ಪಂಜಾಬ್: ದರೋಡೆಕೋರರಿಂದ ಕ್ರಿಕೆಟರ್ ಸುರೇಶ್ ರೈನಾ ಅಂಕಲ್ ಹತ್ಯೆ
ಪಠಾಣ್ ಕೋಟ್ : ಪಂಜಾಬಿನ ಪಠಾಣ್ ಕೋಟ್ ಜಿಲ್ಲೆಯ ಹಳ್ಳಿಯೊಂದರಲ್ಲಿ ದರೋಡೆಕೋರರು ದಾಳಿಯಿಂದ ಕ್ರಿಕೆಟ್ ಆಟಗಾರ ಸುರೇಶ್ ರೈನಾ ಅವರ 58 ವರ್ಷದ ಅಂಕಲ್ ಮೃತಪಟ್ಟಿದ್ದು, ಕುಟುಂಬದ ಇತರ ನಾಲ್ವರು ಸದಸ್ಯರು ತೀವ್ರ ರೀತಿಯಲ್ಲಿ ಗಾಯಗೊಂಡಿರುವ ಘಟನೆ ನಡೆದಿದೆ.ಮೃತರನ್ನು ಸರ್ಕಾರಿ ಗುತ್ತಿಗೆದಾರ ಅಶೋಕ್ ಕುಮಾರ್ ಎಂದು ಗುರುತಿಸಲಾಗಿದೆ.
ಆಗಸ್ಟ್ 19 ಮತ್ತು 20ರ ಮಧ್ಯರಾತ್ರಿಯಲ್ಲಿ ಪಂಜಾಬಿನ ಪಠಾಣ್ ಕೋಟ್ ಜಿಲ್ಲೆಯ ಥಾರಿಯಲ್ ಹಳ್ಳಿಯಲ್ಲಿ ಈ ಘಟನೆ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.ಮೃತರು ಸುರೇಶ್ ರೈನಾ ಅವರ ಅಂಕಲ್ ಎಂಬುದನ್ನು ಕುಮಾರ್ ಅವರ ಹಿರಿಯ ಸಹೋದರ ಶ್ಯಾಮ್ ಲಾಲ್ ಸ್ಪಷ್ಪಪಡಿಸಿದ್ದಾರೆ.
ಕಾಲೇ ಕಾಚ್ಚೆವಾಲಾ ಗ್ಯಾಂಗಿನ ನಾಲ್ವರು ನಟೋರಿಯಸ್ ದರೋಡೆಕೋರರು ಲೂಟಿ ಮಾಡುವ ಉದ್ದೇಶದಿಂದ ಮನೆಗೆ ಬಂದಿದ್ದಾರೆ. ಆ ಸಂದರ್ಭದಲ್ಲಿ ಮನೆಯ ಟೆರೇಸ್ ಮೇಲೆ ಮಲಗಿದ್ದ ಅಶೋಕ್ ಕುಮಾರ್ ಅವರ ಮೇಲೆ ದಾಳಿ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತಲೆಗೆ ತೀವ್ರ ಪೆಟ್ಟಾಗಿ ಅಶೋಕ್ ಕುಮಾರ್ ಸ್ಥಳದಲ್ಲಿಯೇ ಮೃತಪಟ್ಟಿದ್ದು, 80 ವರ್ಷದ ಅವರ ತಾಯಿ ಸತ್ಯಾದೇವಿ, ಪತ್ನಿ ಅಶಾ ದೇವಿ, ಮಕ್ಕಳಾದ ಅಪಿನ್ ಮತ್ತು ಕೌಶಾಲ್ ತೀವ್ರ ರೀತಿಯಲ್ಲಿ ಗಾಯಗೊಂಡಿರುವುದಾಗಿ ತಿಳಿಸಿರುವ ಪೊಲೀಸರು, ಈ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವುದಾಗಿ ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