ಪ್ರಧಾನಿ ನರೇಂದ್ರ ಮೋದಿ
ದೇಶ
ವಿಶ್ವಭಾರತಿ ವಿವಿ ಶತಮಾನೋತ್ಸವ: ನಾಳೆ ಮೋದಿ ಭಾಗಿ
ಪಶ್ಚಿಮ ಬಂಗಾಳದ ವಿಶ್ವಭಾರತಿ ವಿಶ್ವವಿದ್ಯಾಲಯದ ಶತಮಾನೋತ್ಸವ ಸಮಾರಂಭದ ಗುರುವಾರ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಲಿದ್ದಾರೆ.
ನವದೆಹಲಿ: ಪಶ್ಚಿಮ ಬಂಗಾಳದ ವಿಶ್ವಭಾರತಿ ವಿಶ್ವವಿದ್ಯಾಲಯದ ಶತಮಾನೋತ್ಸವ ಸಮಾರಂಭದ ಗುರುವಾರ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಲಿದ್ದಾರೆ.
ವಿಡಿಯೋ ಕಾನ್ಫರೆನ್ಸ್ ಮೂಲಕ ಶತಮಾನೋತ್ಸವ ಸಮಾರಂಭ ಉದ್ದೇಶಿ ಮಾತನಾಡಲಿದ್ದಾರೆ. ಮೋದಿ ಅವರು ಈ ವಿ.ವಿಯ ಕುಲಾಧಿಪತಿಗಳೂ ಸಹ ಆಗಿದ್ದಾರೆ. ಪಶ್ಚಿಮ ಬಂಗಾಳ ರಾಜ್ಯಪಾಲರು ಮತ್ತು ಕೇಂದ್ರ ಶಿಕ್ಷಣ ಸಚಿವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಕಳೆದ 1921 ರಲ್ಲಿ ಗುರು ರವೀಂದ್ರ ಟ್ಯಾಗೋರರು ಈ ವಿವಿ ಸ್ಥಾಪಿಸಿದ್ದರು. ವಿಶ್ವ ಭಾರತಿಯನ್ನು 1951 ರ ಮೇ ತಿಂಗಳಲ್ಲಿ ಶಾಸನಬದ್ಧವಾಗಿ ಕೇಂದ್ರ ವಿಶ್ವವಿದ್ಯಾಲಯ ಮತ್ತು ರಾಷ್ಟ್ರೀಯ ಮಹತ್ವದ ಸಂಸ್ಥೆ ಎಂದು ಘೋಷಿಸಲಾಯಿತು. ಆಧುನಿಕ ವಿಶ್ವ ವಿದ್ಯಾಲಯಗಳಂತೆ ಕ್ರಮೇಣ ಬದಲಾದರೂ ಈ ವಿಶ್ವವಿದ್ಯಾಲಯ ಗುರುದೇವ ಟ್ಯಾಗೋರರ ಶಿಕ್ಷಣ ನೀತಿಯನ್ನು ಅನುಸರಿಸುತ್ತಿರುವುದು ವಿಶೇಷವಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