ರಾಹುಲ್ ಗಾಂಧಿ
ದೇಶ
ಸರ್ಕಾರ ಕೃಷಿ ಮಸೂದೆ ವಾಪಸ್ ಪಡೆಯಲು ರೈತರು ಇನ್ನೆಷ್ಟು ತ್ಯಾಗ ಮಾಡಬೇಕು? ರಾಹುಲ್ ಗಾಂಧಿ ಪ್ರಶ್ನೆ
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಮಸೂದೆಯನ್ನು ವಾಪಸ್ ಪಡೆಯಲು ಇನ್ನೆಷ್ಟು ರೈತರು ತ್ಯಾಗ ಮಾಡಬೇಕು ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.
ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಮಸೂದೆಯನ್ನು ವಾಪಸ್ ಪಡೆಯಲು ಇನ್ನೆಷ್ಟು ರೈತರು ತ್ಯಾಗ ಮಾಡಬೇಕು ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.
ಕಳೆದ 17 ದಿನಗಳಲ್ಲಿ 11 ಮಂದಿ ರೈತರು ಸಾವನ್ನಪ್ಪಿದ್ದಾರೆ ಮಾಧ್ಯಮಗಳ ವರದಿಯನ್ನು ಕಾಂಗ್ರೆಸ್ ಪಟ್ಟಿ ಮಾಡಿದ್ದು, ಇದುವರೆಗೆ ರೈತರು ಮತ್ತು ಸರ್ಕಾರದ ನಡುವ ಐದು ಸುತ್ತಿನ ಮಾತುಕತೆ ನಡೆದಿದೆ.
ಮುಖ್ಯವಾಗಿ ಪಂಜಾಬ್ ಮತ್ತು ಹರಿಯಾಣದಿಂದ, ಎರಡು ವಾರಗಳ ಕಾಲ ರಾಷ್ಟ್ರ ರಾಜಧಾನಿಯ ವಿವಿಧ ಗಡಿಗಳಲ್ಲಿ ಪ್ರತಿಭಟನೆ ನಡೆಸಿದರು, ಮೂರು ವಿವಾದಾತ್ಮಕ ಕಾನೂನುಗಳನ್ನು ರದ್ದುಗೊಳಿಸುವಂತೆ ರೈತ ಪರ ಸಂಘಟನೆಗಳು ಒತ್ತಾಯಿಸಿವೆ. ಈ ಸಂಬಂಧ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ ಇನ್ನೆಷ್ಟು ರೈತರ ಬಲಿದಾನ ಆಗಬೇಕು ಎಂದು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

