ಉಪೇಂದ್ರ ಕುಶ್ವಾಹಾ ವಿರುದ್ಧ ಟ್ವೀಟ್: ಕಂಗನಾ ವಿರುದ್ಧ ಪಾಟ್ನಾ ಕೋರ್ಟ್ ನಲ್ಲಿ ಕೇಸ್ ದಾಖಲು

ಮಾಜಿ ಕೇಂದ್ರ ಸಚಿವ ಉಪೇಂದ್ರ ಕುಶ್ವಾಹಾ ಅವರನ್ನು ಟೀಕಿಸಿ ಟ್ವೀಟ್ ಮಾಡಿದ್ದ ಬಾಲಿವುಡ್ ನಟಿ ಕಂಗನಾ ರನೌತ್ ಅವರ ವಿರುದ್ಧ ಶುಕ್ರವಾರ ಪಾಟ್ನಾ ನ್ಯಾಯಾಲಯದಲ್ಲಿ ಕೇಸ್ ದಾಖಲಿಸಲಾಗಿದೆ.
ಕಂಗನಾ ರನೌತ್
ಕಂಗನಾ ರನೌತ್
Updated on: 

ಪಾಟ್ನಾ: ಮಾಜಿ ಕೇಂದ್ರ ಸಚಿವ ಉಪೇಂದ್ರ ಕುಶ್ವಾಹಾ ಅವರನ್ನು ಟೀಕಿಸಿ ಟ್ವೀಟ್ ಮಾಡಿದ್ದ ಬಾಲಿವುಡ್ ನಟಿ ಕಂಗನಾ ರನೌತ್ ಅವರ ವಿರುದ್ಧ ಶುಕ್ರವಾರ ಪಾಟ್ನಾ ನ್ಯಾಯಾಲಯದಲ್ಲಿ ಕೇಸ್ ದಾಖಲಿಸಲಾಗಿದೆ.

ಕುಶ್ವಾಹಾ ನೇತೃತ್ವದ ರಾಷ್ಟ್ರೀಯ ಲೋಕ ಸಮತಾ ಪಕ್ಷದ ಕಾನೂನು ಸೆಲ್ ಮುಖ್ಯಸ್ಥ ಶ್ಯಾಮ್ ಬಿಹಾರಿ ಸಿಂಗ್ ಅವರು ರನೌತ್ ವಿರುದ್ಧ ಸಿಜೆಎಂ ಕೋರ್ಟ್ ನಲ್ಲಿ ಕೇಸ್ ದಾಖಲಿಸಿದ್ದಾರೆ.

ಡಿಸೆಂಬರ್ 3 ರಂದು ನಟಿ ಶೇರ್ ಮಾಡಿರುವ ಟ್ವೀಟ್‌ಗೆ ಸಂಬಂಧಿಸಿದಂತೆ ಕೇಸ್ ದಾಖಲಿಸಲಾಗಿದ್ದು, ಕಂಗನಾ ಅವರು ಇತ್ತೀಚೆಗೆ ಬಿಹಾರದಲ್ಲಿ ನಡೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ತೆಗೆದ ಫೋಟೋ ಶೇರ್ ಮಾಡಿದ್ದು, ಅದಕ್ಕೆ "ತುಕ್ಡೆ ತುಕ್ಡೆ ಗ್ಯಾಂಗ್‌ನಲ್ಲಿ ಹೊಸ ಸ್ಟಾರ್" ಎಂಬ ಶೀರ್ಷಿಕೆ ಬರೆಯಲಾಗಿತ್ತು. ಅಲ್ಲದೆ ಚಿತ್ರದಲ್ಲಿದಲ್ಲಿದ್ದ ನಾಯಕರ ಮೇಲೆ "ಜಿಹಾದಿಗಳು", "ಅರ್ಬನ್ ನಕ್ಸಲ್‌ಗಳು" ಮತ್ತು "ಲುಟಿಯನ್ ಲಿಬರಲ್ಸ್" ಎಂದು ಟೀಕಿಸಲಾಗಿತ್ತು.

ಈ ಪೋಸ್ಟ್ ಅನ್ನು ಬಿಹಾರ ಪೊಲೀಸರು, ಮುಂಬೈ ಪೊಲೀಸರು ಮತ್ತು ಮಹಾರಾಷ್ಟ್ರ ಡಿಜಿಪಿ ಗಮನಿಸಿದ್ದಾರೆ. ಆದರೂ ಅವರು ನಟಿಯ ವಿರುದ್ಧ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಶ್ಯಾಮ್ ಬಿಹಾರಿ ಸಿಂಗ್ ಆರೋಪಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com