ಹೈದರಾಬಾದ್: ಭೀಕರ ರಸ್ತೆ ಅಪಘಾತ; ಟ್ರಕ್ ಕೆಳಗೆ ಸಿಲುಕಿ ಅಪ್ರಾಪ್ತ ಬೈಕ್ ಸವಾರ ಸಾವು!

ಅಪ್ರಾಪ್ತ ಬಾಲಕ (14) ತನ್ನ ಸ್ನೇಹಿತನೊಂದಿಗೆ ಬೈಕ್ ಚಾಲನೆ ಮಾಡುತ್ತಿದ್ದಾಗ ರಸ್ತೆ ಅಪಘಾತ ಉಂಟಾಗಿ ಟ್ರಕ್ ಕೆಳಗೆ ಸಿಲುಕಿ ಸಾವನ್ನಪ್ಪಿರುವ ಘಟನೆ ಹೈದರಾಬಾದ್ ನಲ್ಲಿ ವರದಿಯಾಗಿದೆ. 
ಹೈದರಾಬಾದ್: ಭೀಕರ ರಸ್ತೆ ಅಪಘಾತ; ಟ್ರಕ್ ಕೆಳಗೆ ಸಿಲುಕಿ ಅಪ್ರಾಪ್ತ ಬೈಕ್ ಸವಾರ
ಹೈದರಾಬಾದ್: ಭೀಕರ ರಸ್ತೆ ಅಪಘಾತ; ಟ್ರಕ್ ಕೆಳಗೆ ಸಿಲುಕಿ ಅಪ್ರಾಪ್ತ ಬೈಕ್ ಸವಾರ
Updated on: 

ಹೈದರಾಬಾದ್: ಅಪ್ರಾಪ್ತ ಬಾಲಕ (14) ತನ್ನ ಸ್ನೇಹಿತನೊಂದಿಗೆ ಬೈಕ್ ಚಾಲನೆ ಮಾಡುತ್ತಿದ್ದಾಗ ರಸ್ತೆ ಅಪಘಾತ ಉಂಟಾಗಿ ಟ್ರಕ್ ಕೆಳಗೆ ಸಿಲುಕಿ ಸಾವನ್ನಪ್ಪಿರುವ ಘಟನೆ ಹೈದರಾಬಾದ್ ನಲ್ಲಿ ವರದಿಯಾಗಿದೆ. 

ಸೈಬರಾಬಾದ್ ನ ಮೆಡ್ಚಲ್ ನ ಎನ್ ಹೆಚ್ 44 ನಲ್ಲಿ ಈ ಅಪಘಾತ ನಡೆದಿದ್ದು, ಉಪಹಾರ ತರುವುದಕ್ಕಾಗಿ ಇಬ್ಬರು ಯುವಕರು ಬೈಕ್ ನಲ್ಲಿ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ.

ಈ ಭೀಕರ ರಸ್ತೆ ಅಪಘಾತದ ದೃಶ್ಯಗಳು ಸರ್ಕಾರಿ ಐಟಿಐ ಬಳಿಯ ಸಿಸಿಟಿವಿ ಕ್ಯಾಮರಾಗಳಲ್ಲಿ ದಾಖಲಾಗಿದ್ದು, ಬೈಕ್ ಚಾಲನೆ ಮಾಡುತ್ತಿದ್ದ ದುಂಡಿಗಲ್ಲ ನರಸಿಂಹ (14) ಬೃಹತ್ ಕಂಟೈನರ್ ಟ್ರಕ್ ನ್ನು ಹಿಂದಿಕ್ಕಲು ಹೋಗಿ, ಬೈಕ್ ನ ನಿಯಂತ್ರಣ ಕಳೆದುಕೊಂಡು ಕೆಳಗೆ ಬಿದ್ದು, ಕಂಟೈನರ್ ಕೆಳಗೆ ಸಿಲುಕಿಕೊಂಡಿದ್ದಾನೆ.  ಆತನ ಸ್ನೇಹಿತ ಬಾಲ (15) ತೀವ್ರವಾಗಿ ಗಾಯಗೊಂಡಿದ್ದಾನೆ

ಮೃತ ಯುವಕರು ಆಥ್ವೆಲಿ ಗ್ರಾಮದವರಾಗಿದ್ದು, ಬೈಕ್ ಚಾಲಕ ಹೆಲ್ಮೆಟ್ ನ್ನು ಧರಿಸಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಐಪಿಸಿ ಸೆಕ್ಷನ್ 304 ರ ಅಡಿಯಲ್ಲಿ ಬಾಲಕರಿಗೆ ಬೈಕ್ ನೀಡಿದ್ದ ಜಿ ಶ್ರವಣ್ ಕುಮಾರ್ ವಿರುದ್ಧವೂ ದೂರು ದಾಖಲಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com