ಸುಧಾರಿತ ಸ್ಫೋಟಕದೊಂದಿಗೆ ದೆಹಲಿಯಲ್ಲಿ ಇಸ್ಲಾಮಿಕ್ ಸ್ಟೇಟ್ ಕಾರ್ಯಕರ್ತನ ಬಂಧನ: ತಪ್ಪಿದ ಭಯೋತ್ಪಾದಕ ದಾಳಿ
ದೇಶ
ಸುಧಾರಿತ ಸ್ಫೋಟಕದೊಂದಿಗೆ ದೆಹಲಿಯಲ್ಲಿ ಇಸ್ಲಾಮಿಕ್ ಸ್ಟೇಟ್ ಕಾರ್ಯಕರ್ತನ ಬಂಧನ: ತಪ್ಪಿದ ಭಯೋತ್ಪಾದಕ ದಾಳಿ
ಇಸ್ಲಾಮಿಕ್ ಸ್ಟೇಟ್ ಕಾರ್ಯಕರ್ತ ಎಂದು ಶಂಕಿಸಲಾಗಿರುವ ವ್ಯಕ್ತಿಯನ್ನು ದೆಹಲಿ ಪೊಲೀಸರ ವಿಶೇಷ ವಿಭಾಗ ಬಂಧಿಸಿದ್ದು, ಆತನಿಂದ ಎರಡು ಸುಧಾರಿತ ಸ್ಫೋಟಕ ಸಾಧನಗಳು(ಐಇಡಿ) ಮತ್ತು ಅರೆ-ಸ್ವಯಂಚಾಲಿತ ಬೋರ್ ಪಿಸ್ತೂಲ್ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.
ನವದೆಹಲಿ: ಇಸ್ಲಾಮಿಕ್ ಸ್ಟೇಟ್ ಕಾರ್ಯಕರ್ತ ಎಂದು ಶಂಕಿಸಲಾಗಿರುವ ವ್ಯಕ್ತಿಯನ್ನು ದೆಹಲಿ ಪೊಲೀಸರ ವಿಶೇಷ ವಿಭಾಗ ಬಂಧಿಸಿದ್ದು, ಆತನಿಂದ ಎರಡು ಸುಧಾರಿತ ಸ್ಫೋಟಕ ಸಾಧನಗಳು(ಐಇಡಿ) ಮತ್ತು ಅರೆ-ಸ್ವಯಂಚಾಲಿತ ಬೋರ್ ಪಿಸ್ತೂಲ್ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಶಂಕಿತನನ್ನು 36 ವರ್ಷದ ಮೊಹಮ್ಮದ್ ಮುಸ್ತಾಕಿಮ್ ಖಾನ್ ಅಲಿಯಾಸ್ ಅಬ್ದುಲ್ ಅಲಿಯಾಸ್ ಅಬು ಯೂಸುಫ್ ಎಂದು ಗುರುತಿಸಲಾಗಿದೆ ಎಂದು ದೆಹಲಿ ವಿಶೇಷ ವಿಭಾಗದ ಡಿಸಿಪಿ ಪ್ರಮೋದ್ ಸಿಂಗ್ ಕುಶ್ವಾ ಹೇಳಿದ್ದಾರೆ. ಶುಕ್ರವಾರ ಮಧ್ಯರಾತ್ರಿ ಧೌಲಾ ಕುವಾನ್ ಬಳಿಯ ರಿಡ್ಜ್ ರಸ್ತೆಯಲ್ಲಿ ಗುಂಡಿನ ಚಕಮಕಿ ನಡೆದ ನಂತರ ಶಂಕಿತನನ್ನು ಬಂಧಿಸಲಾಗಿದ್ದು, ಆತನಿಂದ ಎರಡು ಪ್ರೆಶರ್ ಕುಕ್ಕರ್ ಗಳಲ್ಲಿ ಇರಿಸಲಾಗಿದ್ದ ಐಇಡಿಗಳನ್ನು ಆತನಿಂದ ವಶಪಡಿಸಿಕೊಳ್ಳಲಾಗಿದೆ.


