ಬುದ್ಧ ಹುಟ್ಟಿದ್ದು ನೇಪಾಳದಲ್ಲಿ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ: ಕೇಂದ್ರ ಸರ್ಕಾರ ಸ್ಪಷ್ಟನೆ

ಬುದ್ಧ ನೇಪಾಳದಲ್ಲಿ ಹುಟ್ಟಿದ್ದು ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರ ಹೇಳಿಕೆ ಸಂಬಂಧ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ. 
ಪ್ರಧಾನಿ ಮೋದಿ
ಪ್ರಧಾನಿ ಮೋದಿ

ನವದೆಹಲಿ: ಬುದ್ಧ ನೇಪಾಳದಲ್ಲಿ ಹುಟ್ಟಿದ್ದು ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರ ಹೇಳಿಕೆ ಸಂಬಂಧ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ. 

ವೆಬಿನಾರ್ ಒಂದರಲ್ಲಿ ಮಾತನಾಡಿದ್ದ ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್ ಅವರು, ಶ್ರೇಷ್ಠ ಭಾರತೀಯರಲ್ಲಿ ಗೌತಮ ಬುದ್ಧ ಮತ್ತು ಮಹಾತ್ಮಾ ಗಾಂಧೀಜಿ ಇದ್ದಾರೆಂದು ಹೇಳಿದ್ದರು. 

ಈ ಹೇಳಿಕೆಗೆ ನೇಪಾಳ ವಿದೇಶಾಂಗ ಸಚಿವಾಲಯ ಆಕ್ರೋಶ ವ್ಯಕ್ತಪಡಿಸಿತ್ತು. ಐತಿಹಾಸಿಕ ಮತ್ತು ಪುರಾತತ್ವ ದಾಖಲೆಗಳು ಗೌತಮ ಬುದ್ಧ ನೇಪಾಳದಲ್ಲಿ ಹುಟ್ಟಿದ್ದು ಎನ್ನುವುದನ್ನು ಸಾಬೀತುಪಡಿಸಿದೆ ಎಂದು ತಿಳಿಸಿತ್ತು. ಅಲ್ಲದೆ, 2014ರಲ್ಲಿ ನೇಪಾಳ ಸಂಸತ್ ನಲ್ಲಿ ಭಾರತದ ಪ್ರಧಾನಿ ಮೋದಿಯವರು ಮಾಡಿದ್ದ ಭಾಷಣದಲ್ಲೂ ಬುದ್ಧ ನೇಪಾಳದಲ್ಲಿ ಹುಟ್ಟಿದವರು ಎಂದು ಹೇಳಿದ್ದರು ಎಂದಿತ್ತು. 

ಹೇಳಿಕೆಗಳ ವಿವಾದಕ್ಕೆ ಇದೀಗ ಭಾರತ ತೆರೆ ಎಳೆದಿದ್ದು, ವಿದೇಶಾಂಗ ಸಚಿವರ ಹೇಳಿಕೆಯೂ ನಮ್ಮ ಬೌದ್ಧ ಪರಂಪರೆಯನ್ನು ಉಲ್ಲೇಖಿಸಿದ್ದಾಗಿತ್ತು. ಗೌತಮ ಬುದ್ಧ ಜನಿಸಿದ್ದು, ನೇಪಾಳದಲ್ಲಿ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಸ್ಪಷ್ಟಪಡಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com