ಆಲಯ ಪ್ರವೇಶಕ್ಕೆ ಕೋವಿಡ್ ನೆಗೆಟಿವ್ ಪ್ರಮಾಣಪತ್ರ ಕಡ್ಡಾಯ: ಕಿರಣ್ ಬೇಡಿ ವಿರುದ್ಧ 'ಅಧಿಕಾರ ದುರುಪಯೋಗ ಆರೋಪ  ಮಾಡಿದ ಪುದುಚೇರಿ ಸಿಎಂ

ಶನಿ ಪಯರ್ಚಿ ಹಬ್ಬ ಪ್ರಾರಂಭವಾಗುವುದಕ್ಕೆ ಕೇವಲ 48 ಗಂಟೆಗಳ ಮೊದಲು ತಿರುನಲ್ಲಾರ್ ಶನಿಶ್ಚರ' ದೇವಸ್ಥಾನಕ್ಕೆ ಪ್ರವೇಶಿಸಲು ಕೋವಿಡ್ ನೆಗೆಟಿವ್ ಪ್ರಮಾಣಪತ್ರವನ್ನು ಕಡ್ಡಾಯಗೊಳಿಸುವ ಮೂಲಕ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಹಿಂದೂಗಳ ಹಿತಾಸಕ್ತಿಗೆ ವಿರುದ್ಧವಾಗಿ ವರ್ತಿಸಿದ್ದಾರೆ ಎಂದು ಪುದುಚೇರಿ ಮುಖ್ಯಮಂತ್ರಿ ವಿ ನಾರಾಯಣಸಾಮಿ ಆರೋಪಿದ್ದಾರೆ. ಇದು . ಗವರ್ನರ್ ಅವರ
ಸಿಎಂ ನಾರಾಯಣ ಸ್ವಾಮಿ ಹಾಗೂ ಲೆ. ಗವರ್ನರ್ ಕಿರಣ್ ಬೇಡಿ
ಸಿಎಂ ನಾರಾಯಣ ಸ್ವಾಮಿ ಹಾಗೂ ಲೆ. ಗವರ್ನರ್ ಕಿರಣ್ ಬೇಡಿ
Updated on

ಪುದುಚೇರಿ: ಶನಿ ಪಯರ್ಚಿ ಹಬ್ಬ ಪ್ರಾರಂಭವಾಗುವುದಕ್ಕೆ ಕೇವಲ 48 ಗಂಟೆಗಳ ಮೊದಲು ತಿರುನಲ್ಲಾರ್ ಶನಿಶ್ಚರ' ದೇವಸ್ಥಾನಕ್ಕೆ ಪ್ರವೇಶಿಸಲು ಕೋವಿಡ್ ನೆಗೆಟಿವ್ ಪ್ರಮಾಣಪತ್ರವನ್ನು ಕಡ್ಡಾಯಗೊಳಿಸುವ ಮೂಲಕ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಹಿಂದೂಗಳ ಹಿತಾಸಕ್ತಿಗೆ ವಿರುದ್ಧವಾಗಿ ವರ್ತಿಸಿದ್ದಾರೆ ಎಂದು ಪುದುಚೇರಿ ಮುಖ್ಯಮಂತ್ರಿ ವಿ ನಾರಾಯಣಸಾಮಿ ಆರೋಪಿದ್ದಾರೆ. ಇದು . ಗವರ್ನರ್ ಅವರ 'ಅಧಿಕಾರದ ದುರುಪಯೋಗ' ಎಂದು ಅವರು ಹೇಳಿದ್ದಾರೆ.

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ನಾರಾಯಣಸಾಮಿ, ಪುದುಚೇರಿಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಕಡಿಮೆ ಪ್ರಮಾಣದಲ್ಲಿರುವಾಗ ಕೋವಿಡ್ ನೆಗೆಟಿವ್ ಪ್ರಮಾಣಪತ್ರದ ಅವಶ್ಯಕತೆ ಏನೆಂದು ಪ್ರಶ್ನಿಸಿದ್ದಾರೆ. ಅಲ್ಲದೆ ಇಂತಹಾ ಯಾವ ನಿರ್ಬಂಧವಿಲ್ಲದೆಯೂ ಹೈಕೋರ್ಟ್ ಹಬ್ಬದಾಚರಣೆಗೆ ಅನುಮತಿ ನೀಡಿದೆ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ.

