ಅನ್ ಲಾಕ್ 4ರಲ್ಲಿ  ಮೆಟ್ರೋ ರೈಲು ಸೇವೆ ಪುನರ್ ಆರಂಭ ಸಾಧ್ಯತೆ: ರಾಜ್ಯಗಳೊಂದಿಗೆ ಅಂತಿಮ ಮಾತುಕತೆ- ಮೂಲಗಳು

ಕೊರೋನಾವೈರಸ್ ಸಂಬಂಧಿತ ನಿರ್ಬಂಧಗಳು ಮುಂದಿನ ತಿಂಗಳು ಬಹುತೇಕ ಮುಗಿಯುವ ನಿರೀಕ್ಷೆಯಿದ್ದು, ಅನ್ ಲಾಕ್ 4ರಲ್ಲಿ ಮೆಟ್ರೋ ರೈಲು ಸೇವೆಗೆ ಅವಕಾಶ ದೊರೆಯುವ ಸಾಧ್ಯತೆಯಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಮೆಟ್ರೋ ರೈಲು
ಮೆಟ್ರೋ ರೈಲು

ನವದೆಹಲಿ: ಕೊರೋನಾವೈರಸ್ ಸಂಬಂಧಿತ ನಿರ್ಬಂಧಗಳು ಮುಂದಿನ ತಿಂಗಳು ಬಹುತೇಕ ಮುಗಿಯುವ ನಿರೀಕ್ಷೆಯಿದ್ದು, ಅನ್ ಲಾಕ್ 4ರಲ್ಲಿ ಮೆಟ್ರೋ ರೈಲು ಸೇವೆಗೆ ಅವಕಾಶ ದೊರೆಯುವ ಸಾಧ್ಯತೆಯಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಆದರೆ, ಶಾಲಾ, ಕಾಲೇಜುಗಳು ಪುನರ್ ಆರಂಭಕ್ಕೆ ಇನ್ನೊಂದಿಷ್ಟು ದಿನಗಳು ಕಾಯಲೇಬೇಕಾಗಲಿದ್ದು, ಚಿತ್ರಮಂದಿರದಂತಹ ಜನ ದಟ್ಟಣೆಯ ಪ್ರದೇಶಗಳಲ್ಲಿ ನಿರ್ಬಂಧಗಳು ಮುಂದುವರೆಯಲಿದೆ ಎಂಬುದು ತಿಳಿದುಬಂದಿದೆ.

ಮೆಟ್ರೋ ರೈಲು ಸೇವೆ ಪುನರ್ ಆರಂಭ ಸಂಬಂಧ ಅಂತಿಮ ಹಂತದ ಚರ್ಚೆಗಳು ನಡೆಯುತ್ತಿವೆ. ಆದಾಗ್ಯೂ. ಅದನ್ನು ರಾಜ್ಯ 
ಸರ್ಕಾರಗಳಿಗೆ ಬಿಡಲಾಗಿದೆ.

ಸೆಪ್ಟೆಂಬರ್ 1ರಿಂದ ದೆಹಲಿಯಲ್ಲಿ ಮೆಟ್ರೋ ರೈಲು ಸೇವೆ ಪುನರ್ ಆರಂಭ ಸಾಧ್ಯತೆಯಿದೆ. ಆದರೆ, ತೀವ್ರ ನಿರ್ಬಂಧಗಳು ಇರಲಿವೆ ಎಂದು ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com