ಕೋವಿಡ್ ಸೋಂಕಿನಿಂದ ಗುಣಮುಖರಾದವರಲ್ಲಿ ಡೆಡ್ಲಿ ಮತ್ತು ಅಪರೂಪದ 'ಫಂಗಲ್ ಇನ್ ಫೆಕ್ಷನ್' ಪತ್ತೆ!

ಮಾರಕ ಕೊರೋನಾ ವೈರಸ್ ಸೋಂಕು ಇನ್ನಿಲ್ಲದಂತೆ ಜನರನ್ನು ಕಾಡುತ್ತಿದ್ದು, ಸೋಂಕಿನಿಂದ ಮುಕ್ತರಾದರೂ ಆ ಬಳಿಕ ಹಲವು ರೀತಿಯ ಆರೋಗ್ಯ ಸಮಸ್ಯೆಗಳು ಸೋಂಕಿತರನ್ನು ಬಾಧಿಸುತ್ತಿದೆ. ಇದಕ್ಕೆ ಹೊಸ ಸೇರ್ಪಡೆ 'ಡೆಡ್ಲಿ ಫಂಗಲ್ ಇನ್ ಫೆಕ್ಷನ್'...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಮಾರಕ ಕೊರೋನಾ ವೈರಸ್ ಸೋಂಕು ಇನ್ನಿಲ್ಲದಂತೆ ಜನರನ್ನು ಕಾಡುತ್ತಿದ್ದು, ಸೋಂಕಿನಿಂದ ಮುಕ್ತರಾದರೂ ಆ ಬಳಿಕ ಹಲವು ರೀತಿಯ ಆರೋಗ್ಯ ಸಮಸ್ಯೆಗಳು ಸೋಂಕಿತರನ್ನು ಬಾಧಿಸುತ್ತಿದೆ. ಇದಕ್ಕೆ ಹೊಸ ಸೇರ್ಪಡೆ 'ಡೆಡ್ಲಿ ಫಂಗಲ್ ಇನ್ ಫೆಕ್ಷನ್'...

ಹೌದು.. ಈ ಹಿಂದೆ ಕೊರೋನಾ ಸೋಂಕಿನಿಂದ ಗುಣಮುಖರಾದವರಲ್ಲಿ ಶ್ವಾಸಕೋಶದ ಸೋಂಕು, ಸಂಧಿವಾತ, ಶಾಶ್ವತ ಕಣ್ಣಿನ ಸಮಸ್ಯೆಗಳಂತಹ ಸಮಸ್ಯೆಗಳು ಕಂಡುಬಂದಿದ್ದವು. ಇದೀಗ ಈ ಪಟ್ಟಿಗೆ ಹೊಸ ಸೇರ್ಪಡೆ ಎಂದರೆ ಅದು 'ಮ್ಯೂಕೋರ್ಮೈಕೋಸಿಸ್'.. ಮ್ಯೂಕೋರ್ಮೈಕೋಸಿಸ್ ಡೆಡ್ಲಿ ಫಂಗಲ್ ಇನ್  ಫೆಕ್ಷನ್  (ಹುಳುಕಡ್ಡಿ) ಆಗಿದ್ದು.. ಕೊರೋನಾ ಸೋಂಕಿನಿಂದ ಗುಣಮುಖರಾದ ಹಲವು ಸೋಂಕಿತರಲ್ಲಿ ಈ ರೀತಿ ಫಂಗಲ್ ಇನ್ ಫೆಕ್ಷನ್ ಕಾಣಿಸಿಕೊಂಡಿದ್ದು, ಈ ಡೆಡ್ಲಿ ಫಂಗಲ್ ಇನ್ ಫೆಂಕ್ಷನ್ ತಲೆಗೆ ಏರಿದರೆ ಆಗ ಶೇ.50ರಷ್ಟು ಸಾವಿನ ಸಾಧ್ಯತೆ ಇರುತ್ತದೆ ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ. 

ಕಳೆದ 15ದಿನಗಳಲ್ಲಿ ಕೋವಿಡ್ ನಿಂದ ಗುಣಮುಖರಾದ ರೋಗಿಗಳಲ್ಲಿ ಇಂತಹ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ ಎಂದು ದೆಹಲಿ ಗಂಗಾರಾಮ್ ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ. ಅಂತೆಯೇ ಇದೇ ಆಸ್ಪತ್ರೆ ಇಎನ್ ಟಿ ಮತ್ತು ಕಣ್ಣಿನ ವಿಭಾಗದ ವೈದ್ಯರು ಅಭಿಪ್ರಾಯಪಟ್ಟಿರುವಂತೆ ಕೋವಿಡ್ ಸೋಂಕಿನಿಂದ ಮುಕ್ತರಾಗಿದ್ದ  ರೋಗಿಗಳ ಪೈಕಿ 10 ರೋಗಿಗಳಲ್ಲಿ ಶಾಶ್ವತವಾಗಿ ಶೇ.50ರಷ್ಟು ಕಣ್ಣಿನ ದೋಷ ಕಂಡುಬಂದಿದೆ. ಈ ಪೈಕಿ ಐದು ಮಂದಿ ಗಂಭೀರ ಚಿಕಿತ್ಸೆಯ ಅವಶ್ಯಕತೆ ಇದೆ.  ಗಂಗಾರಾಮ್ ಆಸ್ಪತ್ರೆಯ ವೈದ್ಯರು ಹೇಳಿರುವಂತೆ ಕಳೆದ 15 ದಿನಗಳಲ್ಲಿ ಸಾವನ್ನಪ್ಪಿದ ಕೋವಿಡ್ ರೋಗಿಗಳಲ್ಲೂ ಈ ಡೆಡ್ಲಿ ಮ್ಯೂಕೋರ್ಮೈಕೋಸಿಸ್  ಫಂಗಲ್ ಇನ್ ಫೆಕ್ಷನ್' ಇತ್ತು ಎನ್ನಲಾಗಿದೆ.

