ಮನಸ್ಸಿದ್ದರೆ ಮಾರ್ಗ! ಮಾಡೆಲ್ ಐಶ್ವರ್ಯಾ ಇದೀಗ ಐಎಎಸ್ ಅಧಿಕಾರಿ

ಯುಪಿಎಸ್ಸಿ 2019 ಫಲಿತಾಂಶ ಹೊರಬಿದ್ದಿದ್ದು ಮಾಡೆಲ್ ಕ್ಷೇತ್ರದಲ್ಲಿ ಹೆಸರಾಗಿರುವ ಐಶ್ವರ್ಯಾ ಶೆರಾನ್ ಐಎಎಸ್ ಪರೀಕ್ಷೆಯಲ್ಲಿ 93 ನೇ ರ್ಯಾಂಕ್ ಪಡೆದಿದ್ದಾರೆ. ಈ ಮೂಲಕ ಅವರೀಗ ಐಎಎಸ್ ಅಧಿಕಾರಿಯಾಗಲು ತಯಾರಾಗಿದ್ದಾರೆ. 
ಮಾಡೆಲ್ ಐಶ್ವರ್ಯಾ ಶೆರಾನ್
ಮಾಡೆಲ್ ಐಶ್ವರ್ಯಾ ಶೆರಾನ್

ಮುಂಬೈ: ಯುಪಿಎಸ್ಸಿ 2019 ಫಲಿತಾಂಶ ಹೊರಬಿದ್ದಿದ್ದು ಮಾಡೆಲ್ ಕ್ಷೇತ್ರದಲ್ಲಿ ಹೆಸರಾಗಿರುವ ಐಶ್ವರ್ಯಾ ಶೆರಾನ್ ಐಎಎಸ್ ಪರೀಕ್ಷೆಯಲ್ಲಿ 93 ನೇ ರ್ಯಾಂಕ್ ಪಡೆದಿದ್ದಾರೆ. ಈ ಮೂಲಕ ಅವರೀಗ ಐಎಎಸ್ ಅಧಿಕಾರಿಯಾಗಲು ತಯಾರಾಗಿದ್ದಾರೆ. 

ಮಾಜಿ ಮಿಸ್ ಇಂಡಿಯಾ ಫೈನಲಿಸ್ಟ್ ಆಗಿದ್ದ ಐಶ್ವರ್ಯಾ ಮನಸ್ಸಿದ್ದರೆ ಯಾರಾದರೂ ಏನನ್ನಾದರೂ ಸಾಧಿಸಬಹುದು ಎನ್ನಲು ಉತ್ತಮ ಉದಾಹರಣೆ ಆಗಿದ್ದಾರೆ. ಐಎಎಸ್ ಅಧಿಕಾರಿಯಾಗಬೇಕೆಂಬುದು ಅವರ ಕನಸಾಗಿತ್ತು, ಅವರು ಯುಪಿಎಸ್ಸಿ ಸಿವಿಲ್ ಸರ್ವೀಸಸ್ ಪರೀಕ್ಷೆಗೆ ಅರ್ಹತೆ ಪಡೆದ ನಂತರಈಗ ಅವರ ಕನಸು ನನಸಾಗಿದೆ. 

"ನಾನು ಐಶ್ವರ್ಯಾ ರೈ ಅವರಂತೆ ಮಿಸ್ ಇಂಡಿಯಾ ಆಗಬೇಕೆಂದು ನಮ್ಮ ತಾಯಿ ಬಯಸಿದ್ದು ಅದಕ್ಕಾಗಿ ನನಗೆ ಐಶ್ವರ್ಯಾ ಎಂದು ಹೆಸರಿಟ್ಟಿದ್ದರು. ಅಂತಿಮವಾಗಿ ನಾನು ಮಿಸ್ ಇಂಡಿಯಾದ ಅಗ್ರ 21 ಫೈನಲಿಸ್ಟ್‌ಗಳಲ್ಲಿ ಆಯ್ಕೆಯಾಗಿದ್ದೇನೆ" ಎಂದು ಐಶ್ವರ್ಯಾ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ. ಆದರೆ ಐಶ್ವರ್ಯಾ ಅವರಿಗೆ ತಾವು ಐಎಎಸ್ ಅಧಿಕಾರಿಯಾಗಬೇಕೆಂದು ಕನಸಿತ್ತು. ಆ ಮೂಲಕ ಸಮಾಜಕ್ಕೆ ಸೇವೆ ಸಲ್ಲಿಸಬೇಕೆಂದು ಅವರು ಬಯಸಿದ್ದರು. ಅದಕ್ಕಾಗಿ ಅವರು ಸಿವಿಲ್ ಸರ್ವೀಸಸ್ ಪರೀಕ್ಷೆಗೆ ಪ್ರಯತ್ನಿಸಲು ತನ್ನ ಮಾಡೆಲಿಂಗ್ ವೃತ್ತಿಜೀವನದಿಂದ ವಿರಾಮ ತೆಗೆದುಕೊಂಡರು. 

