2020 ರಲ್ಲಿ ಜನಗಣತಿ, ಎನ್ ಪಿಆರ್ ಪ್ರಕ್ರಿಯೆ ನಡೆಯುವ ಸಾಧ್ಯತೆ  ಕ್ಷೀಣ 

ದೇಶಾದ್ಯಂತ ಕೊರೋನಾ ರಣಕೇಕೆ ಹಾಕುತ್ತಿದ್ದು, ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಪರಿಣಾಮ 2020 ರಲ್ಲಿ ನಿಗದಿಯಾಗಿದ್ದ ಹಲವು ಯೋಜನೆಗಳು ಒಂದು ವರ್ಷದ ಮಟ್ಟಿಗೆ ಮುಂದೂಡಲ್ಪಟ್ಟಿವೆ. ಈ ಪಟ್ಟಿಗೆ ಎನ್ ಪಿಆರ್ ಹಾಗೂ ಜನಗಣತಿಯೂ ಸೇರ್ಪಡೆಯಾಗುವ ಎಲ್ಲಾ ಲಕ್ಷಣಗಳಿವೆ. 
ಎನ್‌ಪಿಆರ್‌
ಎನ್‌ಪಿಆರ್‌
Updated on

ದೇಶಾದ್ಯಂತ ಕೊರೋನಾ ರಣಕೇಕೆ ಹಾಕುತ್ತಿದ್ದು, ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಪರಿಣಾಮ 2020 ರಲ್ಲಿ ನಿಗದಿಯಾಗಿದ್ದ ಹಲವು ಯೋಜನೆಗಳು ಒಂದು ವರ್ಷದ ಮಟ್ಟಿಗೆ ಮುಂದೂಡಲ್ಪಟ್ಟಿವೆ. ಈ ಪಟ್ಟಿಗೆ ಎನ್ ಪಿಆರ್ ಹಾಗೂ ಜನಗಣತಿಯೂ ಸೇರ್ಪಡೆಯಾಗುವ ಎಲ್ಲಾ ಲಕ್ಷಣಗಳಿವೆ. 

ಸೆನ್ಸಸ್ ನ ಮೊದಲ ಹಂತ ಹಾಗೂ ಎನ್ ಪಿಆರ್ ಪ್ರಕ್ರಿಯೆ 2020 ರಲ್ಲಿ ನಿಗದಿಯಾಗಿತ್ತು. 

ಇಡೀ ವಿಶ್ವದಲ್ಲೇ ಭಾರತೀಯ ಜನಗಣತಿ ಅತಿ ದೊಡ್ಡ ಆಡಳಿತಾತ್ಮಕ ಹಾಗೂ ಅಂಕಿಂಶಗಳನ್ನೊಳಗೊಂಡ ಪ್ರಕ್ರಿಯೆಯಾಗಿದ್ದು, 30 ಲಕ್ಷ ಅಧಿಕಾರಿಗಳು ದೇಶದ ಮೂಲೆ ಮೂಲೆಗಳಿಗೆ ಸಂಚರಿಸಿ ಮಾಹಿತಿ ಕಲೆ ಹಾಕಲಿದ್ದಾರೆ.

ಕೊರೋನಾ ಹಿನ್ನೆಲೆಯಲ್ಲಿ ಜನಗಣತಿ ಮುಂದೂಡುವ ಸಾಧ್ಯತೆಯ ಬಗ್ಗೆ ಹಿರಿಯ ಅಧಿಕಾರಿಯೊಬ್ಬರು ಮಾತನಾಡಿದ್ದು, "ಜನಗಣತಿ ಈಗ ತೀರಾ ಅತ್ಯಗತ್ಯವಾದ ಪ್ರಕ್ರಿಯೆಯೇನಲ್ಲ, ಆದ್ದರಿಂದ ಒಂದು ವರ್ಷದ ಅವಧಿಗೆ ಅದನ್ನು ಮುಂದೂಡಬಹುದು ಎಂದು ಹೇಳಿದ್ದಾರೆ. 

2021 ರಲ್ಲಿ ಯಾವಾಗ ಜನಗಣತಿ ನಡೆಯಲಿದೆ ಎಂಬ ಬಗ್ಗೆ ಇನ್ನೂ ನಿರ್ಧಾರ ಕೈಗೊಂಡಿಲ್ಲ. ಆದರೆ ಎನ್ ಪಿಆರ್ ಅಪ್ಡೇಟ್ ಮಾಡುವ ಪ್ರಕ್ರಿಯೆ 2020 ರಲ್ಲಿ ನಡೆಯುವುದಿಲ್ಲ. 2021 ರಲ್ಲಿ ನಡೆಯುವುದು ಖಾತ್ರಿ ಎಂದು ಅಧಿಕಾರಿ ತಿಳಿಸಿದ್ದಾರೆ. ಏ.1 ರಿಂದ ಸೆ.30 ವರೆಗೆ ಸೆನ್ಸಸ್ ಹಾಗೂ ಎನ್ ಪಿ ಆರ್ ಪ್ರಕ್ರಿಯೆ ನಡೆಯಬೇಕಿತ್ತು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com