ದೀದಿಗೆ ಮತ್ತೆ ಸಂಕಷ್ಟ: 'ನಂದಿಗ್ರಾಮ ಹೀರೋ' ಸುವೆಂದು ಶಾಸಕ ಸ್ಥಾನಕ್ಕೆ ರಾಜಿನಾಮೆ, ಬಿಜೆಪಿ ಸೇರ್ಪಡೆ ಸಾಧ್ಯತೆ!

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪರಮಾಪ್ತ ಮತ್ತು ನಂದಿಗ್ರಾಮ್ ಆಂದೋಲನದ ವೀರರಲ್ಲಿ ಒಬ್ಬರಾದ ಸುವೆಂದು ಅಧಿಕಾರಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಮಮತಾ-ಸುವೆಂದು
ಮಮತಾ-ಸುವೆಂದು
Updated on

ಕೋಲ್ಕತ್ತಾ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪರಮಾಪ್ತ ಮತ್ತು ನಂದಿಗ್ರಾಮ್ ಆಂದೋಲನದ ವೀರರಲ್ಲಿ ಒಬ್ಬರಾದ ಸುವೆಂದು ಅಧಿಕಾರಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಮುಂಬರುವ ವಿಧಾನಸಭಾ ಚುನಾವಣೆಗೂ ಮುನ್ನ ಸುವೆಂದು ರಾಜೀನಾಮೆ ಬಂಗಾಳದ ಪ್ರಸ್ತುತ ರಾಜಕೀಯ ಸನ್ನಿವೇಶದಲ್ಲಿ ಸಂಚಲನ ಮೂಡಿಸಿದೆ. ನಂದಿಗ್ರಾಮ ಶಾಸಕ ಕಳೆದ ತಿಂಗಳು ರಾಜ್ಯ ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಿದ್ದರು.

ಸುವೆಂದು ನಿರ್ಗಮನದಿಂದ ತೃಣಮೂಲ ಕಾಂಗ್ರೆಸ್ ನ ಸಂಕಷ್ಟಗಳು ಕೊನೆಯಾಗುತ್ತದೆ ಎಂದು ಕಾಣುತ್ತಿಲ್ಲ. ಆಡಳಿತ ಪಕ್ಷದಲ್ಲಿ ಅಸಮಾಧಾನಗೊಂಡ ಹಲವಾರು ಕಾರ್ಯಕರ್ತರು, ಪಕ್ಷದ ಮುಖಂಡರ ಒಂದು ಭಾಗ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ ರಾಜಕೀಯ ಚಾಣಾಕ್ಷ ಪ್ರಶಾಂತ್ ಕಿಶೋರ್ 'ರಾಜಕೀಯ ತರಗತಿಗಳನ್ನು' ತೆಗೆದುಕೊಳ್ಳುವುದರ ಬಗ್ಗೆ ಸಹ ಅಸಮಾಧಾನ ಹೊಂದಿದ್ದಾರೆ.

ವಿಧಾನಸಭಾ ಚುನಾವಣೆಗೆ ಕೆಲ ತಿಂಗಳುಗಳು ಬಾರಿ ಇರುವಾಗಲೇ ತೃಣಮೂಲ ಕಾಂಗ್ರೆಸ್ ನ ಹಲವು ಶಾಸಕರು, ಸಚಿವರು ಪಕ್ಷ ಬಿಡುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗುತ್ತಿದೆ. 

ಇನ್ನು ವಿಧಾನಸಭೆ ಚುನಾವಣೆಯಲ್ಲಿ 294 ಸ್ಥಾನಗಳಲ್ಲಿ 200 ಸ್ಥಾನಗಳನ್ನು ಗೆಲ್ಲುವ ಆಕಾಂಕ್ಷೆಯೊಂದಿಗೆ ರಣಕಣಕ್ಕಿಳಿದಿರುವ ಗೃಹ ಸಚಿವ ಅಮಿತ್ ಶಾ ಪಶ್ಚಿಮಬಂಗಾಳದ ಮಿಡ್ನಾಪುರ್ ಜಿಲ್ಲೆಯ ಮೇದಿನಿಪುರದಲ್ಲಿ ರ್ಯಾಲಿ ನಡೆಸಲಿದ್ದು ಈ ವೇಳೆ ಸುವೆಂದು ಬಿಜೆಪಿ ಸೇರ್ಪಡೆಯಾಗಲಿದ್ದಾರೆಂಬ ಸುದ್ದಿ ಹರಿಡುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com