2ನೇ ತರಗತಿವರೆಗೆ ಹೋಮ್ ವರ್ಕ್ ಇಲ್ಲ, ತೂಕದ ಶೇಕಡ 10ಕ್ಕಿಂತ ಹೆಚ್ಚು ಭಾರದ ಸ್ಕೂಲ್ ಬ್ಯಾಗ್‌ ಹೊರಿಸುವಂತಿಲ್ಲ!

2ನೇ ತರಗತಿವರೆಗಿನ ಮಕ್ಕಳಿಗೆ ಹೋಮ್ ವರ್ಕ್ ನೀಡುವಂತಿಲ್ಲ ಮತ್ತು ಶಾಲಾ ಮಕ್ಕಳು ದೇಹದ ತೂಕದ ಶೇ.10ಕ್ಕಿಂತ ಹೆಚ್ಚಿನ ಭಾರದ ಬ್ಯಾಗ್ ಗಳನ್ನು ಹೊರುವಂತಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ನವದೆಹಲಿ: 2ನೇ ತರಗತಿವರೆಗಿನ ಮಕ್ಕಳಿಗೆ ಹೋಮ್ ವರ್ಕ್ ನೀಡುವಂತಿಲ್ಲ ಮತ್ತು ಶಾಲಾ ಮಕ್ಕಳು ದೇಹದ ತೂಕದ ಶೇ.10ಕ್ಕಿಂತ ಹೆಚ್ಚಿನ ಭಾರದ ಬ್ಯಾಗ್ ಗಳನ್ನು ಹೊರುವಂತಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ.

ಕೇಂದ್ರ ಶಿಕ್ಷಣ ಸಚಿವಾಲಯದ ’ಪಾಲಿಸಿ ಆನ್ ಸ್ಕೂಲ್ ಬ್ಯಾಗ್ 2020’ ಮಾರ್ಗಸೂಚಿ ಅನ್ವಯ, ಶಾಲಾ ಮಕ್ಕಳ ಬ್ಯಾಗ್ ತೂಕವನ್ನು ನಿಯತವಾಗಿ ಶಾಲೆಗಳಲ್ಲಿ ಗಮನಿಸುತ್ತಿರಬೇಕು. ಇದು ಲಘು ತೂಕದ್ದಾಗಿದ್ದು, ಎರಡು ಪಟ್ಟಿಗಳನ್ನು ಹೊಂದಿ ಮಕ್ಕಳ ಹೆಗಲಿನ ಎರಡೂ ಬದಿಗೆ ಸಮತೂಕ ಹಾಕುವ ರೀತಿಯಲ್ಲಿ  ಇರಬೇಕು ಹಾಗೂ ಚಕ್ರ ಇರುವ ಸ್ಕೂಲ್‌ಬ್ಯಾಗ್‌ಗಳಿಗೆ ಅವಕಾಶ ಇರುವುದಿಲ್ಲ. ಪ್ರಕಾಶಕರು ಮುದ್ರಿಸುವ ಪಠ್ಯಪುಸ್ತಕದ ತೂಕವನ್ನೂ ಈ ನೀತಿ ಶಿಫಾರಸು ಮಾಡಿದೆ. 

ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ) ನಡೆಸಿದ ಹಲವು ಸಮೀಕ್ಷೆ ಮತ್ತು ಅಧ್ಯಯನಗಳ ಆಧಾರದಲ್ಲಿ ಈ ಶಿಫಾರಸು ಮಾಡಲಾಗಿದೆ. ಪ್ರಮುಖವಾಗಿ 2 ರಿಂದ ಹತ್ತನೇ ತರಗತಿವರೆಗಿನ ಮಕ್ಕಳಿಗೆ ಅವರ ದೇಹತೂಕದ ಶೇಕಡ 10ಕ್ಕಿಂತ ಹೆಚ್ಚು ಭಾರದ ಸ್ಕೂಲ್ ಬ್ಯಾಗ್‌ಗಳನ್ನು  ಹೊರಿಸುವಂತಿಲ್ಲ. ಅಂತೆಯೇ ಎರಡನೇ ತರಗತಿವರೆಗಿನ ಮಕ್ಕಳಿಗೆ ಹೋಮ್‌ವರ್ಕ್ ನೀಡಬಾರದು ಎಂದು ಹೇಳಲಾಗಿದೆ. ದೇಶಾದ್ಯಂತ 352 ಶಾಲೆಗಳ 3,624 ವಿದ್ಯಾರ್ಥಿಗಳು ಹಾಗೂ 2,992 ಪೋಷಕರನ್ನು ಸಮೀಕ್ಷೆಗೆ ಒಳಪಡಿಸಿ ಈ ಮಾಹಿತಿ ಸಂಗ್ರಹಿಸಲಾಗಿದೆ ಎಂದು ನೀತಿಯಲ್ಲಿ ವಿವರಿಸಲಾಗಿದೆ. 

