ಜಗತ್ತು ಮತ್ತೊಂದು ಕೈಗಾರಿಕಾ ಕ್ರಾಂತಿಯತ್ತ ಮುಖಮಾಡುತ್ತಿದೆ, ನಮ್ಮ ರಾಷ್ಟ್ರ ನಿರ್ಮಾಣದ ಗುರಿಗಳನ್ನು ಸಾಧಿಸಲು ಕಾರ್ಯಪ್ರವೃತ್ತರಾಗಬೇಕು: ಪ್ರಧಾನಿ ಮೋದಿ 

ನಮ್ಮ ಮುಂದೆ ಇರುವ ಸವಾಲು ಸ್ವಾವಲಂಬಿಗಳಾಗುವುದು ಮಾತ್ರವಲ್ಲ, ಎಷ್ಟು ಬೇಗನೆ ನಮ್ಮ ಗುರಿಯನ್ನು ತಲುಪುವುದು ಎಂಬುದು ಸಹ ಅಷ್ಟೇ ಮುಖ್ಯವಾಗುತ್ತದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ನಮ್ಮ ಮುಂದೆ ಇರುವ ಸವಾಲು ಸ್ವಾವಲಂಬಿಗಳಾಗುವುದು ಮಾತ್ರವಲ್ಲ, ಎಷ್ಟು ಬೇಗನೆ ನಮ್ಮ ಗುರಿಯನ್ನು ತಲುಪುವುದು ಎಂಬುದು ಸಹ ಅಷ್ಟೇ ಮುಖ್ಯವಾಗುತ್ತದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ಅಸ್ಸೊಚಮ್ ಫೌಂಡೇಶನ್ ಸಪ್ತಾಹ 2020ನ್ನು ಉದ್ದೇಶಿಸಿ ವರ್ಚುವಲ್ ಕಾನ್ಫರೆನ್ಸ್ ಮೂಲಕ ಮಾತನಾಡಿದ ಅವರು, ಮುಂಬರುವ ವರ್ಷಗಳಲ್ಲಿ, ಆತ್ಮನಿರ್ಭರ ಭಾರತ್‌ಗಾಗಿ, ನೀವು ಎಲ್ಲರೂ ಒಟ್ಟುಗೂಡಿಸಬಹುದಾದ ಎಲ್ಲ ಶಕ್ತಿಯನ್ನು ಬಳಸಬೇಕು. ಜಗತ್ತು ಮತ್ತೊಂದು ಕೈಗಾರಿಕಾ ಕ್ರಾಂತಿಯತ್ತ ಹೆಜ್ಜೆಯಿಡುತ್ತಿದೆ. ಹೀಗಾಗಿ ಇಂದಿನಿಂದಲೇ ನಾವು ರಾಷ್ಟ್ರನಿರ್ಮಾಣದ ಗುರಿಗಳನ್ನು ಸಾಧಿಸುವತ್ತ ಯೋಜನೆಗಳನ್ನು ಹಾಕಿಕೊಂಡು ಕೆಲಸ ಮಾಡಬೇಕು ಎಂದು ಹೇಳಿದರು.

ಜಗತ್ತಿನ ಬೇರೆ ರಾಷ್ಟ್ರಗಳಿಗೆ ಭಾರತದ ಆರ್ಥಿಕತೆ ಮೇಲೆ ವಿಶ್ವಾಸ ಬೆಳೆದಿದೆ. ಕೊರೋನಾ ವೈರಸ್ ನ ಕಷ್ಟದ ಸಮಯದಲ್ಲಿ ಜಗತ್ತು ಆರ್ಥಿಕ ಕುಸಿತ ಸೇರಿದಂತೆ ಹಲವು ಕಷ್ಟಗಳನ್ನು ಎದುರಿಸುತ್ತಿದ್ದಾಗ ಹೂಡಿಕೆಗಳ ಸವಾಲನ್ನು ಎದುರಿಸುತ್ತಿರುವಾಗ ಭಾರತಕ್ಕೆ ದಾಖಲೆಯ ಪ್ರಮಾಣದಲ್ಲಿ ವಿದೇಶಿ ನೇರ ಹೂಡಿಕೆ ಬಂದಿದೆ. ಈ ಆತ್ಮವಿಶ್ವಾಸವನ್ನು ಉಳಿಸಿಕೊಳ್ಳಲು ನಮ್ಮ ದೇಶೀಯ ಉತ್ಪನ್ನಗಳನ್ನು ಹೆಚ್ಚಿಸಬೇಕು ಎಂದು ಪ್ರಧಾನಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com