ತರುಣ್ ಗೊಗೊಯ್
ದೇಶ
ಅಸ್ಸಾಂ ಮಾಜಿ ಮುಖ್ಯಮಂತ್ರಿ ತರುಣ್ ಗೊಗೊಯ್ ಗೆ ಕೊರೋನಾ ಪಾಸಿಟಿವ್
ತಾವು ಕೊರೋನಾ ಸೋಂಕಿಗೆ ಒಳಗಾಗಿರುವುದಾಗಿ ಅಸ್ಸಾಂ ಮಾಜಿ ಮುಖ್ಯಮಂತ್ರಿ ತರುಣ್ ಗೊಗೊಯ್ ಹೇಳಿದ್ದಾರೆ.ತಮ್ಮ ಸಂಪರ್ಕಕ್ಕೆ ಇತ್ತೀಚೆಗೆ ಬಂದಿರುವ ಎಲ್ಲರೂ ಸೋಂಕು ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಮನವಿ ಮಾಡಿಕೊಂಡಿದ್ದಾರೆ. ನಿನ್ನೆ ನನಗೆ ಸೋಂಕು ತಗಲಿರುವುದು ಪತ್ತೆಯಾಗಿದೆ ಎಂದು ಗೊಗೊಯ್ ಹೇಳಿದ್ದಾರೆ.
ಗುವಾಹಟಿ: ತಾವು ಕೊರೋನಾ ಸೋಂಕಿಗೆ ಒಳಗಾಗಿರುವುದಾಗಿ ಅಸ್ಸಾಂ ಮಾಜಿ ಮುಖ್ಯಮಂತ್ರಿ ತರುಣ್ ಗೊಗೊಯ್ ಹೇಳಿದ್ದಾರೆ.
ತಮ್ಮ ಸಂಪರ್ಕಕ್ಕೆ ಇತ್ತೀಚೆಗೆ ಬಂದಿರುವ ಎಲ್ಲರೂ ಸೋಂಕು ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಮನವಿ ಮಾಡಿಕೊಂಡಿದ್ದಾರೆ. ನಿನ್ನೆ ನನಗೆ ಸೋಂಕು ತಗಲಿರುವುದು ಪತ್ತೆಯಾಗಿದೆ ಎಂದು ಗೊಗೊಯ್ ಹೇಳಿದ್ದಾರೆ.
ವೈದ್ಯರು ಗೊಗೊಯ್ ಅವರಿಗೆ ಹೋಂ ಐಸೊಲೇಷನ್ ಗೆ ಸಲಹೆ ನೀಡಿದ್ದಾರೆ. ಅವರ ಪತ್ನಿ ಡಾಲಿ ಗೊಗೊಯ್ ಗೆ ಕೊರೋನಾ ನೆಗೆಟಿವ್ ಬಂದಿದೆ.
ಟಿಟಬೊರ್ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಗೊಗೊಯ್ ಅಸ್ಸಾಂನಲ್ಲಿ ಕೋವಿಡ್-19 ಸೋಂಕಿಗೆ ಒಳಗಾಗಿರುವ 13ನೇ ಶಾಸಕರಾಗಿದ್ದಾರೆ. ಅಸ್ಸಾಂನಲ್ಲಿ ಸೋಂಕಿಗೆ ಒಳಗಾಗಿರುವ 13 ಶಾಸಕರಲ್ಲಿ ಏಳು ಮಂದಿ ಬಿಜೆಪಿಯವರಾಗಿದ್ದು, ಮೂವರು ಕಾಂಗ್ರೆಸ್, ಇಬ್ಬರು ಎಜಿಪಿ ಮತ್ತು ಒ ಬ್ಬರು ಎಐಯುಡಿಎಫ್ ನವರಾಗಿದ್ದಾರೆ.

