ಲಡಾಖ್ ಸಂಘರ್ಷ: ಪಿಎಲ್ಎ ಸಿಬ್ಬಂದಿಗಳ ಸಾವಿನ ಬಗ್ಗೆ ಸುದ್ದಿ ಹರಡುತ್ತಿದ್ದವನ ಬಂಧಿಸಿದ ಚೀನಾ! 

ಲಡಾಖ್ ಸಂಘರ್ಷದ ಸಂದರ್ಭದಲ್ಲಿ ಚೀನಾ ಸೇನೆಯ ಸಿಬ್ಬಂದಿಗಳ ಸಾವಿನ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹರಡುತ್ತಿದ್ದವನನ್ನು ಚೀನಾ ಬಂಧಿಸಿದೆ. 
ಚೀನಾ
ಚೀನಾ

ನವದೆಹಲಿ: ಲಡಾಖ್ ಸಂಘರ್ಷದ ಸಂದರ್ಭದಲ್ಲಿ ಚೀನಾ ಸೇನೆಯ ಸಿಬ್ಬಂದಿಗಳ ಸಾವಿನ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹರಡುತ್ತಿದ್ದವನನ್ನು ಚೀನಾ ಬಂಧಿಸಿದೆ. 

ರೀಡಿಫ್ ಅಂತರ್ಜಾಲ ಪ್ರಕಟಿಸಿರುವ ವರದಿಯ ಪ್ರಕಾರ ಝೌ ಎಂಬ ಹೆಸರುಳ್ಳ ವ್ಯಕ್ತಿಯನ್ನು ಚೀನಾದಲ್ಲಿ ಬಂಧಿಸಲಾಗಿದೆ. 
ಭಾರತದ ಲಡಾಖ್ ಎಲ್ಎಸಿ ಬಳಿ ನಡೆದ ಸಂಘರ್ಷದಲ್ಲಿ ಪಿಎಲ್ಎ ಸೈನಿಕರ ಬಳಿ ಇದ್ದ ಕಳಪೆ ಗುಣಮಟ್ಟದ ಸೇನಾ ವಾಹನಗಳೇ ಕಾರಣ ಎಂಬ ಸುದ್ದಿಯನ್ನು ಈ ವ್ಯಕ್ತಿ ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿಸುತ್ತಿದ್ದ ಎಂದು ಚೀನಾ ರಕ್ಷಣಾ ಸಚಿವಾಲಯಕ್ಕೆ ಸಂಬಂಧಪಟ್ಟ chinamil.com ಮೂಲಕ  ತಿಳಿದುಬಂದಿದೆ. 

ಆ.03 ರಂದು ಡಾಂಗ್ ಫೆಂಗ್ ಎಂಬ ಕಂಪನಿ ಝೌ ಎಂಬಾತನ ಆನ್ ಲೈನ್ ಪೋಸ್ಟ್ ಗೆ ಸಂಬಂಧಿಸಿದಂತೆ ಪೊಲೀಸರಿಗೆ ದೂರು ನೀಡಿತ್ತು.  ಈ ವ್ಯಕ್ತಿ ವಿಚಾಟ್ ಮೂಮೆಂಟ್ಸ್ ನಲ್ಲಿ ಪಿಎಲ್ಎ ಕುರಿತಾಗಿ ವದಂತಿ ಹಬ್ಬಿಸುತ್ತಿದ್ದಾನೆ ಎಂದು ದೂರು ನೀಡಲಾಗಿತ್ತು.

ಸಂಸ್ಥೆಯ ಆಂತರಿಕ ಭ್ರಷ್ಟಾಚಾರದ ಪರಿಣಾಮವಾಗಿ ಸೇನೆಗೆ ಕಳಪೆ ಗುಣಮಟ್ಟದ ಸೇನಾ ವಾಹನಗಳು ಪೂರೈಕೆಯಾಗಿದೆ ಎಂದು ಈ ವ್ಯಕ್ತಿ ಆರೋಪಿಸಿದ್ದ. ಈತನನ್ನು ಆ.04 ರಂದು ಬಂಧಿಸಲಾಗಿತ್ತು. ವಿಚಾರಣೆ ವೇಳೆ ತಾನು ವದಂತಿ ಹಬ್ಬಿಸುತ್ತಿದ್ದದ್ದು ನಿಜ ಎಂದು ತಪ್ಪೊಪ್ಪಿಗೆ ಪತ್ರ ಬರೆದು, ಕ್ಷಮೆ ಕೋರಿದ್ದಾನೆ ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com