ವಿಮಾನ ಅಪಘಾತ: ಮಲ್ಲಪುರಂ ಜನರ ಕರುಣೆ, ಮಾನವೀಯತೆಯನ್ನು ಸ್ಮರಿಸಿದ ಏರ್ ಇಂಡಿಯಾ ಏಕ್ಸ್ ಪ್ರೆಸ್

 ಕೇರಳ ವಿಮಾನ ಅಪಘಾತ ಸಂದರ್ಭದಲ್ಲಿ ಮಲ್ಲಪುರಂ ಜನರು ತೋರಿದ ಕರುಣೆ ಹಾಗೂ ಮಾನವೀಯತೆಯನ್ನು ಏರ್ ಇಂಡಿಯಾ ಎಕ್ಸ್ ಪ್ರೆಸ್ ಸಂಸ್ಥೆ ಸ್ಮರಿಸಿದೆ.
ವಿಮಾನ ಅಪಘಾತ
ವಿಮಾನ ಅಪಘಾತ
Updated on: 

ನವದೆಹಲಿ: ಕೇರಳ ವಿಮಾನ ಅಪಘಾತ ಸಂದರ್ಭದಲ್ಲಿ ಮಲ್ಲಪುರಂ ಜನರು ತೋರಿದ ಕರುಣೆ ಹಾಗೂ ಮಾನವೀಯತೆಯನ್ನು
 ಏರ್ ಇಂಡಿಯಾ ಎಕ್ಸ್ ಪ್ರೆಸ್ ಸಂಸ್ಥೆ ಸ್ಮರಿಸಿದೆ. ಈ ವಿಮಾನ ಅಪಘಾತ ಸಂದರ್ಭದಲ್ಲಿ ಇಬ್ಬರು ಪೈಲಟ್ ಗಳು ಸೇರಿದಂತೆ 18 ಮಂದಿ ಪ್ರಯಾಣಿಕರು ಮೃತಪಟ್ಟಿದ್ದರು.

ಅನಿಶ್ಚಿತ ಘಟನೆಯ ಸಮಯದಲ್ಲಿ ಕರುಣೆ ಹಾಗೂ ಮಾನವೀಯತೆಯನ್ನು ತೋರಿರುವ ಮಲ್ಲಪುರಂ ಜನರಿಗೆ  ಚಿರಋಣಿಯಾಗಿರುವುದಾಗಿ ಎರ್ ಇಂಡಿಯಾ ಎಕ್ಸ್ ಪ್ರೆಸ್ ಸಂಸ್ಥೆ ಟ್ವೀಟ್ ಮಾಡಿದೆ.

ಇದು ಕೇವಲ ಧೈರ್ಯವಲ್ಲ, ಮಾನವೀಯತೆ ಮೂಲಕ ಜನರ ಜೀವವನ್ನು ಉಳಿಸಲಾಗಿದೆ. ತಮ್ಮ ಪ್ರಾಣವನ್ನು ಲೆಕ್ಕಿಸದೆ ಹಲವು
ಜನರ ಪ್ರಾಣ ಉಳಿಸಿರುವ ಮಲ್ಲಪುರಂ ಜನರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಏರ್ ಇಂಡಿಯಾ ಎಕ್ಸ್ ಪ್ರೆಸ್ ಸಂಸ್ಥೆ ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com