'ಸೂಟು-ಬೂಟು ಸರ್ಕಾರದ ಆಳ್ವಿಕೆಯಲ್ಲಿ ರೈತರ ಆದಾಯ ಅರ್ಧದಷ್ಟಾಗಿದೆ, ಸರ್ಕಾರದ ಸ್ನೇಹಿತರ ವರಮಾನ ದುಪ್ಪಟ್ಟಾಗಿದೆ'

ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಸೂಟು ಬೂಟು ಸರ್ಕಾರದ ಅಡಿಯಲ್ಲಿ ರೈತರ ಅದಾಯ ಅರ್ಧದಷ್ಟು ಇಳಿಕೆಯಾಗಿದೆ, ಆದರೆ ಸರ್ಕಾರದ ಸ್ನೇಹಿತರ ಆದಾಯ ಮಾತ್ರ ಹೆಚ್ಚುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ರಾಹುಲ್ ಗಾಂಧಿ
ರಾಹುಲ್ ಗಾಂಧಿ

ನವದೆಹಲಿ: ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಸೂಟು ಬೂಟು ಸರ್ಕಾರದ ಅಡಿಯಲ್ಲಿ ರೈತರ ಅದಾಯ ಅರ್ಧದಷ್ಟು ಇಳಿಕೆಯಾಗಿದೆ, ಆದರೆ ಸರ್ಕಾರದ ಸ್ನೇಹಿತರ ಆದಾಯ ಮಾತ್ರ ಹೆಚ್ಚುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಕೇಂದ್ರದ ಹೊಸ ಕೃಷಿ ಸುಧಾರಣಾ ಕಾನೂನುಗಳ ವಿರುದ್ಧ ಪಂಜಾಬ್ ಮತ್ತು ಹರಿಯಾಣದ ರೈತರು ರಾಷ್ಟ್ರ ರಾಜಧಾನಿಯ ಸಿಂಗು, ಟಿಕ್ರಿ ಮತ್ತು ಗಾಜಿಪುರ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ಸಮಯದಲ್ಲಿ ಈ ಹೇಳಿಕೆ ನೀಡಿದ್ದಾರೆ.

ರೈತರ ಆದಾಯ ದ್ವಿಗುಣಗೊಳ್ಳಲಿದೆ ಎಂದು ಅವರು ಹೇಳಿದ್ದರು, ಆದರೆ ಅವರ ಅಂದರೆ ಸರ್ಕಾರದ ಸ್ನೇಹಿತರ ಆದಾಯ ದ್ವಿಗುಣಗೊಳ್ಳುತ್ತಿದೆ, ರೈತರ ಆದಾಯ ಅರ್ಧಕ್ಕೆ ಇಳಿದಿದೆ ಎಂದು, ಸೂಟು-ಬೂಟು ಸರ್ಕಾರ ಲೂಟಿ ಮಾಡುತ್ತಿದೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ರೈತರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಅವರ ಆದಾಯವನ್ನು ದ್ವಿಗುಣಗೊಳಿಸಲು ತಮ್ಮ ಸರ್ಕಾರ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರ ಭಾಷಣಕ್ಕೆ ಧ್ವನಿಮುದ್ರಣದ ಜೊತೆಗೆ,  ಪ್ರತಿಭಟನಾ ನಿರತ ರೈತರ ವಿರುದ್ಧ ದೌರ್ಜನ್ಯ ಮತ್ತು ಬಲಪ್ರಯೋಗ ನಡೆಸಿದ ವಿಡಿಯೋವನ್ನೂ ರಾಹುಲ್ ಗಾಂಧಿ ಶೇರ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com