ವಾಹನಗಳ ಮುಂಭಾಗದ ಪ್ರಯಾಣಿಕ ಸೀಟ್ ಗಳಲ್ಲಿ ಏರ್ ಬ್ಯಾಗ್ ಕಡ್ಡಾಯಗೊಳಿಸಲು ಸರ್ಕಾರದ ಪ್ರಸ್ತಾವನೆ 

ವಾಹನಗಳ ಮುಂಭಾಗದ ಸೀಟ್ ಗಳಲ್ಲಿ ಏರ್ ಬ್ಯಾಗ್ ನ್ನು ಕಡ್ಡಾಯಗೊಳಿಸುವುದಕ್ಕೆ ಪ್ರಸ್ತಾವನೆ ಇದೆ ಎಂದು ಸರ್ಕಾರ ಹೇಳಿದೆ. 
ವಾಹನಗಳ ಮುಂಭಾಗದ ಪ್ರಯಾಣಿಕ ಸೀಟ್ ಗಳಲ್ಲಿ ಏರ್ ಬ್ಯಾಗ್ ಕಡ್ಡಾಯಗೊಳಿಸಲು ಸರ್ಕಾರದ ಪ್ರಸ್ತಾವನೆ
ವಾಹನಗಳ ಮುಂಭಾಗದ ಪ್ರಯಾಣಿಕ ಸೀಟ್ ಗಳಲ್ಲಿ ಏರ್ ಬ್ಯಾಗ್ ಕಡ್ಡಾಯಗೊಳಿಸಲು ಸರ್ಕಾರದ ಪ್ರಸ್ತಾವನೆ

ನವದೆಹಲಿ: ವಾಹನಗಳ ಮುಂಭಾಗದ ಸೀಟ್ ಗಳಲ್ಲಿ ಏರ್ ಬ್ಯಾಗ್ ನ್ನು ಕಡ್ಡಾಯಗೊಳಿಸುವುದಕ್ಕೆ ಪ್ರಸ್ತಾವನೆ ಇದೆ ಎಂದು ಸರ್ಕಾರ ಹೇಳಿದೆ. ಅಪಘಾತ ಉಂಟಾದಾಗ ಪ್ರಯಾಣಿಕರ ಸುರಕ್ಷತೆಯನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ಈ ಕ್ರಮಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ. 

ರಸ್ತೆ ಸಾರಿಗೆ ಸಚಿವಾಲಯ ಈ ಸಂಬಂಧ ಅಧಿಸೂಚನೆಯ ಕರಡನ್ನು ತಯಾರಿಸಿದೆ ಎಂದು ಸಚಿವಾಲಯ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ. 

ಹೊಸ ಕಾರು, ವಾಹನಗಳಲ್ಲಿ ಏ.1, 2021 ರಿಂದ ಪ್ರಸ್ತಾವಿತ ಕಾನೂನು ಜಾರಿಗೆ ತರುವುದಕ್ಕೆ ನಿರ್ಧರಿಸಲಾಗಿದ್ದು, ಈಗಿರುವ ಮಾದರಿಯ ವಾಹನಗಳಲ್ಲಿ ಜೂ.1, 2021 ರಿಂದ ಇದನ್ನು ಜಾರಿಗೆ ತರಬೇಕಾಗುತ್ತದೆ. ಈ ಬಗ್ಗೆ ಸಂಬಂಧಪಟ್ಟವರಿಂದ ಸಲಹೆ, ಅಭಿಪ್ರಾಯಗಳನ್ನೂ ಸಚಿವಾಲಯ ಸಂಗ್ರಹಿಸಲು ಮುಂದಾಗಿದ್ದು, morth@gov.in ನಲ್ಲಿ 30 ದಿನಗಳ ಒಳಗಾಗಿ ಸಲ್ಲಿಸಬಹುದಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com