ಮೋಟಾರು ವಾಹನ ಚಾಲನಾ ಪರವಾನಗಿ ಮಾರ್ಚ್ 31 ವರೆಗೆ ವಿಸ್ತರಣೆ

ಮೋಟಾರು ವಾಹನ ದಾಖಲಾತಿಗಳಾದ ಚಾಲನಾ ಪರವಾನಗಿ (ಡ್ರೈವಿಂಗ್ ಲೈಸೆನ್ಸ್ ಅಥವಾ ಡಿ.ಎಲ್.), ರಿಜಿಸ್ಟ್ರೇಷನ್ ಪ್ರಮಾಣಪತ್ರ (ಆರ್.ಸಿ.) ಮತ್ತು ಪರ್ಮಿಟ್ ಗಳ ಮಾನ್ಯತೆಯನ್ನು ಮುಂದಿನ ವರ್ಷದ ಮಾರ್ಚ್ 31, ವರೆಗೆ ಕೇಂದ್ರ ಸಾರಿಗೆ ಸಚಿವಾಲಯ ವಿಸ್ತರಿಸಿದೆ.
ಸಂಚಾರಿ ಪೊಲೀಸ್
ಸಂಚಾರಿ ಪೊಲೀಸ್
Updated on

ನವದೆಹಲಿ: ಮೋಟಾರು ವಾಹನ ದಾಖಲಾತಿಗಳಾದ ಚಾಲನಾ ಪರವಾನಗಿ (ಡ್ರೈವಿಂಗ್ ಲೈಸೆನ್ಸ್ ಅಥವಾ ಡಿ.ಎಲ್.), ರಿಜಿಸ್ಟ್ರೇಷನ್ ಪ್ರಮಾಣಪತ್ರ (ಆರ್.ಸಿ.) ಮತ್ತು ಪರ್ಮಿಟ್ ಗಳ ಮಾನ್ಯತೆಯನ್ನು ಮುಂದಿನ ವರ್ಷದ ಮಾರ್ಚ್ 31, ವರೆಗೆ ಕೇಂದ್ರ ಸಾರಿಗೆ ಸಚಿವಾಲಯ ವಿಸ್ತರಿಸಿದೆ.

ಹೌದು.. ಕೊರೊನಾ ವೈರಸ್​ ಎರಡನೇ ಅಲೆ ಹರಡುವ ಭೀತಿ ಎಲ್ಲೆಡೆ ಹೆಚ್ಚಾಗಿದೆ. ಈಗಾಗಲೇ ಇಂಗ್ಲೆಂಡ್​ನಿಂದ ಬಂದ ಸಾಕಷ್ಟು ಜನರಲ್ಲಿ ಹೊಸ ವಿಧದ ಕೊರೊನಾ ವೈರಾಣು ಕಾಣಿಸಿಕೊಂಡಿದೆ. ಈ ಕಾರಣಕ್ಕೆ ವಾಹನಕ್ಕೆ ಸಂಬಂಧಿಸಿದ ಪ್ರಮಾಣ ಪತ್ರಗಳ ಸಿಂಧುತ್ವ ವಿಸ್ತರಿಸುವ ನಿರ್ಧಾರಕ್ಕೆ ಕೇಂದ್ರ ಸರ್ಕಾರ  ಬಂದಿದ್ದು, ಅದರಂತೆ ಮಾರ್ಚ್​​ 31ರವರೆಗೂ ಸಿಂಧುತ್ವ ವಿಸ್ತರಿಸಲಾಗಿದೆ. 2020ರ ಫೆಬ್ರುವರಿ 1ರಿಂದ ಮಾನ್ಯತೆ ಅವಧಿ ಮುಕ್ತಾಯಗೊಂಡಿರುವ ದಾಖಲೆಗಳಿಗೆ ಇದು ಅನ್ವಯವಾಗಲಿದೆ. ಈ ವರ್ಷ ಮಾರ್ಚ್‌ನಿಂದ ಸಾರಿಗೆ ಸಚಿವಾಲಯವು ನಾಲ್ಕನೇ ಬಾರಿಗೆ ವಾಹನ ದಾಖಲೆಗಳ ಸಿಂಧುತ್ವ ಅವಧಿ ವಿಸ್ತರಿಸಿ  ನಿರ್ದೇಶನ ನೀಡಿದೆ.

ಅಂತೆಯೇ ಫೆಬ್ರವರಿ ಒಳಗೆ ಉಳಿದ ದಾಖಲೆಗಳನ್ನು ನವೀಕರಿಸುವಲ್ಲಿ ವಿಳಂಬವಾದರೆ ಯಾವುದೇ ದಂಡ ವಿಧಿಸುವುದಿಲ್ಲ ಎಂದೂ ಸರ್ಕಾರ ಹೇಳಿದೆ. ಈ ಮೊದಲು ಡಿಸೆಂಬರ್ 31ರೊಳಗೆ ಎಲ್ಲಾ ದಾಖಲೆಗಳನ್ನು ನೀಡಲು ತಿಳಿಸಲಾಗಿತ್ತು.ಹಾಗೆಯೇ ವಾಹನ ನೋಂದಣಿ ನೀತಿ ಸುಧಾರಣೆಗೆ ಅಧಿಸೂಚನೆ  ಪ್ರಕಟಿಸಲಾಗಿದೆ. ವಿಶೇಷ ಚೇತನರಿಗೆ ವಾಹನ ಮಾಲಿಕತ್ವ ಸಮಸ್ಯೆಗೆ ಪರಿಹಾರ ನೀಡಲು ಹಳೆಯ ಕಾಯ್ದೆಯಲ್ಲಿ ವಾಹನ ಮಾಲಿಕತ್ವ ಕುರಿತಂತೆ ಸ್ಪಷ್ಟವಾಗಿ ನಮೂದಿಸಲು ಅವಕಾಶ ಇರಲಿಲ್ಲ. ಇದರಿಂದಾಗಿ ವಿಶೇಷ ಹಣಕಾಸು ನೆರವು, ಯೋಜನೆಗಳ ಸೌಲಭ್ಯ ಪಡೆಯುವುದು ಕಷ್ಟವಾಗಿತ್ತು. ಈಗ ಮೋಟಾರು  ವಾಹನಗಳ ದಾಖಲಾತಿಗಳಲ್ಲಿ ಮಾಲಿಕತ್ವದ ವಿವರಗಳಿಗೆ ಸಂಬಂಧಿಸಿದಂತೆ ವಾಹನ ನೋಂದಣಿ ನೀತಿ ಸುಧಾರಣೆಗೆ ಸಾರಿಗೆ ಸಚಿವಾಲಯ ಸಧಿಸೂಚನೆಯನ್ನು ಕೂಡ ಈಗಾಗಲೇ ಪ್ರಕಟಿಸಿದೆ. ಮೋಟಾರು ವಾಹನ ನಿಯಮಾವಳಿಗಳಿಗೆ ತಿದ್ದುಪಡಿ ಹೊರಡಿಸಲಾಗಿದ್ದು, ಇದರಿಂದ ಮುಖ್ಯವಾಗಿ ವಿಶೇಷಚೇತನರಿಗೆ  ಉಪಯೋಗವಾಗಲಿದೆ ಎಂದು ಹೇಳಲಾಗಿದೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com