ಸಾಂದರ್ಭಿಕ ಚಿತ್ರ
ದೇಶ
ಯುಪಿ ಹಾರರ್: ಸಂಬಂಧಿಯ ಆರು ವರ್ಷದ ಬಾಲಕನ ಅಪಹರಿಸಿ ಕೊಲೆ; ಅಪ್ರಾಪ್ತನ ಬಂಧನ
ಸಂಬಂಧಿಕರ ಆರು ವರ್ಷದ ಬಾಲಕನನ್ನು ಅಪಹರಿಸಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತ ಉತ್ತರ ಪ್ರದೇಶ ಪೊಲೀಸರು 14 ವರ್ಷದ ಅಪ್ರಾಪ್ತನನ್ನು ಬಂಧಿಸಿದ್ದಾರೆ.
ಲಕ್ನೋ: ಸಂಬಂಧಿಕರ ಆರು ವರ್ಷದ ಬಾಲಕನನ್ನು ಅಪಹರಿಸಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತ ಉತ್ತರ ಪ್ರದೇಶ ಪೊಲೀಸರು 14 ವರ್ಷದ ಅಪ್ರಾಪ್ತನನ್ನು ಬಂಧಿಸಿದ್ದಾರೆ.
ತನ್ನ ಅಪರಾಧವನ್ನು ಒಪ್ಪಿಕೊಂಡ ಆರೋಪಿ ಮೈನರ್ ತಾನು ಆರು ವರ್ಷದ ಮಗುವನ್ನು ಅಪಹರಿಸಿ ನಂತರ ಕೊಂದುಹಾಕಿದ್ದಾಗಿ ಒಪ್ಪಿಕೊಂಡಿದ್ದಲ್ಲದೆ, ಸಂತ್ರಸ್ತನ ಕುಟುಂಬದಿಂದ 50 ಲಕ್ಷ ರೂ.ಗಳ ಸುಲಿಗೆ ಕೋರಿ ಪತ್ರ ಬರೆದಿರುವುದಾಗಿ ಒಪ್ಪಿಕೊಂಡಿದ್ದಾನೆ.
ಡಿಸೆಂಬರ್ 9 ರಂದು ದೀಪಕ್ ಗುಪ್ತ ಎಂಬ ಪುತ್ರನನ್ನು ಮಹಾರಾಜಗಂಜ್ ಜಿಲ್ಲೆಯ ಗ್ರಾಮದಿಂದ ಕಿಡ್ನಾಪ್ ಮಾಡಿ 50 ಲಕ್ಷ ರುಪಾಯಿ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದನು. ನಂತರ ಕಾರ್ಯಾಚರಣೆ ನಡೆಸಿದ ಪೊಲೀಸರು ಅಪ್ರಾಪ್ತನನ್ನು ಬಂಧಿಸಿದ್ದಾರೆ.
ಸಂತ್ರಸ್ತನ ಪೋಷಕರು ಆತನನ್ನು ‘ಕಳ್ಳ’ ಎಂದು ಕರೆಯುತ್ತಾರೆ ಮತ್ತು ಆತನ ಬಗ್ಗೆ ದೂರು ಹೇಳಿದಾಗಲೆಲ್ಲಾ ಅವರು ನನ್ನನ್ನು ಬೈಯುತ್ತಾರೆ ಎಂದು ಅಪ್ರಾಪ್ತ ವಿಚಾರಣೆ ಸಂದರ್ಭದಲ್ಲಿ ತಪ್ಪೊಪ್ಪಿಕೊಂಡಿರುವುದಾಗಿ ತಿಳಿಸಿದ್ದಾನೆ ಎಂದು ಮೂಲಗಳು ತಿಳಿಸಿವೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