಂದ ಸೈನಿಕರಲ್ಲಿ ಕೋವಿಡ್-19 ಪ್ರಸರಣ ತಡೆಯುವ ಉದ್ದೇಶದಿಂದ ಸರ್ಕಾರದ್ದಾಗಿತ್ತು. ಆದರೆ ಸರ್ಕಾರದ ಸದುದ್ದೇಶವನ್ನು ಪಾಕಿಸ್ತಾನ ತನ್ನ ನೀಚ ಕೃತ್ಯಕ್ಕೆ  ದುರ್ಬಳಕೆ ಮಾಡಿಕೊಳ್ಳುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com