ರೈತರ ಪ್ರತಿಭಟನೆಯಲ್ಲಿ ಭಾಗಿಯಾಗುವುದಕ್ಕಾಗಿ ದೀರ್ಘಕಾಲ ಭಾರತದಲ್ಲೇ ಉಳಿಯಲಿದ್ದಾರೆ ಕೆನಡಾ ವ್ಯಕ್ತಿ

ಮೂರು ಹೊಸ ಕೃಷಿ ಕಾನೂನುಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ಕಳೆದ ಒಂದು ತಿಂಗಳಿಂದ ದೆಹಲಿ ಗಡಿಯಲ್ಲಿ ರೈತರು ಬೃಹತ್ ಪ್ರತಿಭಟನೆ ನಡೆಸುತ್ತಿದ್ದು, ಈ ಪ್ರತಿಭಟನೆಯಲ್ಲಿ ಭಾಗವಹಿಸುವುದಕ್ಕಾಗಿ ಒಂದು ವಾರದ ಹಿಂದೆ...
ರೈತರ ಪ್ರತಿಭಟನೆ
ರೈತರ ಪ್ರತಿಭಟನೆ

ನವದೆಹಲಿ: ಮೂರು ಹೊಸ ಕೃಷಿ ಕಾನೂನುಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ಕಳೆದ ಒಂದು ತಿಂಗಳಿಂದ ದೆಹಲಿ ಗಡಿಯಲ್ಲಿ ರೈತರು ಬೃಹತ್ ಪ್ರತಿಭಟನೆ ನಡೆಸುತ್ತಿದ್ದು, ಈ ಪ್ರತಿಭಟನೆಯಲ್ಲಿ ಭಾಗವಹಿಸುವುದಕ್ಕಾಗಿ ಒಂದು ವಾರದ ಹಿಂದೆ ಭಾರತಕ್ಕೆ ಆಗಮಿಸಿದ ಕೆನಡಾ ವ್ಯಕ್ತಿಯೊಬ್ಬರು, ಆಂದೋಲನದಲ್ಲಿ ಭಾಗವಹಿಸುವ ಉದ್ದೇಶದಿಂದ ದೀರ್ಘಕಾಲ ಇಲ್ಲಿಯೇ ಉಳಿಯುವ ಆಲೋಚನೆ ಮಾಡಿದ್ದಾರೆ.

ಕಳೆದ 30 ವರ್ಷಗಳಿಂದ ಟೊರೊಂಟೊದಲ್ಲಿ ಉದ್ಯಮಿಯಾಗಿರುವ ಗುರ್ಬಕ್ಷ್ ಸಿಂಗ್ ಅವರು ಕಳೆದ ವಾರ ಭಾರತಕ್ಕೆ ಬಂದಿದ್ದು, ಸಾವಿರಾರು ರೈತ ಕುಟುಂಬಗಳ "ಭೂ ಮಾಲೀಕತ್ವಕ್ಕೆ ಧಕ್ಕೆ ತರುವ" ಮೂರು ಹೊಸ ಕೃಷಿ ಕಾನೂನುಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.

"ಮುಂದಿನ ವಾರ ನನ್ನ ರಿಟರ್ನ್ ಟಿಕೆಟ್ ಕಾಯ್ದಿರಿಸಲಾಗಿದೆ. ಆದರೆ ಇದೆಲ್ಲವನ್ನೂ ನೋಡಿದ ನಂತರ, ನಾನು ಇಲ್ಲಿಯೇ ಇರಬೇಕೆ ಎಂದು ಯೋಚಿಸುತ್ತಿದ್ದೇನೆ" ಎಂದು ಮೂಲತಃ ಪಂಜಾಬ್‌ನ ನವಾಶಹರ್ ಗ್ರಾಮದ ಗುರ್ಬಕ್ಷ್ ಸಿಂಗ್ ಅವರು ಹೇಳಿದ್ದಾರೆ.

ಗುರ್ಬಕ್ಷ್ ಸಿಂಗ್ ಅವರು ನವಾ ಶಹರ್‌ನಲ್ಲಿರುವ ತಮ್ಮ ಪೂರ್ವಜರ ಮನೆಯಲ್ಲಿ ವಾಸಿಸುತ್ತಿದ್ದು, ಪ್ರತಿ ಎರಡು ದಿನಗಳಿಗೊಮ್ಮೆ ರೈತರ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡುತ್ತಿದ್ದಾರೆ.

ನಾನು ರೈತ ಕುಟುಂಬದಿಂದ ಬಂದವನು ಎಂಬ ಕಾರಣಕ್ಕೆ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ಅವಶ್ಯಕತೆ ಇದೆ ಅಂತ ಅಲ್ಲ. ಆದರೆ ಇದರಿಂದ ದೇಶದ ಪ್ರಮುಖ ನಾಗರಿಕರಿಗೆ ಅನ್ಯಾಯವಾಗಿದೆ ಎಂದು ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com