ಒಡಿಶಾದ ಮಲ್ಕನ್ ಗಿರಿಯಲ್ಲಿ ಭದ್ರತಾ ಪಡೆಗಳಿಂದ ಇಬ್ಬರು ಪ್ರಮುಖ ನಕ್ಸಲರ ಹತ್ಯೆ

ಒಡಿಶಾದ ಮಲ್ಕನ್ ಗಿರಿ ಜಿಲ್ಲೆಯ ಸ್ವಾಭಿಮಾನ್ ಪ್ರದೇಶದ ಸಿಂಗ್ರಾಮ್  ಗ್ರಾಮದಲ್ಲಿ ಇಂದು ಭದ್ರತಾ ಪಡೆಗಳು ಮತ್ತು ನಕ್ಸಲರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಓರ್ವ ಮಹಿಳೆ ಸೇರಿದಂತೆ ಇಬ್ಬರು ಪ್ರಮುಖ ನಕ್ಸಲರು ಹತರಾಗಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಭುವನೇಶ್ವರ: ಒಡಿಶಾದ ಮಲ್ಕನ್ ಗಿರಿ ಜಿಲ್ಲೆಯ ಸ್ವಾಭಿಮಾನ್ ಪ್ರದೇಶದ ಸಿಂಗ್ರಾಮ್  ಗ್ರಾಮದಲ್ಲಿ ಇಂದು ಭದ್ರತಾ ಪಡೆಗಳು ಮತ್ತು ನಕ್ಸಲರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಓರ್ವ ಮಹಿಳೆ ಸೇರಿದಂತೆ ಇಬ್ಬರು ಪ್ರಮುಖ ನಕ್ಸಲರು ಹತರಾಗಿದ್ದಾರೆ.

ಗುಂಡಿನ ಚಕಮಕಿ ನಂತರ ಭದ್ರತಾ ಸಿಬ್ಬಂದಿ ಒಂದು ಇನ್ಸಾಫ್ ರೈಫಲ್ , ಒಂದು ಎಸ್ ಎಲ್ ಆರ್ , 20 ಸುತ್ತು ಮದ್ದು ಗುಂಡುಗಳು, ನಕ್ಸಲರ ಮೂರು ಚೀಲಗಳು ಮತ್ತಿತರ ಸ್ಫೋಟಕ ವಸ್ತುಗಳನ್ನು ಘಟನಾ ಸ್ಥಳದಲ್ಲಿ ವಶಪಡಿಸಿಕೊಳ್ಳಲಾಗಿದೆ ಎಂದು ಒಡಿಶಾ ಡಿಜಿಪಿ ಅಭಯ್ ತಿಳಿಸಿದ್ದಾರೆ.

ಭಾನುವಾರ ಮುಂಜಾನೆ 3.30 ರಿಂದ 4 ಗಂಟೆಯ ನಡುವೆ ಮಲ್ಕನ್‍ ಗಿರಿ ಜಿಲ್ಲೆಯ ಜೋಧಂಬೊ ನಿರ್ದಿಷ್ಟ ಮಾಹಿತಿಯನ್ನಾಧರಿಸಿ ವಿಶೇಷ ಕಾರ್ಯಾಚರಣೆ ತಂಡ (ಎಸ್‌ಒಜಿ) ಪೊಲೀಸ್ ಠಾಣೆಯ ಗಜಲ್‌ಮಾಮುಡಿ ಪಂಚಾಯತ್‌ನ ಸಿಂಗರಂ-ಟೆಂಟಾಪಲ್ಲಿ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿತ್ತು ಎಂದು ಡಿಜಿಪಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com