ತಜ್ಞರ ಪ್ರಕಾರ, ಕೋವಿಡ್ -19 ರೋಗಿಗಳು ಈ ಮ್ಯೂಕೋರ್ಮೈಕೋಸಿಸ್ ಸಮಸ್ಯೆಗೆ ಹೆಚ್ಚು ಒಳಗಾಗುತ್ತಾರೆ, ಇದು ಗಾಳಿಯಲ್ಲಿದೆ ಎಂದು ಹೇಳಲಾಗುತ್ತಿದೆಯಾದರೂ, ಇದು ಸರ್ವವ್ಯಾಪಿ ಶಿಲೀಂಧ್ರವಾಗಿದೆ. ಸಸ್ಯ, ಪ್ರಾಣಿ ಮತ್ತು ಗಾಳಿಯಲ್ಲಿಯೂ ಕೂಡ ಇದು ತನ್ನ ಅಸ್ತಿತ್ವ ಉಳಿಸಿಕೊಳ್ಳಬಲ್ಲದು. ಆದರೆ ಇದು  ಕೋವಿಡ್‌ನಿಂದ ಚೇತರಿಸಿಕೊಂಡ ರೋಗಿಗಳ ಮೇಲೆ ದಾಳಿ ನಡೆಸುತ್ತಿದೆ, ಏಕೆಂದರೆ ಅವರಿಗೆ ಸ್ಟೀರಾಯ್ಡ್‌ಗಳನ್ನು ನೀಡಲಾಗುತ್ತಿದೆ. ಇದಲ್ಲದೆ ಸೋಂಕಿನಿಂದ ಗುಣಮುಖರಾದವರಲ್ಲಿ ಇತರೆ ಸಹ-ಅಸ್ವಸ್ಥತೆಗಳಿರುವುದರಿಂದ ಇದು ಇನ್ನಷ್ಟು ಕೆಟ್ಟ ಪರಿಣಾಮ ಬೀರುತ್ತದೆ ಎಂದು ತಜ್ಞರು ಹೇಳಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಸರ್ ಗಂಗಾ ರಾಮ್ ಆಸ್ಪತ್ರೆಯ ಹಿರಿಯ ಇಎನ್ಟಿ ಶಸ್ತ್ರಚಿಕಿತ್ಸಕ ಡಾ.ಮನೀಶ್ ಮುಂಜಾಲ್ ಅವರು, 'ಈ ಶಿಲೀಂಧ್ರವು ದೇಹಕ್ಕೆ ಬರುತ್ತದ್ದಂತೆಯೇ ಅದು ಬರುವ ಭಾಗವನ್ನು ನಾಶಪಡಿಸುತ್ತದೆ. ಸೈಟೋಕಿನ್ ಪರಿಣಾಮ ಕಡಿಮೆ ಮಾಡಲು ಪೋಸ್ಟ್ ಕೋವಿಡ್ ರೋಗಿಗಳಿಗೆ ಹೆಚ್ಚಿನ  ಪ್ರಮಾಣದ ಸ್ಟೀರಾಯ್ಡ್ ಗಳನ್ನು ನೀಡಲಾಗುತ್ತಿದೆ, ಇದು ಮಾರಣಾಂತಿಕ ಮ್ಯೂಕೋರ್ಮೈಕೋಸಿಸ್ನಂತಹ ಅವಕಾಶವಾದಿ ಶಿಲೀಂಧ್ರಗಳ ಸೋಂಕನ್ನು ದೇಹಕ್ಕೆ ಪ್ರವೇಶಿಸಲು ಮತ್ತು ಮೂಗಿನ ಮೂಲಕ ಕಣ್ಣುಗಳ ಮೂಲಕ ಮೆದುಳಿಗೆ ಪ್ರಯಾಣಿಸಲು ಅನುವು ಮಾಡಿಕೊಡುತ್ತದೆ. ಒಂದು ವೇಳೆ ಈ ಡೆಡ್ಲಿ ಶಿಲೀಂದ್ರವನ್ನು  ಆದಷ್ಟು ಬೇಗ ಪತ್ತೆ ಮಾಡದಿದ್ದಲ್ಲಿ ಇದು ಸಾವಿಗೆ ಕಾರಣವಾಗಬಹುದು. ಈ ಪ್ರಮಾಣ ಶೇ.50ರಷ್ಟಿದೆ. ಅಲ್ಲದೆ, ಇದು ಕಣ್ಣುಗಳ ನಷ್ಟ, ದವಡೆಯ ಮೂಳೆಗಳು ಮತ್ತು ಕಾಸ್ಮೆಟಿಕ್ ವಿರೂಪಗೊಳಿಸುವಿಕೆಯಂತಹ ವೈದ್ಯಕೀಯ ಕಾಯಿಲೆಗಳಿಗೂ ಇದು  ಕಾರಣವಾಗಬಹುದು ಎಂದು  ಹೇಳಿದ್ದಾರೆ.

ಸಾಮಾನ್ಯವಾಗಿ ಈ ರೋಗಿಗಳಲ್ಲಿ ಹೆಚ್ಚಿನವರು ಉಸಿರಾಟದ ತೊಂದರೆ, ಕೊಂಚ ಪರಿಶ್ರಮ ಪಟ್ಟರೂ ಸುಸ್ತಾಗುವಿಕೆ, ದೌರ್ಬಲ್ಯ ಮತ್ತು ಆಯಾಸದ ಸಮಸ್ಯೆ ಎದಿರಿಸುತ್ತಿರುತ್ತಾರೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com