7,926 ಕೋಟಿ ರೂ. ಬ್ಯಾಂಕ್ ವಂಚನೆ: ಟಿಡಿಪಿ ಮಾಜಿ ಸಂಸದ ರಾಯಪತಿ ಸಾಂಬಶಿವ ರಾವ್ ಸಿಬಿಐ ಬಲೆಗೆ

ಹೈದರಾಬಾದ್ ಮೂಲದ ಟ್ರಾನ್ಸ್ಟ್ರಾಯ್ (ಇಂಡಿಯಾ) ಲಿಮಿಟೆಡ್ ಪ್ರೊಮೋಟರ್ ಹಾಗೂ ಟಿಡಿಪಿಯ ಮಾಜಿ ಸಂಸದ ರಾಯಪತಿ ಸಾಂಬಶಿವ ರಾವ್ ಅವರನ್ನು ಸಿಬಿಐ 7,926.01 ಕೋಟಿ ರೂಪಾಯಿ ಬ್ಯಾಂಕ್ ವಂಚನೆ ಪ್ರಕರಣದಲ್ಲಿ ಹೆಸರಿಸಿದೆ.
ಟಿಡಿಪಿಯ ಮಾಜಿ ಸಂಸದ ರಾಯಪತಿ ಸಾಂಬಶಿವ ರಾವ್
ಟಿಡಿಪಿಯ ಮಾಜಿ ಸಂಸದ ರಾಯಪತಿ ಸಾಂಬಶಿವ ರಾವ್
Updated on

ಹೈದರಾಬಾದ್: ಹೈದರಾಬಾದ್ ಮೂಲದ ಟ್ರಾನ್ಸ್ಟ್ರಾಯ್ (ಇಂಡಿಯಾ) ಲಿಮಿಟೆಡ್ ಪ್ರೊಮೋಟರ್ ಹಾಗೂ ಟಿಡಿಪಿಯ ಮಾಜಿ ಸಂಸದ ರಾಯಪತಿ ಸಾಂಬಶಿವ ರಾವ್ ಅವರನ್ನು ಸಿಬಿಐ 7,926.01 ಕೋಟಿ ರೂಪಾಯಿ ಬ್ಯಾಂಕ್ ವಂಚನೆ ಪ್ರಕರಣದಲ್ಲಿ ಹೆಸರಿಸಿದೆ.

ಆಂಧ್ರಪ್ರದೇಶದಲ್ಲಿ ಇಂದಿರಾ ಸಾಗರ್ ಪೊಲಾವರಮ್ ಪ್ರಾಜೆಕ್ಟ್ ಸೇರಿದಂತೆ ಹಲವು ಮೂಲಸೌಕರ್ಯ ಹಾಗೂ ನೀರಾವರಿ ಯೋಜನೆಗಳಲ್ಲಿ ಟ್ರಾನ್ಸ್ಟ್ರಾಯ್ (ಇಂಡಿಯಾ) ಲಿಮಿಟೆಡ್ ತೊಡಗಿಸಿಕೊಂಡಿತ್ತು.

ಹೈದರಾಬಾದ್ ಮೂಲದ ಖಾಸಗಿ ಸಂಸ್ಥೆ ಮತ್ತು ಅದರ ನಿರ್ದೇಶಕರು ಅನೇಕ ಬ್ಯಾಂಕಿಂಗ್ ವ್ಯವಸ್ಥೆಗಳಲ್ಲಿ ಸಾಲ ಸೌಲಭ್ಯಗಳನ್ನು ಪಡೆದುಕೊಂಡಿದ್ದು ಅದನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಸಿಬಿಐ ಸಲ್ಲಿಸಿರುವ ಎಫ್ಐಆರ್ ನಲ್ಲಿ ಆರೋಪಿಸಲಾಗಿದೆ.

ಸಂಸ್ಥೆಯ ಸಿಎಂಡಿ ಚೆರುಕುರಿ ಶ್ರೀಧರ್ ಹಾಗೂ ಹೆಚ್ಚುವರಿ ನಿರ್ದೇಶಕರಾದ ರಾಯಪತಿ ಸಾಂಬಶಿವ ರಾವ್ ಹಾಗೂ ಅಕ್ಕಿನೇನಿ ಸತೀಶ್ ಅವರುಗಳನ್ನು ಪ್ರಮುಖ ಆರೋಪಿಗಳೆಂದು ಸಿಬಿಐ ಗುರುತಿಸಿದ್ದು ಎರಡು ವಂಚನೆ ಪ್ರಕರಣಗಳಲ್ಲಿ ಆರೋಪಿಗಳ ಹೆಸರನ್ನು ಸೇರಿಸಲಾಗಿದೆ.

ಹೈದರಾಬಾದ್ ಹಾಗೂ ಗುಂಟೂರಿನಲ್ಲಿರುವ ಸಂಸ್ಥೆ ಹಾಗೂ ಅದರ ನಿರ್ದೇಶಕರ ಕಚೇರಿ, ಮನೆಗಳಲ್ಲಿ ನಡೆದ ಶೋಧಕಾರ್ಯಗಳಲ್ಲಿ ದೋಷಾರೋಪಣೆಗೆ ಪೂರಕವಾದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಯಿತು ಎಂದು ಸಿಬಿಐ ತಿಳಿಸಿದೆ.

ಸಂಸ್ಥೆಗೆ ಜಾರಿ ನಿರ್ದೇಶನಾಲಯದ ತೂಗುಗತ್ತಿಯೂ ಎದುರಾಗಿದ್ದು, ವಿದೇಶಿ ವಿನಿಮಯ ವಹಿವಾಟಿನಲ್ಲೂ ಅಕ್ರಮ ಕಂಡುಬಂದಿರುವ ಪರಿಣಾಮ ಎಫ್ಇಎಂಎ ಅಡಿಯಲ್ಲೂ ಪ್ರಕರಣ ದಾಖಲಾಗಿದೆ. ಎಫ್ಇಎಂಎ ನಿಯಮಗಳನ್ನು ಉಲ್ಲಂಘಿಸಿ ಸಹ ಸಂಸ್ಥೆಯೊಂದಿಗೆ ಸೇರಿ ಸಿಂಗಪೂರ್ ಹಾಗೂ ರಷ್ಯಾಗಳಿಗೆ ಅಕ್ರಮವಾಗಿ ಹಣ ವರ್ಗಾವಣೆ ಮಾಡಲಾಗಿರುವುದೂ ಇ.ಡಿ ತನಿಖೆ ವೇಳೆ ಪತ್ತೆಯಾಗಿದೆ.

ಎರಡನೆಯ ವಂಚನೆ ಪ್ರಕರಣದಲ್ಲಿ 313 ಕೋಟಿ ರೂಪಾಯಿಗಳ ವಂಚನೆಗೆ ಸಂಬಂಧಿಸಿದಂತೆ ಚೆನ್ನೈ ಮೂಲದ ಖಾಸಗಿ ಸಬ್ಸಿಡಿಯರಿ ಸಂಸ್ಥೆಯ ವಿರುದ್ಧ ಪ್ರಕರಣ ದಾಖಲಾಗಿದ್ದು ಅದರ ಅಧ್ಯಕ್ಷರು, ನಿರ್ದೇಶಕರ ವಿರುದ್ಧವೂ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com