
ನವದೆಹಲಿ: ಸಂಬಳ ಹೆಚ್ಚಳ ಮಾಡದ ಬಾಸ್ ವಿರುದ್ಧ ಸೇಡು ತೀರಿಸಿಕೊಳ್ಳಲು ತಾನು ಕೆಲಸ ಮಾಡುತ್ತಿದ್ದ ಕಟ್ಟಡ ನಿರ್ಮಾಣ ಕಂಪನಿಯ ಹಣವನ್ನು ದೋಚಿದ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಜಯ್ ಪ್ರತಿಪ್ ದೀಕ್ಷಿತ್ ಬಂಧಿತ ಆರೋಪಿ. ಪಾರಿದಾಭಾದ್ ನಿವಾಸಿಯಾಗಿರುವ ಈತ ಹಲವು ವರ್ಷಗಳಿಂದ ಆ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಬಾರಾ ಪುಲ್ಲಾ ಮೇಲ್ಸುತುವೆ ಬಳಿ ದರೋಡೆ ಮಾಡಿರುವ ಬಗ್ಗೆ ದೀಕ್ಷಿತ್ ಅವರಿಂದ ಆಗಸ್ಟ್ 13 ರಂದು
ಪೊಲೀಸರು ಮಾಹಿತಿ ಪಡೆದುಕೊಂಡಿದ್ದಾರೆ.
ಉದ್ಯೋಗದಾತ ನಿತಿನ್ ಅವರಿಂದ 2 ಲಕ್ಷ ಹಣ ಹಾಗೂ 10 ಲಕ್ಷ ರೂ. ಚೆಕ್ ನ್ನು ಸಂಗ್ರಹಿಸಿದ ದೀಕ್ಷಿತ್, ಅವರ ನಿರ್ದೇಶನದ ಮೇರೆಗೆ ಕಂಪನಿ ಮ್ಯಾನೇಜರ್ ರಮೇಶ್ ಬಾಟಿಯಾ ಅವರಿಗೆ ಹಣವನ್ನು ಹಸ್ತಾಂತರಿಸಿದ್ದಾರೆ. ನಂತರ ಚೆಕ್ ನ್ನು ಮಹೇಶ್ ಎಂಬುವರಿಗೆ ನೀಡಿದ್ದಾರೆ.ನಂತರ ಅವರಿಂದ 10 ಲಕ್ಷ ಪಡೆದುಕೊಂಡು ತನ್ನ ಬ್ಯಾಗಿಗೆ ಹಾಕಿಕೊಂಡಿದ್ದಾಗಿ ದೀಕ್ಷಿತ್
ವಿಚಾರಣೆ ವೇಳೆಯಲ್ಲಿ ಪೊಲೀಸರಿಗೆ ತಿಳಿಸಿದ್ದಾನೆ.
ನಂತರ ಮತ್ತೊಂದು ಮೋಟಾರ್ ಬೈಕಿನಲ್ಲಿ ಇಬ್ಬರು ತನ್ನನ್ನು ಹಿಂಬಾಲಿಸಿದ್ದು, ತನ್ನ ಬ್ಯಾಗ್ ನಿಂದ 10 ಲಕ್ಷ ರೂ. ಹಣ ಹಾಗೂ ಮೊಬೈಲ್ ಪೋನ್ ದೋಚಿದ್ದಾಗಿ ಆರೋಪಿಸಿ ದೀಕ್ಷಿತ್ ದೂರು ದಾಖಲಿಸಿದ್ದ. ಅಪರಾಧ ನಡೆದ ಸ್ಥಳದಲ್ಲಿ ಪ್ರಕರಣದ ಮರುಸೃಷ್ಟಿ ನಡೆಸುವಾಗ ದೀಕ್ಷಿತ್ ಹೇಳಿಕೆಯಲ್ಲಿ ಬದಲಾವಣೆ ಕಂಡುಬಂದಿದ್ದು, ನಂತರ ಮಾಲೀಕ ನಿತಿನ್ ವಿರುದ್ಧ ಸೇಡು ತೀರಿಸಿಕೊಳ್ಳಲು
ತಾನೇ ದರೋಡೆ ಮಾಡಿರುವುದಾಗಿ ದೀಕ್ಷಿತ್ ತಪ್ಪೊಪ್ಪಿಕೊಂಡಿದ್ದಾನೆ ಎಂದು ಡಿಸಿಪಿ ಮೀನಾ ತಿಳಿಸಿದ್ದಾರೆ.
ಅನೇಕ ವರ್ಷಗಳಿಂದ ಕೆಲಸ ಮಾಡುತ್ತಿದ್ದರೂ ಮಾಲೀಕ ಸಂಬಳ ಜಾಸ್ತಿ ಮಾಡಿಲ್ಲ, ಒಂದು ಬಾರಿ ಸಾರ್ವಜನಿಕವಾಗಿ ಕಪ್ಪಾಳ ಮೋಕ್ಷ ಸೇವೆ ಕೂಡಾ ಮಾಡಿದ್ದರಿಂದ ಪಾಠ ಕಲಿಸಲು ಹಣವನ್ನು ದೋಚಿಸಿದ್ದಾಗಿ ದೀಕ್ಷಿತ್ ತಿಳಿಸಿದ್ದು, ಆತ ದರೋಡೆ ಮಾಡಿದ್ದ 10 ಲಕ್ಷ ರೂ.
ಹಣವನ್ನು ಆತನ ಮನೆಯಿಂದ ವಶಕ್ಕೆ ಪಡೆಯಲಾಗಿದೆ ಎಂದು ಡಿಸಿಪಿ ಹೇಳಿದ್ದಾರೆ.
Advertisement