ಮಿಸ್ ಇಂಡಿಯಾದಲ್ಲಿ ಭಾಗವಹಿಸಲು ಆಕೆಯೆ ಆಹ್ವಾನ ಬಂದಾಗ ಅದು ಮಾಡೆಲಿಂಗ್ ಉದ್ಯಮದಲ್ಲಿ ಐಶ್ವರ್ಯಾ ದೃಢ ಹೆಜ್ಜೆ ಇಡಲು ಅವಕಾಶ ಮಾಡಿಕೊಟ್ಟಿತು ಐಶ್ವರ್ಯಾಶಿಕ್ಷಣ ದಲ್ಲಿ ಯಾವಾಗಲೂ ಉತ್ತಮವಾಗಿದ್ದರು. ಪರೀಕ್ಷೆಯನ್ನು ತೆಗೆದುಕೊಳ್ಳಲು  ಯಾವುದೇ ಕೋಚಿಂಗ್ ತರಗತಿಗಳನ್ನು ತೆಗೆದುಕೊಳ್ಳಲಿಲ್ಲ. ಅಂತಹ ಬಿಡುವಿಲ್ಲದ ವೇಳಾಪಟ್ಟಿಯೊಡನೆಯೂ ಹೇಗೆ ಅಧ್ಯಯನ ಮಾಡುತ್ತಿದ್ದರೆಣ್ದು ಕೇಳಲಾಗಿ  "ನಾನು ನನ್ನ ಫೋನ್, ಸೋಷಿಯಲ್ ಮೀಡಿಯಾ, ಎಲ್ಲವನ್ನೂ ಸ್ವಿಚ್ ಆಫ್ ಮಾಡಬೇಕಾಗಿತ್ತು, ಪರೀಕ್ಷೆಯತ್ತ ಗಮನ ಹರಿಸಬೇಕಾಗಿತ್ತು ಮತ್ತು ಫಲಿತಾಂಶವು ಈಗ ಬಂದಿದೆ.  ಆದರೆ ನಾನು ಇದ್ದಕ್ಕಿದ್ದಂತೆ ಅಧ್ಯಯನದಲ್ಲಿ  ಆಸಕ್ತಳಾದೆ ಎನ್ನಲಾಗುವುದಿಲ್ಲ. ನಾನು ಯಾವಾಗಲೂ ಸ್ಟುಡಿಯಸ್ ಆಗಿದ್ದೆ. " ಎಂದಿದ್ದಾರೆ.

ಐಶ್ವರ್ಯಾ ಅವರ ಶಾಲೆಯ ಮುಖ್ಯ ಆಕರ್ಷಣೆಯಾಗಿದ್ದಾರೆ.  ಅವರು ವಿಜ್ಞಾನ ವಿದ್ಯಾರ್ಥಿಯಾಗಿದ್ದು,ಶ್ರೀ ರಾಮ್ ಕಾಲೇಜ್ ಆಫ್ ಕಾಮರ್ಸ್‌ನಲ್ಲಿ ಪ್ರವೇಶ ಪಡೆದರು. ಆಕೆಯ ತಂದೆ ಕರ್ನಲ್ ಅಜಯ್ ಕುಮಾರ್, ಕರೀಂನಗರದ ಎನ್‌ಸಿಸಿ ತೆಲಂಗಾಣ ಬೆಟಾಲಿಯನ್‌ನ ಕಮಾಂಡಿಂಗ್ ಆಫೀಸರ್ ಆಗಿದ್ದರು, ಟುಂಬದಲ್ಲಿನ ವೈವಿಧ್ಯತೆಗಾಗಿ ನಾನು ನಾಗರಿಕ ಸೇವೆಗಳಿಗಾಗಿ ಪ್ರಯತ್ನಿಸಬೇಕೆಂಬ ಆಸೆಯನ್ನು ಚಿಗುರಿಸಿತ್ತು. ರಾಷ್ಟ್ರದ ಸೇವೆ ಮಾಡುವುದು ನನ್ನ ಅಂತ್ಗಿಮ ಗುರಿಯಾಗಿತ್ತು. ಸೈನ್ಯದಲ್ಲಿ, ಮಹಿಳೆಯರಿಗೆ ಬೆಳೆಯಲು ಅವಕಾಶಗಳಿವೆ, ಆದರೆ ಇದು ಇನ್ನೂ ಬಹಳ ಸೀಮಿತವಾಗಿದೆ. ನಾಗರಿಕ ಸೇವೆಗಳಲ್ಲಿ, ಮಹಿಳೆ ಏನನ್ನು ಸಾಧಿಸಬಹುದು ಎಂಬುದಕ್ಕೆ ಯಾವುದೇ ಮಿತಿಯಿಲ್ಲ” ಎಂದು ಅವರು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com