
ಭೋಪಾಲ್: ಮಧ್ಯಪ್ರದೇಶದ ಶಹ್ದೋಲ್ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ 24 ಗಂಟೆಯೊಳಗೆ ನವಜಾತ ಶಿಶು ಸೇರಿದಂತೆ ನಾಲ್ಕು ಶಿಶುಗಳು ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ತನಿಖೆಗೆ ಆದೇಶ ನೀಡಲಾಗಿದೆ.
ಕಳೆದ ಶುಕ್ರವಾರ ಮೂರು ಶಿಶುಗಳು ಮಕ್ಕಳ ತೀವ್ರ ನಿಗಾ ಘಟಕದಲ್ಲಿ ಮೃತಪಟ್ಟರೆ ತೀವ್ರ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನವಜಾತ ಹೆಣ್ಣು ಮಗು ಅದೇ ದಿನ ಮೃತಪಟ್ಟಿದೆ.
ಉಸಿರಾಟದ ತೊಂದರೆಯಿದೆ ಎಂದು ಉಮಾರಿಯಾ ಜಿಲ್ಲಾಸ್ಪತ್ರೆ ನವಜಾತ ಶಿಶುವನ್ನು ದಾಖಲಿಸುವಂತೆ ಸೂಚಿಸಲಾಗಿತ್ತು, ಆದರೆ ವೆಂಟಿಲೇಟರ್ ನಲ್ಲಿಟ್ಟರೂ ಕೂಡ ಶಿಶುವನ್ನು ರಕ್ಷಿಸಿಕೊಳ್ಳಲಾಗಲಿಲ್ಲ ಎಂದು ಶಹ್ದೋಲ್ ಜಿಲ್ಲಾ ಮುಖ್ಯ ವೈದ್ಯಕೀಯ ಮತ್ತು ಆರೋಗ್ಯಾಧಿಕಾರಿ ಡಾ ರಾಜೇಶ್ ಪಾಂಡೆ ತಿಳಿಸಿದ್ದಾರೆ.
2 ತಿಂಗಳಿನಿಂದ 4 ತಿಂಗಳೊಳಗಿನ ಎಲ್ಲಾ ಗಂಡು ಶಿಶುಗಳು ಮೃತಪಟ್ಟಿದ್ದಾರೆ. ನಾವು ನಾಲ್ಕು ಶಿಶುಗಳ ಮರಣಕ್ಕೆ ಸಂಬಂಧಪಟ್ಟಂತೆ ವಿವರವಾದ ತನಿಖೆಗೆ ಆದೇಶಿಸಿದ್ದೇವೆ. ಯಾವುದೇ ಲೋಪದೋಷಗಳು ಕಂಡುಬಂದಲ್ಲಿ ಸಂಬಂಧಪಟ್ಟ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.ತನಿಖೆಗೆ ಸಮಿತಿಯನ್ನು ರಚಿಸಲಾಗಿದೆ ಎಂದು ಡಾ ಪಾಂಡೆ ತಿಳಿಸಿದ್ದಾರೆ.
ಇದೇ ಆಸ್ಪತ್ರೆಯಲ್ಲಿ ಕಳೆದ 10 ತಿಂಗಳಲ್ಲಿ ಈ ರೀತಿ ನವಜಾತ ಶಿಶುಗಳು ಮರಣ ಹೊಂದುತ್ತಿರುವುದು ಇದು ಎರಡನೇ ಬಾರಿ. ಕಳೆದ ಜನವರಿಯಲ್ಲಿ 6 ಬುಡಕಟ್ಟು ಜನಾಂಗದ ಮಕ್ಕಳು 15 ಗಂಟೆಗಳೊಳಗೆ ಇದೇ ಶಹ್ ದೊಲ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದವು.
Advertisement