ನವದೆಹಲಿ: ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರೊಂದಿಗೆ ಸಭೆ ನಡೆಸುವುದಕ್ಕೆ ನಮಗೆ ಆಹ್ವಾನ ಬಂದಿಲ್ಲ ಎಂದು ಭಾರತೀಯ ಕಿಸಾನ್ ಯೂನಿಯನ್ ಹೇಳಿದೆ.
ಬಿಕೆಯು ವಕ್ತಾರರಾದ ರಾಕೇಶ್ ಟಿಕೈಟ್ ಈ ಬಗ್ಗೆ ಮಾತನಾಡಿದ್ದು, ನ.26 ರಿಂದ ಪ್ರತಿಭಟನೆ ನಡೆಸುತ್ತಿರುವ ರೈತರು ಕೇಂದ್ರ ಸರ್ಕಾರ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವವರೆಗೂ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಹೇಳಿದ್ದಾರೆ.
ನಮಗೆ ಸಭೆಯಲ್ಲಿ ಭಾಗಿಯಾಗುವಂತೆ ಆಹ್ವಾನ ಕೃಷಿ ಸಚಿವರಿಂದ ಬಂದಿಲ್ಲ. ಸಮಸ್ಯೆಗಳನ್ನು ಪರಿಹರಿಸುವುದಕ್ಕೆ ಇನ್ನೂ ಒಂದು ತಿಂಗಳು ಬೇಕಾಗುತ್ತದೆ, ಸರ್ಕಾರ ನಮ್ಮ ಬಳಿ ಬರಲಿದೆ ಎಂದು ಟಿಕೈಟ್ ಹೇಳಿದ್ದಾರೆ.
ನಾವು ಯಾರಿಗೂ ಅನಾನುಕೂಲ ಉಂಟುಮಾಡುತ್ತಿಲ್ಲ. ನಾವು ಯಾವುದೇ ರಸ್ತೆಗಳನ್ನೂ ನಿರ್ಬಂಧಿಸಿಲ್ಲ, ದೆಹಲಿ-ಘಾಜಿಯಾಪುರ ರಸ್ತೆಯಲ್ಲಿ ಸಂಚರಿಸುತ್ತಿದ್ದ ವಾಹನ ಸವಾರರೊಂದಿಗೆ ಮಾತನಾಡುತ್ತಿದ್ದೆವು, ಅವರುಗಳು ಮನೆಗಳಲ್ಲಿಯೂ ರೈತರ ವಿಷಯಗಳನ್ನು ಮಾತನಾಡಬೇಕೆಂದು ರಾಕೇಶ್ ಟಿಕೈಟ್ ಹೇಳಿದ್ದಾರೆ.
Advertisement