ಹರ್ಯಾಣದ ಬಹುತೇಕ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹಕ್ಕೆ ರೈತರಿಂದ ತಡೆ

ಕೃಷಿ ಕಾಯ್ದೆ ವಿರೋಧಿಸಿ ಭಾರತೀಯ ಕಿಸಾನ್ ಯೂನಿಯನ್ ನೀಡಿರುವ ಕರೆಗೆ ಓಗೊಟ್ಟಿರುವ ರೈತರು ಹರ್ಯಾಣದ ಬಹುತೇಕ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹವನ್ನು ತಡೆದಿದ್ದಾರೆ. 
ಹರ್ಯಾಣದ ಬಹುತೇಕ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹ ತಡೆದ ರೈತರು
ಹರ್ಯಾಣದ ಬಹುತೇಕ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹ ತಡೆದ ರೈತರು

ಹರ್ಯಾಣ: ಕೃಷಿ ಕಾಯ್ದೆ ವಿರೋಧಿಸಿ ಭಾರತೀಯ ಕಿಸಾನ್ ಯೂನಿಯನ್ ನೀಡಿರುವ ಕರೆಗೆ ಓಗೊಟ್ಟಿರುವ ರೈತರು ಹರ್ಯಾಣದ ಬಹುತೇಕ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹವನ್ನು ತಡೆದಿದ್ದಾರೆ. 

ಕಳೆದ ಮಧ್ಯರಾತ್ರಿಯಿಂದ ಟೋಲ್ ಸಂಗ್ರಹ ಸ್ಥಗಿತಗೊಂಡಿದ್ದು,  ಅಧಿಕಾರಿಗಳನ್ನು ಟೋಲ್ ಸಂಗ್ರಹ ಮಾಡದಂತೆ ತಡೆದಿದ್ದಾರೆ. ಯಾವುದೇ ಶುಲ್ಕ ನೀಡದೇ ಹಾದು ಹೋಗುವಂತೆ ಮಾಡಿದ್ದಾರೆ. 

ಕೆಲವು ದಿನಗಳ ಹಿಂದೆ ಭಾರತೀಯ ಕಿಸಾನ್ ಯೂನಿಯನ್ ಹರ್ಯಾಣದ ರೈತರಿಗೆ ಡಿ.25-27 ವರೆಗೆ ಟೋಲ್ ಸಂಗ್ರಹ ಸ್ಥಗಿತಗೊಳಿಸುವಂತೆ ಕರೆ ನೀಡಿತ್ತು. ಕರ್ನಾಲ್ ನ ಬಸ್ತಾರಾ ಟೋಲ್ ಪ್ಲಾಜಾ ಎನ್ ಹೆಚ್-44, ಕರ್ನಾಲ್-ಜಿಂದ್ ಹೆದ್ದಾರಿ, ಕುಹಿಯಾನ್ ಮಲ್ಕಾನಾ ಟೋಲ್ ಪ್ಲಾಜಾ, ಗಳಲ್ಲಿ ರೈತರು ಟೋಲ್ ಸಂಗ್ರಹವನ್ನು ತಡೆದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com