"ಮೊದಲ ದಿನ ದೇವಾಲಯ ಭೇಟಿಗಾಗಿ ತಮ್ಮನ್ನು ನೋಂದಾಯಿಸಿಕೊಂಡ ಮತ್ತು ದೇವಾಲಯದ ಆಡಳಿತದಿಂದ ಅನುಮತಿ ಪಡೆದ 17,000 ಭಕ್ತರಿಗೆ ಇಷ್ಟು ಕಡಿಮೆ ಅವಧಿಯಲ್ಲಿ ಪರೀಕ್ಷೆ ನಡೆಸಲು ಹಾಗೂ ಕೋವಿಡ್ ನೆಗೆಟಿವ್ ಮಾಣಪತ್ರವನ್ನು ನೀಡಲು ಹೇಗೆ ಸಾಧ್ಯ?", ಎಂದು ಅವರು ಕೇಳಿದರು. ಅವರು ತಮ್ಮ ಭೇಟಿಯನ್ನು  ರದ್ದು ಮಾಡುವುದು ಬಿಟ್ಟು ಬೇರೆ ಮಾರ್ಗವಿಲ್ಲ. ಇದು ಹಿಂದೂಗಳ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ತರುತ್ತದೆ, ಕೋವಿಡ್ ನೆಗೆಟಿವ್ ಪ್ರಮಾಣಪತ್ರದ ನಿರ್ಧಾರವನ್ನು ಮೊದಲೇ ತೆಗೆದುಕೊಂಡಿದ್ದಾದರೆ ಭಕ್ತರಿಗೆ ಸಾಕಷ್ಟು ಸಮಯಾವಕಾಶ ಸಿಕ್ಕುತ್ತಿತ್ತು." ನಾರಾಯಣಸ್ವಾಮಿ ಹೇಳಿದರು.

ತಿರುಪತಿ ದೇವಾಲಯದ ಉದಾಹರಣೆಯನ್ನು ನೀಡಿದ ಸಿಎಂಅಲ್ಲಿ ಕಡ್ಡಾಯವಾಗಿ ಕೋವಿಡ್ ನೆಗೆಟಿವ್ ಪ್ರಮಾಣಪತ್ರಗಳ ಅಗತ್ಯವಿಲ್ಲ, ಪ್ರತಿದಿನ ಹೆಚ್ಚಿನ ಸಂಖ್ಯೆಯ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ತಿರುಪತಿಯಂತೆಯೇ, ಥರ್ಮಲ್ ಸ್ಕ್ರೀನಿಂಗ್, ಮಾಸ್ಕ್ ಮತ್ತು ಸಾಮಾಜಿಕ ಅಂತರದ ಮೂಲ ಮುನ್ನೆಚ್ಚರಿಕೆ ತೆಗೆದುಕೊಳ್ಳಲಾಗುವುದುಎಂದು ಅವರು ಹೇಳಿದರು.

ಕೋವಿಡ್ ನೆಗೆಟಿವ್ ಪ್ರಮಾಣಪತ್ರಗಳ ಆದೇಶವನ್ನು ಲೆ. ಗವರ್ನರ್ ಹಿಂಪಡೆಯಬೇಕು.ಈ ನಿಬಂಧನೆಯ ವಿರುದ್ಧ ಕಾರೈಕಲ್‌ನಲ್ಲಿ ಜನರು ಆಕ್ರೋಶ ವ್ಯಕ್ತಪಡಿಸುತ್ತಿರುವುದರಿಂದ, ಶಾಂತಿಯುತ ಪುದುಚೇರಿಯಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾದರೆ  ಅದಕ್ಕೆ ಬೇಡಿಯವರೇ ಜವಾಬ್ದಾರಿಯನ್ನು ಹೊತ್ತುಕೊಳ್ಳಬೇಕಾಗುತ್ತದೆ.

ಬೇಡಿಯವರು ಧಾರ್ಮಿಕ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುವ ಮೂಲಕ ಹಬ್ಬವನ್ನು ನಿಲ್ಲಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ನಾರಾಯಣಸ್ವಾಮಿ ಆರೋಪಿಸಿದ್ದಾರೆ.ಈ ವಿಷಯದಲ್ಲಿ ಬಿಜೆಪಿಯ ಸ್ಥಳೀಯ ಘಟಕ ಮತ್ತು ಕೇಂದ್ರ ಸರ್ಕಾರದ ಮೌನವನ್ನು ಪ್ರಶ್ನಿಸಿದ ಅವರು, ಸುಮ್ಮನೆ ನೋಡುವ ಬದಲು, ಲೆ. ಗವರ್ನರ್ "ಅಧಿಕಾರದುರುಪಯೋಗ"ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com