ನೂತನ ನೀತಿಯು ಶಾಲಾ ಮಕ್ಕಳ ಬ್ಯಾಗ್‌ಗೆ ಸಂಬಂದಿಸಿದಂತೆ 11 ಶಿಫಾರಸುಗಳನ್ನು ಮಾಡಿದ್ದು, ಎಲ್ಲ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಮಧ್ಯಾಹ್ನದ ಊಟ, ಕುಡಿಯಲು ಶುದ್ಧ ನೀರು ಒದಗಿಸುವ ಮೂಲಕ ಮಕ್ಕಳು ಲಂಚ್ ಬಾಕ್ಸ್ ಮತ್ತು ನೀರಿನ ಬಾಟಲಿ ಒಯ್ಯುವುದನ್ನು ತಪ್ಪಿಸಬೇಕು. ಇದು ಆಯಾ  ಶಾಲೆಗಳ ಜವಾಬ್ದಾರಿಯಾಗಿರುತ್ತದೆ ಎನ್ನುವ ಶಿಫಾರಸೂ ಸೇರಿದೆ. ಪುಸ್ತಕ ಬ್ಯಾಂಕ್ ಮೂಲಕ ವಿಶೇಷ ಅಗತ್ಯತೆಯ ಮಕ್ಕಳಿಗೆ ಎರಡು ಸೆಟ್ ಪುಸ್ತಕಗಳನ್ನು ಒದಗಿಸಬೇಕು ಮತ್ತು ಶಾಲೆಗಳಲ್ಲಿ ಇದಕ್ಕೆ ಲಾಕರ್‌ಗಳನ್ನು ಒದಗಿಸಬೇಕು ಎಂದೂ ಶಿಫಾರಸು ಮಾಡಿದೆ.

'ಮಕ್ಕಳಿಗಾಗಿ ಪಠ್ಯಪುಸ್ತಕವನ್ನು ಆಯ್ಕೆ ಮಾಡಲು, ತೂಕದ ಮಾನದಂಡವನ್ನು ಗಣನೆಗೆ ತೆಗೆದುಕೊಳ್ಳಬೇಕು. ಪ್ರತಿ ಪಠ್ಯಪುಸ್ತಕದ  ಜೊತೆಗೆ ಗ್ರಾಮ್ಸ್ ಪರ್ ಸ್ಕ್ವೇರ್ ಮೀಟರ್ (ಜಿಎಸ್ಎಂ) ತೂಕವನ್ನು ಪ್ರಕಾಶಕರು ಪಠ್ಯಪುಸ್ತಕದಲ್ಲಿ ಮುದ್ರಿಸಬಹುದು. 1 ಮತ್ತು 2 ನೇ ತರಗತಿಯ ಮಕ್ಕಳು ತುಂಬಾ  ಚಿಕ್ಕವರಾಗಿರುವುದರಿಂದ ಅವರಿಗೆ ಯಾವುದೇ ರೀತಿಯ ಹೋಮ್‌ವರ್ಕ್ ನೀಡಬೇಕಾಗಿಲ್ಲ. ಬದಲಿಗೆ ಅವರು ತಮ್ಮ ಸಂಜೆಯನ್ನು ಮನೆಯಲ್ಲಿ ಹೇಗೆ ಕಳೆದರು, ಅವರು ಆಡಿದ ಆಟಗಳು, ಅವರು ಸೇವಿಸಿದ ಆಹಾರ ಇತ್ಯಾದಿಗಳ ಬಗ್ಗೆ ಮಾತನಾಡಲು ತರಗತಿಯಲ್ಲಿ ಅವರನ್ನು ಪ್ರೋತ್ಸಾಹಿಸಬೇಕಾಗಿದೆ. 3, 4 ಮತ್ತು  5 ನೇ ತರಗತಿಯ ಮಕ್ಕಳಿಗೆ ವಾರಕ್ಕೆ ಗರಿಷ್ಠ ಎರಡು ಗಂಟೆಗಳು ಮಾತ್ರ ಹೋಮ್ ವರ್ಕ್ ನೀಡಬೇಕು. ಶಿಕ್ಷಕರು "ಪ್ರತಿ ಮಗುವಿಗೆ ಸಂಜೆ ದಿನಚರಿ, ಹಿಂದಿನ ರಾತ್ರಿ ಅವರು ತೆಗೆದುಕೊಂಡ ಭೋಜನ - ಆಹಾರ ವಸ್ತುಗಳು, ಪದಾರ್ಥಗಳು , ವಿವಿಧ ರೀತಿಯ ಆಹಾರಗಳ ಬಗ್ಗೆ ಅವರ ಇಷ್ಟಗಳು ಮತ್ತು  ಇಷ್ಟಪಡದಿರುವಿಕೆಗಳು, ಹೋಮ್ ವರ್ಕ್ ಅನ್ನ ಯಾರು ತಮ್ಮ ಮನೆಗಳಲ್ಲಿ ಮಾಡುತ್ತಾರೆ ಎಂಬ ಅಂಶಗಳನ್ನು ಕಲೆಹಾಕಬೇಕು. ಇನ್ನು 6 ರಿಂದ 8 ತರಗತಿ ವಿದ್ಯಾರ್ಥಿಗಳಿಗೆ ದಿನಕ್ಕೆ ಗರಿಷ್ಠ 1 ಹೋಮ್ ವರ್ಕ್ ಮಾತ್ರ ನೀಡಬೇಕು ಎಂದು ಶಿಫಾರಸ್ಸು ಮಾಡಲಾಗಿದೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com