ನವದೆಹಲಿ: ಸ್ವತಂತ್ರ ಭಾರತದ ಮನಸ್ಥಿತಿ ವೋಕಲ್ ಫಾರ್ ಲೋಕಲ್ (ಸ್ಥಳೀಯ ಉತ್ಪನ್ನಗಳಿಗೆ ನಾವು ದನಿಯಾಗಬೇಕು) ಆಗಿರಬೇಕು ಎಂದು ಪ್ರಧಾನಮಂತ್ರಿ ನರಂದ್ರ ಮೋದಿಯವರು ಹೇಳಿದ್ದಾರೆ.
ಐತಿಹಾಸಿಕ ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿದ ಬಳಿಕ ದೇಶದ ಜನತೆಯನ್ನುದ್ದೇಶಿಸಿ ಮಾತನಾಡಿದ ಅವರು, ಭಾರತೀಯರು ಸ್ಥಳೀಯ ಉತ್ಪನ್ನಗಳನ್ನು ಬಳಸಬೇಕು ಮತ್ತು ಹೆಚ್ಚಾಗಿ ಪ್ರೋತ್ಸಾಹಿಸಬೇಕು ಇದು ಕೂಡ ಸ್ವಾವಲಂಬಿ ಭಾರತದ ಕನಸು, ಗುರಿಯಾಗಿದೆ. ನಾವು ನಮ್ಮ ಸ್ಥಳೀಯ ಉತ್ಪನ್ನಗಳನ್ನು ಪ್ರಶಂಸಿಸಬೇಕು ಎಂದು ಹೇಳಿದ್ದಾರೆ.
ಸ್ಥಳೀಯ, ಮರು ಕೌಶಲ್ಯ ಮತ್ತು ಕೌಶಲ್ಯ ಅಭಿಯಾನವು ಸ್ವಾವಲಂಬಿ ಆರ್ಥಿಕತೆ ಮತ್ತು ಬಡತನ ರೇಖೆಗಿಂತ ಕೆಳಗಿರುವವರ ಜೀವನ ಮಟ್ಟವನ್ನು ಹೆಚ್ಚಿಸಲು, ಸುಧಾರಿಸಲು ಸಾಧ್ಯವಾಗಲಿದೆ ಎಂದು ಹೇಳಿದರು. ಸ್ವಾತಂತ್ರ್ಯ ಭಾರತದ ಮನಸ್ಥಿತಿ 'ಸ್ಥಳೀಯರಿಗಾಗಿ ಧ್ವನಿ ನೀಡಬೇಕು' (ವೋಕಲ್ ಫಾರ್ ಲೋಕಲ್ ) ಎಂದು ಪ್ರಧಾನಿ ಹೇಳಿದರು.
"1.10 ಲಕ್ಷ ಕೋಟಿ ಹೂಡಿಕೆಯೊಂದಿಗೆ ರಾಷ್ಟ್ರೀಯ ಮೂಲಸೌಕರ್ಯ ಪೈಪ್ಲೈನ್ ಯೋಜನೆಗೆ ಮಹತ್ವ ನೀಡಿ ಬಹು-ಮಾದರಿ ಮೂಲಸೌಕರ್ಯ ಯೋಜನೆಗಳನ್ನು ಜಾರಿಗೆ ತರಬೇಕು. "ಆತ್ಮನಿರ್ಭರ್ ಭಾರತಕ್ಕೆ ಲಕ್ಷಾಂತರ ಸವಾಲುಗಳಿವೆ ಜಾಗತಿಕ ಸ್ಪರ್ಧಾತ್ಮಕತೆ ಇದ್ದರೆ ಅವು ಹೆಚ್ಚಾಗುತ್ತವೆ. ಹೇಗಾದರೂ, ಲಕ್ಷಾಂತರ ಸವಾಲುಗಳಿದ್ದರೆ, ಕೋಟ್ಯಾಂತರ ಪರಿಹಾರ ನೀಡುವ ಶಕ್ತಿ ದೇಶಕ್ಕೂ ಇದೆ ಎಂದು ತಿಳಿಸಿದರು.
Advertisement