ಸುಶಾಂತ್ ಸಾವಿನ ತನಿಖೆ: ಬಿಹಾರ ಪೊಲೀಸರ ಮಾಹಿತಿ ಕೇಳಿದ ಸಿಬಿಐ

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ  ಪ್ರಕರಣದಲ್ಲಿ ಎಫ್‌ಐಆರ್ ಅಂತಿಮಗೊಂಡ ನಂತರ ಸಿಬಿಐ ಬಿಹಾರ ಪೊಲೀಸರೊಂದಿಗೆ ಸಂಪರ್ಕಮಾಡಿದೆ ಎಂದು  ಅಧಿಕಾರಿಗಳುಹೇಳಿದ್ದಾರೆ.
ಸುಶಾಂತ್ ಸಿಂಗ್ ರಜಪೂತ್
ಸುಶಾಂತ್ ಸಿಂಗ್ ರಜಪೂತ್

ನವದೆಹಲಿ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ  ಪ್ರಕರಣದಲ್ಲಿ ಎಫ್‌ಐಆರ್ ಅಂತಿಮಗೊಂಡ ನಂತರ ಸಿಬಿಐ ಬಿಹಾರ ಪೊಲೀಸರೊಂದಿಗೆ ಸಂಪರ್ಕಮಾಡಿದೆ ಎಂದು  ಅಧಿಕಾರಿಗಳು ಹೇಳಿದ್ದಾರೆ.

"ಸರ್ಕಾರದಿಂದ ಅಧಿಸೂಚನೆ ಪಡೆದ ನಂತರ, ಸಿಬಿಐ ಪ್ರಕರಣದ ನೋಂದಣಿ ಪ್ರಕ್ರಿಯೆಯಲ್ಲಿದೆ. ನಾವೂ ಬಿಹಾರ ಪೊಲೀಸರೊಂದಿಗೆ ಸಂಪರ್ಕದಲ್ಲಿದ್ದೇವೆ. ಶೀಘ್ರದಲ್ಲೇ ಎಫ್‌ಐಆರ್ ಅಪ್‌ಲೋಡ್ ಮಾಡಲಾಗುವುದು" ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾ

34 ವರ್ಷದ ಸುಶಾಂತ್ ಸಿಂಗ್  ರಜಪೂತ್ ಜೂನ್ 14 ರಂದು ಮುಂಬೈನ ಉಪನಗರ ಬಾಂದ್ರಾದಲ್ಲಿರುವ ತನ್ನ ಅಪಾರ್ಟ್ ಮೆಂಟ್ ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅಂದಿನಿಂದ ಮುಂಬೈ ಪೊಲೀಸರು ವಿವಿಧ  ಆಯಾಮಗಳಿಂದ  ಪ್ರಕರಣದ ತನಿಖೆ ನಡೆಸುತ್ತಿದ್ದು. ರಜಪೂತ್ ಅವರ 77 ವರ್ಷದ ತಂದೆ ಮತ್ತು ಪಾಟ್ನಾ ನಿವಾಸಿ ಕೃಷ್ಣ ಕಿಶೋರ್ ಸಿಂಗ್ ಅವರ ದೂರಿನ ಹಿನ್ನೆಲೆಯಲ್ಲಿ ಬಿಹಾರ ಪೊಲೀಸರು ಕೂಡ ಕ್ರಮ ಕೈಗೊಂಡಿದ್ದರು. 

ಪಾಟ್ನಾ ಪೊಲೀಸರು ದೂರಿನ ಮೇರೆಗೆ ಕ್ರಿಮಿನಲ್ ಪಿತೂರಿ, ಮೋಸ ಮತ್ತು ಆತ್ಮಹತ್ಯೆಗೆ ಪ್ರೇರಣೆ ಸಂಬಂಧಿಸಿದ ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದರು. ಎಫ್‌ಐಆರ್ ನೋಂದಣಿಗೆ ಮುಂದುವರಿಯುವ ಮೊದಲು ಸಿಬಿಐ ಗೆ ಬಿಹಾರ ಪೊಲೀಸರಿಂದ ಹೆಚ್ಚಿನ ಮಾಹಿತಿ ಬೇಕಿದೆ ಎಂದು ಮೂಲಗಳು ತಿಳಿಸಿವೆ.

