ದೇಶದಲ್ಲಿ ಕೋವಿಡ್-ಚೇತರಿಕೆ ಪ್ರಮಾಣ ಹೆಚ್ಚಾಗಲು ಯೋಗ ಕಾರಣ- ರಾಮ್ ದೇವ್

ಭಾರತೀಯ ಜನತೆ ಯೋಗ ಮಾಡುವುದರಿಂದ ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಾಂಪ್ರಾದಾಯಿಕ ಪದ್ಧತಿ ಅನುಸರಿಸುತ್ತಿರುವುದರಿಂದ ಕೋವಿಡ್-19 ಚೇತರಿಕೆ ಪ್ರಮಾಣ ಏರಿಕೆಯಾಗಿದ್ದು, ಮರಣ ಪ್ರಮಾಣ ಕಡಿಮೆಯಾಗಿದೆಎಂದು ಯೋಗ ಗುರು ರಾಮ್ ದೇವ್ ಹೇಳಿದ್ದಾರೆ.
ಯೋಗ ಗುರು ರಾಮ್ ದೇವ್
ಯೋಗ ಗುರು ರಾಮ್ ದೇವ್

ಹರಿದ್ವಾರ: ಭಾರತೀಯ ಜನತೆ ಯೋಗ ಮಾಡುವುದರಿಂದ ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಾಂಪ್ರಾದಾಯಿಕ ಪದ್ಧತಿ ಅನುಸರಿಸುತ್ತಿರುವುದರಿಂದ ಕೋವಿಡ್-19 ಚೇತರಿಕೆ ಪ್ರಮಾಣ ಏರಿಕೆಯಾಗಿದ್ದು, ಮರಣ ಪ್ರಮಾಣ ಕಡಿಮೆಯಾಗಿದೆ
ಎಂದು ಯೋಗ ಗುರು ರಾಮ್ ದೇವ್ ಹೇಳಿದ್ದಾರೆ.

ಪಂತಜಲಿ ಯೋಗ ಪೀಠದಲ್ಲಿ ನಡೆದ 74ನೇ ಸ್ವಾತಂತ್ರೋತ್ಸವದ ಧ್ವಜಾರೋಹಣ ನೆರವೇರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರಾಮ್ ದೇವ್, ದೇಶದಲ್ಲಿ  ಜನರು ಯೋಗ ಮಾಡುತ್ತಿದ್ದು, ಸಾಂಪ್ರದಾಯಿಕ ಪದ್ದತಿ ಅನುಸರಿಸುತ್ತಿರುವುದರಿಂದ
ದಿನದಿಂದ ದಿನಕ್ಕೆ ಕೋವಿಡ್-19 ಚೇತರಿಕೆ ಪ್ರಮಾಣ ಹೆಚ್ಚಾಗುತ್ತಿದ್ದು, ಮರಣ ಪ್ರಮಾಣ ಇಳಿಕೆಯಾಗುತ್ತಿದೆ ಎಂದರು.

ಪ್ರಕೃತಿ ಚಿಕಿತ್ಸಾ ಪದ್ಧತಿ ಅಭಿವೃದ್ಧಿ ಮತ್ತು ಆಯುರ್ವೇದ ಚಿಕಿತ್ಸೆಯನ್ನು ಮುಂಚೂಣಿ ಚಿಕಿತ್ಸೆಯನ್ನಾಗಿ ಮಾಡಲು ಶಪತ ಮಾಡಬೇಕಾಗಿದೆ. ಅಲೋಪಥಿಕ್ ಚಿಕಿತ್ಸಾ ಪದ್ಧತಿಗೆ ಬದಲಿಗೆ ಆಯುರ್ವೇದಿಕ್ ಪದ್ಧತಿ ನಮ್ಮ ಗುರಿಯಬೇಕು,ಆಗ ದೇಶಕ್ಕೆ ನಿಜವಾದ ಸ್ವಾತಂತ್ಯವಾಗಲಿದೆ ಎಂದು ಅವರು ಹೇಳಿದರು.

ರಷ್ಯಾದ ಕೋವಿಡ್-19 ಲಸಿಕೆ ಕುರಿತಂತೆ ಪ್ರತಿಕ್ರಿಯಿಸಿದ ರಾಮ್ ದೇವ್, ಬೇರೆ ಬೇರೆ ರಾಷ್ಟ್ರಗಳ ಲಸಿಕೆ ದಕ್ಷತೆ ಬಗ್ಗೆ ತಿಳಿಯಬೇಕಾಗಿದೆ. ಅವುಗಳಿಂದ ಅಡ್ಡ ಪರಿಣಾಮ ಉಂಟಾಗುವ  ಸಾಧ್ಯತೆಯಿದೆ. ಅದು ಮುೂರರಿಂದ ಐದು ವರ್ಷಗಳಲ್ಲಿ ಗೊತ್ತಾಗಲಿದೆ ಎಂದರು.

ಪಂತಂಜಲಿ ಆಯುರ್ವೇದಿಕ್ ಸ್ವಸಾರಿ ಕೊರೊನಿಲ್ ಕಿಟ್ ನಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗಲಿದೆ. ಯಾವುದೇ ಅಡ್ಡ ಪರಿಣಾಮ ಉಂಟಾಗುವುದಿಲ್ಲ ಎಂದು ಅವರು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com