ಈ ಪ್ರಕರಣವನ್ನು ಪೊಲೀಸ್ ವರಿಷ್ಠಾಧಿಕಾರಿ ನೂಪುರ್ ಪ್ರಸಾದ್ ನೇತೃತ್ವದ ವಿಶೇಷ ತನಿಖಾ ತಂಡ ತನಿಖೆ ನಡೆಸಲಿದ್ದು, ಡಿಐಜಿ ಗಗನ್‌ದೀಪ್ ಗಂಭೀರ್ ಮತ್ತು ಜಂಟಿ ನಿರ್ದೇಶಕ ಮನೋಜ್ ಶಶಿಧರ್, ಗುಜರಾತ್ ಕೇಡರ್‌ನ ಹಿರಿಯ ಐಪಿಎಸ್ ಅಧಿಕಾರಿಗಳ ಮೇಲ್ವಿಚಾರಣೆ  ಸಹ ಇರಲಿದೆ. ಇದನ್ನು ಬಿಹಾರ ಸರ್ಕಾರದ ಉಲ್ಲೇಖದ ಮೇರೆಗೆ ಸಿಬಿಐಗೆ ಹಸ್ತಾಂತರಿಸಲಾಗಿದ್ದು, ಕೇಂದ್ರ ಸರ್ಕಾರವು ಸಿಬಿಐ ತನಿಖೆಗೆ ಒಪ್ಪಿಪ್ಗೆ ಸೂಚಿಸಿದೆ.

ನಟ ರಜಪೂತ್ ತವರು ರಾಜ್ಯವಾದ ಬಿಹಾರ ಸರ್ಕಾರದ ಉಲ್ಲೇಖದ ಮೇರೆಗೆ ಏಜೆನ್ಸಿ ಶೀಘ್ರವಾಗಿ ಕಾರ್ಯನಿರ್ವಹಿಸಿದೆ, ಅಲ್ಲಿ ಮೃತ ನಟನ ಕುಟುಂಬ  ನಟನ ಸ್ನೇಹಿತೆ ರಿಯಾ ಚಕ್ರವರ್ತಿ ವಿರುದ್ಧ ಎಫ್ಐಆರ್ ದಾಖಲಿಸಿದೆ ಎಂದು ಅವರು ಹೇಳಿದರು.

ಆದರೆ ಇನ್ನೊಂದೆಡೆ ಆತ್ಮಹತ್ಯೆಗೆ ಸಂಬಂಧಿಸಿದ ಮುಖ್ಯ ಪ್ರಕರಣವನ್ನು ಮುಂಬೈ ಪೊಲೀಸರು ತನಿಖೆ ನಡೆಸುತ್ತಿರುವಾಗಲೂ ಬಿಹಾರ ರಾಜ್ಯ  ಈ ವಿಷಯವನ್ನು ಸಿಬಿಐಗೆ ಉಲ್ಲೇಖಿಸಿದೆ. ಬೇರೆ ರಾಜ್ಯದಲ್ಲಿ ತನಿಖೆ ಆರಂಭಿಸಲು ಬಿಹಾರಕ್ಕೆ ನ್ಯಾಯವ್ಯಾಪ್ತಿ ಇಲ್ಲದಿರುವುದರಿಂದ ಮಹಾರಾಷ್ಟ್ರ ಸರ್ಕಾರ ಈ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿದೆ. ಮುಂಬೈ ಪೊಲೀಸರು ಆಕಸ್ಮಿಕ ಸಾವಿನ ವರದಿಯನ್ನು ದಾಖಲಿಸಿದ್ದು, ಪ್ರಕರಣದಲ್ಲಿ ತನಿಖೆ ನಡೆಸುತ್ತಿದ್ದಾರೆ.

ಈವರೆಗೆ ಮುಂಬೈ ಪೊಲೀಸರು ರಜಪೂತ್ ಅವರ ಸಹೋದರಿಯರು, ಚಕ್ರವರ್ತಿ ಮತ್ತು ಆದಿತ್ಯ ಚೋಪ್ರಾ, ಮಹೇಶ್ ಭಟ್ ಮತ್ತು ಸಂಜಯ್ ಲೀಲಾ ಭನ್ಸಾಲಿ ಅವರಂತಹ ಕೆಲವು ಚಲನಚಿತ್ರ ವ್ಯಕ್ತಿಗಳ ಹೇಳಿಕೆಗಳನ್ನು ದಾಖಲಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com